ಬೆಂಗಳೂರು | ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಂಭವಿಸುತ್ತಿರುವ ಕೋಮು ಹಿಂಸಾಚಾರದ (Communal violence) ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ, ಈ ಜಿಲ್ಲೆಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.
ಇದನ್ನು ಓದಿ : RCB Big Win | ಪಂಜಾಬ್ ಕಿಂಗ್ಸ್ ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆ ಸರ್ಕಾರದ ಗಮನಕ್ಕೆ ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪ್ರತಿಯೊಂದು ಘಟನೆಯಲ್ಲೂ ನಾವು ಮೌನ ವಹಿಸಲು ಸಾಧ್ಯವಿಲ್ಲ. ಕಾನೂನನ್ನು ಬಿಗಿ ಮಾಡಿ, ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ಹೇಳಿದರು.
ಕೋಮು ಹಿಂಸೆ (Communal violence) ನಿಗ್ರಹ ಕಾರ್ಯಪಡೆ ರಚನೆಗೆ ಸಂಬಂಧಿಸಿ ಕಳೆದ ಘಟನೆಯ ಸಂದರ್ಭದಲ್ಲಿ ಪರಿಶೀಲನೆ ನಡೆದಿದೆ. ಈಗ ಈ ಕಾರ್ಯಪಡೆಯನ್ನು ತಕ್ಷಣ ಜಾರಿಗೆ ತರುವಂತೆ ಸರ್ಕಾರ ಆದೇಶ ಹೊರಡಿಸಿದೆ. ನಕ್ಸಲ್ ನಿಗ್ರಹದ ಅರ್ಧ ಸಿಬ್ಬಂದಿಯನ್ನು ಈ ಹೊಸ ಕಾರ್ಯಪಡೆಗೆ ನಿಯೋಜಿಸಲಾಗುತ್ತದೆ ಎಂದು ಸಚಿವರು ವಿವರಿಸಿದರು.
ಮಹಾನಿರ್ದೇಶಕರಿಗೆ (Communal violence) ನಿರ್ದೇಶನ ನೀಡಿದ ಡಾ. ಜಿ ಪರಮೇಶ್ವರ್
ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಈ ಕುರಿತು ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಈ ನಿಗ್ರಹ ಕಾರ್ಯಪಡೆಯ ಸಿಬ್ಬಂದಿಗೆ ಅಗತ್ಯವಾದ ಅಧಿಕಾರ ಮತ್ತು ಸೌಲಭ್ಯಗಳನ್ನು ಒದಗಿಸಲಾಗುವುದು. ಮೂರೂ ಜಿಲ್ಲೆಗಳಲ್ಲೂ ಹೆಚ್ಚಿನ ಗಮನಹರಿಸುವುದಾಗಿ ಪರಮೇಶ್ವರ ಹೇಳಿದರು.

ಧಾರ್ಮಿಕ ನಾಯಕರು ಶಾಂತಿಯ ಪುರಸ್ಕಾರಕ್ಕಾಗಿ ಪೂರಕ ಕೆಲಸ ಮಾಡಬೇಕೆಂಬ ಮನವಿಯೊಂದಿಗೆ, ಶಾಂತಿ ಸಭೆಗಳನ್ನು ಆಯೋಜಿಸಲು ಸೂಚನೆ ನೀಡಲಾಗಿದೆ. ಪ್ರಚೋದನೆಗೆ ಸ್ಪಂದನೆ ನೀಡುವುದಕ್ಕೆ ಬದಲು ಶಾಂತಿಯ ತಳಹದಿಯನ್ನು ಬಲಪಡಿಸುವುದು ಮುಖ್ಯ ಎಂದು ಗೃಹ ಸಚಿವರು ಹೇಳಿದರು.