Site icon Kannada Sakshi | Kannada News | ಕನ್ನಡ ಸುದ್ದಿ | Latest Karnataka News

DK Shivakumar | ಮೂರು ದಿನಗಳು ನಾನು ಯಾರನ್ನು ಭೇಟಿ ಮಾಡಲ್ಲ – ಡಿ ಕೆ ಶಿವಕುಮಾರ್

ಬೆಂಗಳೂರು | ಕರ್ನಾಟಕ ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ (DK Shivakumar) ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಜುಲೈ 22ರಿಂದ ಮೂರು ದಿನಗಳ ಕಾಲ ಯಾವುದೇ ಸಾರ್ವಜನಿಕ ಕಾರ್ಯಕ್ರಮ ಅಥವಾ ವ್ಯಕ್ತಿ ಭೇಟಿಯಿಂದ ದೂರ ಉಳಿಯಲಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಡಿಕೆಶಿ ಅವರು ತಮ್ಮ ಪೋಸ್ಟ್‌ನಲ್ಲಿ, ಇಂದಿನಿಂದ ಮೂರು ದಿನಗಳ ಕಾಲ ಯಾರನ್ನೂ ಭೇಟಿ ಆಗಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕರು, ಪಕ್ಷದ ನಾಯಕರು, ಕಾರ್ಯಕರ್ತರು ಯಾರೂ ತಪ್ಪಾಗಿ ಅರ್ಥ ಮಾಡಿಕೊಳ್ಳಬಾರದು ಎಂದು ಹೇಳಿದ್ದಾರೆ.

ಡಿ ಕೆ ಶಿವಕುಮಾರ್ (DK Shivakumar) ಆರೋಗ್ಯದ ಬಗ್ಗೆ ಸುರ್ಜೆವಾಲ ಎಕ್ಸ್ ನಲ್ಲಿ ಪೋಸ್ಟ್

ಜ್ವರದಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರಿಂದ ದೃಢಪಟ್ಟಿದೆ. ಅವರು ಡಿಕೆಶಿ ಅವರಿಗೆ ಫೋನ್ ಮಾಡಿ ಆರೋಗ್ಯ ವಿಚಾರಿಸಿದ್ದು, DKS ಅವರು ಶೀಘ್ರದಲ್ಲಿ ಚೇತರಿಸಿ, ಜನಸೇವೆ ಮಾಡಲು ಹಿಂದಿರುಗಲಿ ಎಂದು ‘ಎಕ್ಸ್’ (ಹಳೆಯ ಟ್ವಿಟ್ಟರ್) ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನು ಓದಿ : Mother Son Murder | ಕೇವಲ 20 ರೂಪಾಯಿಗೆ ತಾಯಿಯನ್ನು ಹತ್ಯೆ ಮಾಡಿದ ಮಗ

ಡಿ.ಕೆ. ಶಿವಕುಮಾರ್ ಅವರಿಗೆ ಜುಲೈ 16 ರಲ್ಲಿಯೇ ಜ್ವರ ಕಾಣಿಸಿಕೊಂಡಿತ್ತು. ಆ ಸಮಯದಲ್ಲಿ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ವಿಶ್ರಾಂತಿಯಾಗಿದ್ದರು. ಈಗ ಮತ್ತೆ ಆರೋಗ್ಯ ಸಮಸ್ಯೆಯಿಂದ ಅವರು ಮೂರು ದಿನಗಳ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ.

ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಡಿಕೆಶಿಯ ಆರೋಗ್ಯ ಸುಧಾರಣೆಗಾಗಿ ಶುಭಾಶಯ ಕೋರುತ್ತಿದ್ದಾರೆ. ಈ ಹೊತ್ತಿಗೆ ರಾಜಕೀಯ ವೇದಿಕೆಯಲ್ಲಿ ಡಿಕೆಶಿಯ ಹಾಜರಾತಿ ಇಲ್ಲದಿರುವುದು ಗಮನ ಸೆಳೆಯುತ್ತಿದೆ.

Exit mobile version