ಆಂಧ್ರ ಪ್ರದೇಶ | ಬೆಂಗಳೂರು ಮೂಲದ ಇಬ್ಬರು ಉದ್ಯಮಿಗಳು ಹಾಗೂ ಬಿಜೆಪಿ ಮುಖಂಡರಾದ ವೀರಸ್ವಾಮಿ ರೆಡ್ಡಿ ಮತ್ತು ಅವರ ಪುತ್ರ ಪ್ರಶಾಂತ್ ರೆಡ್ಡಿ ಅವರನ್ನು ಆಂಧ್ರ ಪ್ರದೇಶದ ಬಾಪಟ್ಲ ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನ ಬರ್ಬರವಾಗಿ ಕೊಲೆ (BJP Leader Murder) ಮಾಡಲಾಗಿದೆ.
ರಾಜಿಯಾಗೋಣ ಎಂದು ಕರೆಸಿ ಕತ್ತು ಸೀಳಿ (BJP Leader Murder) ಹತ್ಯೆ
ವೀರಸ್ವಾಮಿ ರೆಡ್ಡಿ ಹಾಗೂ ಪ್ರಶಾಂತ್ ರೆಡ್ಡಿ ಅವರು ಚೆಕ್ ಬೌನ್ಸ್ ಪ್ರಕರಣದ ವಿಚಾರಣೆಗಾಗಿ ಆಂಧ್ರದ ಕೋರ್ಟ್‌ಗೆ ಹಾಜರಾಗಿದ್ದರು. ಮಧ್ಯಾಹ್ನದ ವೇಳೆಗೆ, ಮಾದವರೆಡ್ಡಿ ಮತ್ತು ಅನಿಲ್ ರೆಡ್ಡಿ ಎಂಬ ವ್ಯಕ್ತಿಗಳು, ರಾಜಿಯಾಗೋಣ ಎಂಬ ನೆಪದಲ್ಲಿ ಇಬ್ಬರನ್ನೂ ಮಾತುಕತೆಗೆ ಕರೆದೊಯ್ದು, ನಂತರ ಸ್ಕಾರ್ಪಿಯೋ ಕಾರಿನಲ್ಲಿ ಕಿಡ್ನಾಪ್ ಮಾಡಿ, ಕತ್ತು ಸೀಳಿ ಕೊಲೆ ಮಾಡಿದ್ದಾರೆ.
ಇದನ್ನು ಓದಿ : Karnataka Rain Alert | ಮಳೆಯ ಅಬ್ಬರ : ಮಲೆನಾಡು ಜಿಲ್ಲೆಗಳಿಗೆ ರೆಡ್ ಅಲರ್ಟ್
ಮೃತರಾದ ವೀರಸ್ವಾಮಿ ರೆಡ್ಡಿ ಬೆಂಗಳೂರಿನ ಕಾಡುಗೋಡಿಯವರು. ಅವರು ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಾಗಿದ್ದರು. ಪ್ರಶಾಂತ್ ರೆಡ್ಡಿ ಮಹದೇವಪುರ ಬಿಜೆಪಿ ಯುವ ಮೋರ್ಚದ ಅಧ್ಯಕ್ಷರಾಗಿದ್ದರು. ಇಬ್ಬರೂ ಮಾಜಿ ಸಚಿವ ಅರವಿಂದ ಲಿಂಬಾವಳಿಯ ಆಪ್ತರಾಗಿ ಗುರುತಿಸಿಕೊಳ್ಳಲಾಗಿತ್ತು.

ಇವರಿಗೆ ವಿರುದ್ಧವಾಗಿಯೂ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿದ್ದು, ಇಬ್ಬರೂ (ಜುಲೈ 22) ವಿಮಾನದ ಮೂಲಕ ಆಂಧ್ರಕ್ಕೆ ತೆರಳಿದ್ದರು. ಬುಧವಾರ ಮಧ್ಯಾಹ್ನ 12ರೊಳಗೆ ಕೊಲೆಯ (BJP Leader Murder) ದುರಂತ ಸಂಭವಿಸಿದೆ. ಈ ಬರ್ಬರ ಹತ್ಯೆ ರಾಜ್ಯಾದ್ಯಂತ ಆಕ್ರೋಶ ಹುಟ್ಟಿಸಿದೆ.