Digital Arrest Scam | ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಯುವತಿಯನ್ನು ಬೆತ್ತಲೆಗೊಳಿಸಿದ ವಂಚಕರು..!

ಬೆಂಗಳೂರು | ಬ್ಯಾಂಕಿಂಗ್ ವಂಚನೆ, ಕಳ್ಳ ಸಾಗಣೆ ಹಾಗೂ ಹಣ ಅಕ್ರಮ ವರ್ಗಾವಣೆ ಆರೋಪದ ಹೆಸರಿನಲ್ಲಿ ಬೆಂಗಳೂರಿನಲ್ಲಿ ಇಬ್ಬರು ಮಹಿಳೆಯರಿಗೆ ಡಿಜಿಟಲ್ ಅರೆಸ್ಟ್ (Digital Arrest Scam) ಮಾಡುವುದಾಗಿ ಹೇಳಿ, ಅವರಿಂದ ಬೆತ್ತಲೆ ವಿಡಿಯೋ ತಗೆದು 58,477 ರೂ. ವಂಚಿಸಿದ ಭೀಕರ ಸೈಬರ್ ಕ್ರೈಂ ಪ್ರಕರಣ ಬೆಳಕಿಗೆ ಬಂದಿದೆ.

ಥಾಯ್ಲೆಂಡ್‌ಬೋಧಕಿಗೆ ಡಿಜಿಟಲ್ ಅರೆಸ್ಟ್ (Digital Arrest Scam) ವಂಚನೆ

ಥಾಯ್ಲೆಂಡ್‌ನಲ್ಲಿ ಬೋಧಕಿಯಾಗಿರುವ ಮಹಿಳೆಯೊಬ್ಬರು ತನ್ನ ಬಾಲ್ಯದ ಸ್ನೇಹಿತೆಯನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದರು. ಜುಲೈ 17 ರಂದು ಬೆಳಿಗ್ಗೆ ಅನಾಮಧೇಯ ನಂಬರ್‌ನಿಂದ ಕರೆ ಬಂದಿದ್ದು, ಮುಂಬೈನ ಕೊಲಾಬಾ ಪೊಲೀಸ್‌ ಇನ್ಸ್‌ಪೆಕ್ಟರ್‌ ಎಂದು ಪರಿಚಯಿಸಿಕೊಂಡ ವ್ಯಕ್ತಿ, ಹಣ ಲಾಂಡರಿಂಗ್, ಕಳ್ಳ ಸಾಗಣೆ ಮತ್ತು ಹತ್ಯೆ ಪ್ರಕರಣದಲ್ಲಿ ನಿಮ್ಮ ಹೆಸರು ಇದೆ ಎಂದು ಬೆದರಿಸಿದ್ದಾರೆ.

ಇದನ್ನು ಓದಿ : BJP Leader Murder | ಆಂಧ್ರದಲ್ಲಿ ಬೆಂಗಳೂರು ಮೂಲದ ಬಿಜೆಪಿ ಮುಖಂಡನ ಬರ್ಬರ ಹತ್ಯೆ..!

ನಕಲಿ ಬಂಧನ ವಾರಂಟ್ ತೋರಿಸಿ, ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ತಕ್ಷಣ ವರ್ಗಾಯಿಸುವಂತೆ ಹೇಳಿ ಹೆದರಿಸಿದ ನಂತರ, ಇಬ್ಬರೂ ಸ್ನೇಹಿತೆಯರು ಸೇರಿ ₹58,477 ಮೊತ್ತವನ್ನು ವಂಚಕನ ಖಾತೆಗೆ ವರ್ಗಾಯಿಸಿದ್ದಾರೆ. ಆದರೆ ಇದರಲ್ಲೇ ತೃಪ್ತರಾಗದೇ, ಆರೋಪಿ  ದೈಹಿಕ ತಪಾಸಣೆ ಅಗತ್ಯವಿದೆ ಎಂದು ಬಲವಂತಪೂರಿತವಾಗಿ ಇಬ್ಬರನ್ನೂ  ಬೆತ್ತಲಾಗುವಂತೆ ಒತ್ತಾಯಿಸಿ ವೀಡಿಯೋ ಕರೆ ಮೂಲಕ ಕಿರುಕುಳ ನೀಡಿದ್ದಾನೆ.

ಇದು ಸುಮಾರು 9 ಗಂಟೆಗಳ ಕಾಲ ನಡೆಯಿತ್ತು ಎಂದು ಸಂತ್ರಸ್ತೆಯರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಬೆಂಗಳೂರು ಪೂರ್ವ ವಿಭಾಗ ಸೈಬರ್ ಪೊಲೀಸ್ ಠಾಣೆಯಲ್ಲಿ IT ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318(4) ಅಡಿ ಎಫ್‌ಐಆರ್ ದಾಖಲಾಗಿದೆ.

Leave a Reply

Your email address will not be published. Required fields are marked *