Agriculture Law | ಕೃಷಿ ರಾಸಾಯನಿಕ ವಸ್ತುಗಳ ಕಳ್ಳಸಾಗಾಣಿಕೆ ಮಾಡಿದ್ರೆ ಜೈಲು ಫಿಕ್ಸ್..!

ನವದೆಹಲಿ | ಭಾರತದಲ್ಲಿ ಕೃಷಿ ಕ್ಷೇತ್ರದಲ್ಲಿ ಬಳಸುವ ರಾಸಾಯನಿಕ ವಸ್ತುಗಳ ಕಳ್ಳ ಸಾಗಾಣಿಕೆ, ಅಕ್ರಮ ವಿತರಣೆ ಹಾಗೂ ಪರವಾನಗಿ ಇಲ್ಲದೆ ಉಪಯೋಗಿಸುವುದು ಕಾನೂನುಬದ್ಧ (Agriculture Law) ಅಪರಾಧವಾಗಿದೆ. ಈ ರೀತಿಯ ಕೃತ್ಯಗಳನ್ನು ತಡೆಯಲು ಕೇಂದ್ರ ಸರ್ಕಾರ “ಭಾರತೀಯ ಫಲವತ್ತತೆ ನಿಯಮಾವಳಿ – 1985” (Fertilizer Control Order – FCO) ಹಾಗೂ “ಆವಶ್ಯಕ ವಸ್ತುಗಳು ಕಾಯ್ದೆ – 1955” (Essential Commodities Act – 1955) ಅಡಿಯಲ್ಲಿ ಕ್ರಮ ಕೈಗೊಳ್ಳುತ್ತದೆ.

(Agriculture Law) ಆರೋಪಿಗೆ 7 ವರ್ಷಗಳವರೆ ಶಿಕ್ಷೆ ಮತ್ತು ದಂಡ

ಈ ಕಾಯ್ದೆಗಳ ಪ್ರಕಾರ, ಯಾವುದೇ ವ್ಯಕ್ತಿ ಪರವಾನಗಿ ಇಲ್ಲದೆ ಯೂರಿಯಾ ಅಥವಾ ಇತರ ರಾಸಾಯನಿಕ ರಸಗೊಬ್ಬರಗಳನ್ನು ಸಂಗ್ರಹಿಸಿಕೊಳ್ಳುವುದು, ಸಾಗಾಣಿಕೆ ಮಾಡುವುದು ಅಥವಾ ಮಾರಾಟ ಮಾಡುವುದು ಕಠಿಣ ಅಪರಾಧ. ಅಪರಾಧ ನಿರೂಪಿತವಾದಲ್ಲಿ ಆರೋಪಿಗೆ ಶಿಕ್ಷೆಯಾಗಿ 7 ವರ್ಷ ವರೆಗೆ ಜೈಲು ಶಿಕ್ಷೆ ಅಥವಾ ದಂಡ, ಅಥವಾ ಎರಡೂ ವಿಧಿಸಲಾಗಬಹುದು.

ಇದನ್ನು ಓದಿ : Nutrition | ನೀವು ಆರೋಗ್ಯವಾಗಿ ಇರಬೇಕು ಅಂದ್ರೆ ಇದನ್ನು ಅನುಸರಿಸಿ..?

ಅಂದಹಾಗೆ, ಇಂತಹ ತಪ್ಪುಗಳು ಕೃಷಿಗೆ ಮಾತ್ರವಲ್ಲದೆ ಪರಿಸರಕ್ಕೂ ಭಾರೀ ಹಾನಿಯನ್ನುಂಟುಮಾಡುತ್ತವೆ. ಅಕ್ರಮವಾಗಿ ಮಾರಾಟವಾಗುವ ರಾಸಾಯನಿಕ ಪದಾರ್ಥಗಳು ರೈತರ ಬೆಳೆ ಹಾಗೂ ಮಣ್ಣಿನ ಶ್ರೇಷ್ಠತೆಯ ಮೇಲೆ ದುಷ್ಪರಿಣಾಮ ಬೀರುತ್ತವೆ. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಇತ್ತೀಚೆಗೆ ಹಲವಾರು ಸ್ಥಳಗಳಲ್ಲಿ ಸಹಯೋಗದೊಂದಿಗೆ ದಾಳಿ ನಡೆಸಿ ವಾಹನಗಳನ್ನು ಜಪ್ತಿ ಮಾಡಿರುವ ಉದಾಹರಣೆಗಳು ನೋಡಲಾಗಿದೆ.

ಇಂತಹ ಅಪರಾಧಗಳನ್ನು (Agriculture Law) ತಡೆಗಟ್ಟಲು ಸರ್ಕಾರ ಗಟ್ಟಿ ಕ್ರಮ ಕೈಗೊಳ್ಳುತ್ತಿದೆ. ಸಾರ್ವಜನಿಕರ ಸಹಕಾರದೊಂದಿಗೆ ಈ ದೂರುಗಳನ್ನು ತ್ವರಿತವಾಗಿ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

One thought on “Agriculture Law | ಕೃಷಿ ರಾಸಾಯನಿಕ ವಸ್ತುಗಳ ಕಳ್ಳಸಾಗಾಣಿಕೆ ಮಾಡಿದ್ರೆ ಜೈಲು ಫಿಕ್ಸ್..!

Leave a Reply

Your email address will not be published. Required fields are marked *