ಕಾನೂನು | ಓಲಾ, ಊಬರ್ ಮತ್ತು ರಾಪಿಡೋ ಬೈಕ್ ಟ್ಯಾಕ್ಸಿಗಳಿಗೆ (Bike Taxi Ban) ಕರ್ನಾಟಕ ಹೈಕೋರ್ಟ್ ಮತ್ತೊಮ್ಮೆ ಶಾಕ್ ನೀಡಿದೆ. ಬೈಕ್ ಟ್ಯಾಕ್ಸಿಗಳಿಗೆ ಮಧ್ಯಂತರ ಅನುಮತಿ ನೀಡುವ ಅರ್ಜಿಯನ್ನು ಹೈಕೋರ್ಟ್ ತಡೆ ನೀಡಿದೆ. ಹೀಗಾಗಿ ಜೂನ್ 16 ರಿಂದ ರಾಜ್ಯದಾದ್ಯಂತ ಈ ಸೇವೆಗಳು ಸ್ಥಗಿತಗೊಳ್ಳಲಿವೆ.
ಬೈಕ್ ಟ್ಯಾಕ್ಸಿಗಳ (Bike Taxi Ban) ಸೇವೆ ಬಂದ್ ಮಾಡಿ ಹೈಕೋರ್ಟ್ ಆದೇಶ
ಈ ಸಂಬಂಧ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ವಿ. ಕಾಮೇಶ್ವರ ರಾವ್ ಮತ್ತು ಶ್ರೀನಿವಾಸ್ ಹರೀಶ್ ಕುಮಾರ್ ನೇತೃತ್ವದ ದ್ವಿಸದಸ್ಯ ಪೀಠ, ಬೈಕ್ ಟ್ಯಾಕ್ಸಿಗೆ ತಾತ್ಕಾಲಿಕ ಅನುಮತಿ ನೀಡಲಾಗದು ಎಂಬ ತೀರ್ಪು ನೀಡಿದ್ದು, ಮೇಲ್ಮನವಿ ಅರ್ಜಿಗಳ ಅಂತಿಮ ವಿಚಾರಣೆಯನ್ನು ಜೂನ್ 24ರಂದು ನಡೆಸಲಾಗುತ್ತದೆ ಎಂದು ತಿಳಿಸಿದೆ.
ಈ ಹಿಂದೆ ಏಕಸದಸ್ಯ ಪೀಠದ ಆದೇಶದ ಮೇಲೆ ಓಲಾ, ಊಬರ್, ರಾಪಿಡೋ ಕಂಪನಿಗಳು ಮೇಲ್ಮನವಿ ಸಲ್ಲಿಸಿದ್ದವು. ಆದರೆ ಈಗ ದ್ವಿಸದಸ್ಯ ಪೀಠವು ಕೂಡ ಈ ಮಧ್ಯಂತರ ಅನುಮತಿಯನ್ನು ತಿರಸ್ಕರಿಸಿದೆ.
ಇದನ್ನು ಓದಿ : Hiccups | ನಿಮಗೂ ಪದೆ ಪದೆ ಬಿಕ್ಕಳಿಕೆ ಬರುತ್ತಾ..?
ಸರ್ಕಾರದ ವಾದ
ರಾಜ್ಯದ ಪರವಾಗಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ಇಲ್ಲಿನ ಸರ್ಕಾರ ಬೈಕ್ ಟ್ಯಾಕ್ಸಿಗೆ ಪರ್ಮಿಟ್ ನೀಡುವ ನಿಯಮಗಳನ್ನು ಇನ್ನೂ ರೂಪಿಸಿಲ್ಲ. ಈಗಾಗಲೇ 8 ರಾಜ್ಯಗಳಲ್ಲಿ ಮಾತ್ರ ಬೈಕ್ ಟ್ಯಾಕ್ಸಿಗೆ ಅಧಿಕೃತ ಅನುಮತಿ ನೀಡಲಾಗಿದೆ. ಆದರೆ ಕರ್ನಾಟಕದಲ್ಲಿ ಈ ವ್ಯವಸ್ಥೆ ಕಾನೂನುಬದ್ಧವಲ್ಲ. 4 ವರ್ಷಗಳಿಂದ ಮಧ್ಯಂತರ ಆದೇಶದ ಆಧಾರದ ಮೇಲೆ ಈ ಸೇವೆ ಚಲಿಸುತ್ತಿತ್ತು. ಸುಪ್ರೀಂಕೋರ್ಟ್ ಕೂಡ ಮಧ್ಯಂತರ ಅನುಮತಿ ನಿರಾಕರಿಸಿದೆ ಎಂದು ಹೇಳಿದರು.
ಆಗ್ರಿಗೇಟರ್ ಕಂಪನಿಗಳ ಬೇಡಿಕೆ
ಮೋಟಾರು ವಾಹನ ಕಾಯ್ದೆಯಡಿ ಹಳದಿ ನೋಂದಣಿ ಫಲಕ ಹೊಂದಿರುವ ವಾಹನಗಳಂತೆಯೇ ಬೈಕ್ ಟ್ಯಾಕ್ಸಿಗೂ ಅನುಮತಿ ನೀಡಬೇಕು ಎಂದು ಉಬರ್, ಓಲಾ ಮತ್ತು ರಾಪಿಡೋ ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಗಳನ್ನು ಹೈಕೋರ್ಟ್ ಈಗ ತಾತ್ಕಾಲಿಕವಾಗಿ ತಳ್ಳಿ ಹಾಕಿದೆ.

ಜೂನ್ 16 ರಿಂದ ಕರ್ನಾಟಕದಲ್ಲಿ ಓಲಾ, ಊಬರ್, ರಾಪಿಡೋ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳ್ಳಲಿದೆ. ಈ ಕುರಿತು ಅಂತಿಮ ತೀರ್ಪು ಜೂನ್ 24ರಂದು ಹೊರ ಬೀಳಲಿದೆ.
One thought on “Bike Taxi Ban | ಓಲಾ, ಉಬರ್ ಮತ್ತು ರಾಪಿಡೋ ಬೈಕ್ ಟ್ಯಾಕ್ಸಿಗಳು ಬಂದ್..!”