Dharmasthala Case | ಧರ್ಮಸ್ಥಳ ಪ್ರಕರಣದ ಬಗ್ಗೆ ಧ್ವನಿ ಎತ್ತಿದ ಮಾಜಿ ಸಿಎಂ ಬೊಮ್ಮಾಯಿ

ಬೆಂಗಳೂರು | ಧರ್ಮಸ್ಥಳದಲ್ಲಿ (Dharmasthala Case) ನಡೆದ ಪ್ರಕರಣ ಸಂಬಂಧ ಎಸ್‌ಐಟಿ ತನಿಖೆ ಆರಂಭವಾದ ಹಿನ್ನೆಲೆ, ಬಿಜೆಪಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಹೇಳಿಕೆ ನೀಡಿದ್ದಾರೆ. ತನಿಖೆ ಕಾಲಮಿತಿಯಲ್ಲಿ, ಕಾನೂನುಬದ್ದವಾಗಿ ನಡೆಯಬೇಕು ಎಂದು ಬೊಮ್ಮಾಯಿ ಆಗ್ರಹಿಸಿದ್ದಾರೆ.

ಧರ್ಮಸ್ಥಳದ (Dharmasthala Case) ತನಿಖೆ ಯಾರನ್ನಾದರು ಗುರಿಯಾಗಿಸಿ ನಡೆಯಬಾರದು

ಧರ್ಮಸ್ಥಳದಂತಹ ನಂಬಿಕೆಗೆ ಪಾತ್ರವಾದ ದೇವಾಲಯದ ಮೇಲಿನ ಭರವಸೆ ಹದಗೆಡಬಾರದು. ತನಿಖೆ ಯಾರನ್ನಾದರೂ ಗುರಿಯಾಗಿಸಿಕೊಂಡು ನಡೆಯಬಾರದು. ದೂರು ನೀಡಿದವರು ಒತ್ತಡದಲ್ಲಿದ್ದೆವೆಂದಿದ್ದಾರೆ. ಆ ಒತ್ತಡ ಯಾರಿಂದ ಬಂದದ್ದು ಎಂಬುದನ್ನು ತನಿಖೆಯಲ್ಲಿ ಬಹಿರಂಗಪಡಿಸಬೇಕು, ಎಂದು ಅವರು ಹೇಳಿದರು.

ಜಿಎಸ್‌ಟಿ ವಿವಾದದ ಬೆನ್ನಲ್ಲೇ ಸಿಎಂಗೆ ತಿರುಗೇಟು ಕೊಟ್ಟ ಅವರು, ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್‌ ನೀಡಿರುವುದು ಅವರ ಜೀವನದ ಮೇಲೆ ಪರಿಣಾಮ ಬೀರಿದೆ. ಸಿಎಂ ಸಿದ್ದರಾಮಯ್ಯ ಕೇಂದ್ರದ ಮೇಲೆ ಹೊಣೆ ಹಾಕಿ ಜವಾಬ್ದಾರಿ ತಪ್ಪಿಸುತ್ತಿದ್ದಾರೆ ಎಂದು ಬೊಮ್ಮಾಯಿ ಕಿಡಿಕಾರಿದರು. ಜಿಎಸ್‌ಟಿ ರಾಜ್ಯ ಹಾಗೂ ಕೇಂದ್ರದ ಜವಾಬ್ದಾರಿ ಎಂದರೂ ನೇರ ನಿರ್ವಹಣೆ ರಾಜ್ಯದ ವ್ಯಾಪಾರಿ ತೆರಿಗೆ ಇಲಾಖೆಯದ್ದೇ ಎಂದರು.

ಇದನ್ನು ಓದಿ : Biklu Shiva Case | ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ನಟಿ ರಚಿತಾ ರಾಮ್ ಹೆಸರು..!

ಬೆಂಗಳೂರು ನಗರವನ್ನು ಐದು ಪಾಲಿಕೆಗಳಾಗಿ ವಿಭಜಿಸುವ ಪ್ರಸ್ತಾಪದ ಬಗ್ಗೆ ಬೊಮ್ಮಾಯಿ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರು ಮಹತ್ವ ಕಳೆದುಕೊಳ್ಳಬಾರದು. ವಿಭಜನೆಯಿಂದ ಅಭಿವೃದ್ಧಿಯಲ್ಲಿ ತಾರತಮ್ಯ ಉಂಟಾಗಬಾರದು ಎಂದಿದ್ದಾರೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ರಾಜಕೀಯ ಬದಲಾವಣೆ ನಡೆಯಲಿದೆ ಎಂದು ಬೊಮ್ಮಾಯಿ ಮುನ್ಸೂಚನೆ ನೀಡಿದ್ದಾರೆ. ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಒಟ್ಟಾಗಿ ರಾಜಕೀಯವಾಗಿ ಬಲ ಹೆಚ್ಚಿಸುತ್ತಿದ್ದಾರೆ ಎಂದು ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *