Biklu Shiva Case | ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ನಟಿ ರಚಿತಾ ರಾಮ್ ಹೆಸರು..!

ಬೆಂಗಳೂರು | ನಗರದ ಕುಖ್ಯಾತ ರೌಡಿಶೀಟರ್ ಬಿಕ್ಲು ಶಿವನ (Biklu Shiva Case) ಭೀಕರ ಹತ್ಯೆ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಹೊಸ ಹೊಸ ಮಾಹಿತಿ ಪತ್ತೆ ಹಚ್ಚಲಾಗುತ್ತಿದೆ. ಈ ಕೇಸ್‌ನ ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್ ಜಗ್ಗ, ಕೆಲ ಸಿನಿಮಾ ನಟ-ನಟಿಯರೊಂದಿಗೆ ನಂಟು ಹೊಂದಿದ್ದಾನೆ ಎಂಬ ಸಂಗತಿ ಇದೀಗ ಬಹಿರಂಗವಾಗಿದೆ.

ಬಿಕ್ಲು ಶಿವ (Biklu Shiva Case) ಕೊಲೆ ಪ್ರಕರಣದಲ್ಲಿ ನಟಿ ರಚಿತಾರಾಮ್‌ ಹೆಸರು

ಜಗ್ಗ ನಟಿ ರಚಿತಾರಾಮ್ ಗೆ ಸೀರೆ ಮತ್ತು ಒಡವೆಗಳನ್ನು ಗಿಫ್ಟ್ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಚಾರ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಆದರೆ, ನಟಿಯ ಆಪ್ತ ಮೂಲಗಳ ಪ್ರಕಾರ, ಈ ಫೋಟೋಗಳು ‘ರವಿ ಬೋಪಣ್ಣ’ ಚಿತ್ರದ ಸಂದರ್ಭದಲ್ಲಿ ತೆಗೆದವುಗಳು ಎಂದು ಸ್ಪಷ್ಟಪಡಿಸಲಾಗಿದೆ. ಜಗ್ಗ ಈ ಗಿಫ್ಟ್ ನೀಡಿಲ್ಲ, ಚಿತ್ರ ತಂಡವೇ ಕೊಟ್ಟಿದು ಎಂದು ತಿಳಿಸಲಾಗಿದೆ.

ಜಗ್ಗನ ಮೇಲೆ ಪೊಲೀಸ್ ದಾಳಿ ನಡೆಸಿದ್ದು, ಲೈಸೆನ್ಸ್ ಹೊಂದಿದ ಪಿಸ್ತೂಲ್ ಮತ್ತು ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆಯಲ್ಲಿ ಬಯಲಾಗಿರುವಂತೆ, ಆರೋಪಿ ಕಿರಣ್ ಕೊಲೆಗಾಗಿ ಹುಡುಗರನ್ನು ತಯಾರಿಸಿದ್ದು, ಪ್ಯಾಟ್ರಿಕ್ ಎಂಬ ಮತ್ತೊಬ್ಬ ಆರೋಪಿ ತಮಿಳು ಮೂಲದ ಗ್ಯಾಂಗ್‌ನವರನ್ನು ಸಿದ್ದಪಡಿಸಿದ್ದ. ಅವರು ಬಿಕ್ಲು ಶಿವನನ್ನು (Biklu Shiva Case) ನಿರ್ದಯವಾಗಿ ಕೊಲೆ ಮಾಡಿದ್ದಾರೆ.

ಇದನ್ನು ಓದಿ : DK Shivakumar | ಮೂರು ದಿನಗಳು ನಾನು ಯಾರನ್ನು ಭೇಟಿ ಮಾಡಲ್ಲ – ಡಿ ಕೆ ಶಿವಕುಮಾರ್

ಈ ಪ್ರಕರಣದ ಸಂಬಂಧ ಭೈರತಿ ಬಸವರಾಜ್ ಅವರ ಬಂಧನಕ್ಕೆ ಕಾಂಗ್ರೆಸ್ ಆಗ್ರಹಿಸಿದ್ದು, ಬಸವರಾಜ್ ಸಹೋದರನ ಮಗ ಅನಿಲ್ ಕೂಡಾ ವಿಚಾರಣೆಗೆ ಒಳಗಾಗಿದ್ದಾನೆ. ಹಲವು ರಾಜಕೀಯ ಮುಖಂಡರು ಮತ್ತು ಗ್ಯಾಂಗ್ ಸದಸ್ಯರ ಮೇಲೆ ಪ್ರಕರಣದ ಅಲೆ ಹರಡಿದೆ.

ಆರೋಪಿ ಕಿರಣ್ ಹೈಕೋರ್ಟ್ ಮೆಟ್ಟಿಲೇರಿದ್ದು, ಪೊಲೀಸರಿಂದ ಕಸ್ಟಡಿಯಲ್ಲಿ ಹಲ್ಲೆ, ಕಿರುಕುಳ ಎಂಬ ಆರೋಪ ಮಾಡಿದ್ದಾನೆ. ಹೀಗಾಗಿ ಹೈಕೋರ್ಟ್ ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವಂತೆ ಸೂಚಿಸಿದೆ.

Leave a Reply

Your email address will not be published. Required fields are marked *