ತುಮಕೂರು | ಕಲ್ಪತರು ನಾಡಿನ ಜನತೆ ಕಳೆದ ಹಲವಾರು ವರ್ಷಗಳಿಂದ ತಿಪಟೂರು ಜಿಲ್ಲೆ (Tiptur District) ಹೋರಾಟವನ್ನು ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ನಾವೂ ಬೆಂಬಲ ನೀಡುತ್ತೇವೆ ಎಂದು ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಸ್ಪಷ್ಟಪಡಿಸಿದ್ದಾರೆ. ಟೀಮ್ ಹಲ್ಕ್ ವತಿಯಿಂದ ಜಿ.ಕೆ ಎಂ ನಗರದಲ್ಲಿ ಆಯೋಜಿಸಲಾದ ‘ಮಿಸ್ಟರ್ ತಿಪಟೂರು ದೇಹದಾಟ್ಯ ಸ್ಪರ್ಧೆ’ ಉದ್ಘಾಟನೆಯನ್ನು ಅವರು ಮಾಡಿದರು.
ಯಾವ ಯಾವ ತಾಲೂಕುಗಳು ತಿಪಟೂರು ಜಿಲ್ಲೆಗೆ (Tiptur District) ಸೇರಬೇಕು..?
ತಿಪಟೂರು (Tiptur District), ಅರಸೀಕೆರೆ, ಚನ್ನರಾಯಪಟ್ಟಣ, ಚಿಕ್ಕನಾಯ್ಕನಹಳ್ಳಿ ಹಾಗೂ ತುರುವೇಕೆರೆ ಸೇರಿದಂತೆ ಸುತ್ತಮುತ್ತಲ ಭಾಗಗಳ ಜನತೆ ತಿಪಟೂರು ಜಿಲ್ಲೆಯಾಗಬೇಕೆಂಬ ಒತ್ತಾಸೆಯೊಂದಿಗೆ ಹೋರಾಟ ನಡೆಸುತ್ತಿದ್ದಾರೆ. ಯಾವಾಗ ಸೂಕ್ತ ಸಮಯ ಬರುತ್ತದೋ, ಎಲ್ಲಾ ಶಾಸಕರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಶಿವಲಿಂಗೇಗೌಡ ಹೇಳಿದರು.
ಇದನ್ನು ಓದಿ : Criminal Law India | ಕೊಲೆ ಪ್ರಕರಣದ ದೂರು ನ್ಯಾಯಾಲಯಕ್ಕೆ ನೀಡಬಹುದೇ..?
ಈ ವೇಳೆ ಅವರು ತೆಂಗಿನಕಾಯಿಯ ಬೆಲೆ ಕುಸಿತ, ರೋಗಬಾಧೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕೊಬ್ಬರಿ ಬೆಲೆಯಲ್ಲಿ ಭರವಸೆ ಮೂಡಿದರೂ, ಕೆಂಪು ಹುಳು, ಬಿಳಿ ನೊಣ ಹಾವಳಿ ರೈತರನ್ನು ಆತಂಕಕ್ಕೆ ದೂಡಿದೆ. ತಜ್ಞರ ತಂಡವೊಂದು ಕೇರಳದಿಂದ ಆಗಮಿಸಿ ಪರಿಸ್ಥಿತಿ ಪರಿಶೀಲಿಸಿದ್ದು, ಕನಿಷ್ಠ ₹250-₹300 ಕೋಟಿ ವೆಚ್ಚವಾದರೂ ರೋಗ ನಿವಾರಣೆಗೆ ಅಗತ್ಯವಿದೆ. ಸರ್ಕಾರದ ಪ್ರಸ್ತುತ ಅನುದಾನ ಸಾಲುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೆಂಬಲ ಅತ್ಯಾವಶ್ಯಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮದ ಮಹತ್ವವನ್ನು ತಿಳಿಸಿದ ಶಾಸಕರು, ಯುವಕರು ದುಶ್ಚಟಗಳಿಂದ ದೂರವಿದ್ದು ದೇಹಾರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ನಿವೃತ್ತ ಎಸಿಪಿ ಲೋಕೇಶ್ವರ್ ಅವರು ಸಹ ಮಾತನಾಡಿ ಯುವಕರು ಕ್ರೀಡೆಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು.