Indian Constitution | ಭಾರತೀಯನಾದವನಿಗೆ ಈ ಕಾನೂನಿನ ಬಗ್ಗೆ ತಿಳಿದಿರಲೇ ಬೇಕು..!

ನವದೆಹಲಿ | ಭಾರತದ ಸಂವಿಧಾನವು (Indian Constitution) ಪ್ರತಿಯೊಬ್ಬ ನಾಗರಿಕನಿಗೂ ಸ್ಪಷ್ಟವಾದ ಮೂಲಭೂತ ಹಕ್ಕುಗಳು ಹಾಗೂ ಮೌಲಿಕ ಕರ್ತವ್ಯಗಳು ನೀಡಿದ್ದು, ದೇಶದ ಪ್ರಜಾಪ್ರಭುತ್ವದ ಸ್ತಂಭವಾಗಿದೆ. ಈ ಹಕ್ಕುಗಳು ನಾಗರಿಕರ ಗೌರವ, ಸಮಾನತೆ ಹಾಗೂ ಸ್ವಾತಂತ್ರ್ಯವನ್ನು ಕಾಪಾಡುತ್ತದೆ ಮತ್ತು ಕರ್ತವ್ಯಗಳು ರಾಷ್ಟ್ರದ ಶ್ರೇಯಸ್ಸಿಗೆ ವಯಕ್ತಿಕ ಜವಾಬ್ದಾರಿ ನೀಡುತ್ತವೆ.

ಭಾರತೀಯನಿಗೆ (Indian Constitution) ಇರುವ ಪ್ರಮುಖ ಹಕ್ಕುಗಳು

1. ಸಮಾನತೆಯ ಹಕ್ಕು (Article 14-18): ಧರ್ಮ, ಜಾತಿ, ಲಿಂಗ ಆಧಾರದ ಮೇಲೆ ಭೇದ ಬಾವ ಮಾಡಲು ಅವಕಾಶವಿಲ್ಲ.

2. ಸ್ವಾತಂತ್ರ್ಯದ ಹಕ್ಕು (Article 19-22): ಮಾತಿನ ಸ್ವಾತಂತ್ರ್ಯ, ಸಂವಿಧಾನಾತ್ಮಕ ಭಾವನೆ ವ್ಯಕ್ತಪಡಿಸುವ ಹಕ್ಕು, ಸಂಚರಿಸುವ ಹಕ್ಕು.

3. ಶೋಷಣೆಗೆ ವಿರುದ್ಧ ಹಕ್ಕು (Article 23-24): ಬಲವಂತದ ಕೆಲಸ, ಮಕ್ಕಳ ದುಡಿಮೆಗೆ ತಡೆ.

4. ಧಾರ್ಮಿಕ ಸ್ವಾತಂತ್ರ್ಯ (Article 25-28): ಯಾವುದೇ ಧರ್ಮ ನಂಬುವ, ಪಾಲನೆ ಮಾಡುವ ಸ್ವಾತಂತ್ರ್ಯ.

5. ಸಾಂಸ್ಕೃತಿಕ ಮತ್ತು ಶಿಕ್ಷಣ ಹಕ್ಕು (Article 29-30): ಯಾವುದೇ ಸಮುದಾಯ ತನ್ನ ಭಾಷೆ, ಸಂಸ್ಕೃತಿ, ಶಿಕ್ಷಣವನ್ನು ಉಳಿಸಿಕೊಳ್ಳಬಹುದಾಗಿದೆ.

6. ಸಾಂವಿಧಾನಿಕ ಪರಿಹಾರ ಹಕ್ಕು (Article 32): ಇತರ ಹಕ್ಕುಗಳ ಉಲ್ಲಂಘನೆಯಾದರೆ ನೇರವಾಗಿ ಸುಪ್ರೀಂ ಕೋರ್ಟ್‌ಗೆ ದೂರು ನೀಡಬಹುದು.

ಇದನ್ನು ಓದಿ : Money Management | ಜೀವನದಲ್ಲಿ ಇದಕ್ಕೆ ಹೆಚ್ಚು ಹಣ ಖರ್ಚು ಮಾಡಿದ್ರೆ ಲಾಸ್ ಆಗಲ್ಲ..!

ಭಾರತೀಯನ (Indian Constitution) ಕರ್ತವ್ಯಗಳು (Article 51A)

1. ರಾಷ್ಟ್ರದ ಭಾವೈಕ್ಯತೆ ಹಾಗೂ ಅಖಂಡತೆಗೆ ಗೌರವ.

2. ಸಂವಿಧಾನಕ್ಕೆ ಗೌರವ ಮತ್ತು ಕಾನೂನು ಪಾಲನೆ.

3. ಜಾತಿ, ಲಿಂಗ, ಧರ್ಮ ಆಧಾರದ ಮೇಲೆ ಭೇದ ಭಾವವಿಲ್ಲದೆ ಎಲ್ಲರಿಗೂ ಗೌರವ.

4. ಪರಿಸರದ ರಕ್ಷಣೆ ಮತ್ತು ಅಭಿವೃದ್ಧಿಗೆ ಸಹಕಾರ.

5. ವೈಜ್ಞಾನಿಕ ಮನೋಭಾವ ಮತ್ತು ಮಾನವೀಯ ಹಿತಚಿಂತನೆ ಬೆಳೆಸುವುದು.

6. ರಾಷ್ಟ್ರೀಯ ಸಂಸ್ಕೃತಿಯ ಕಾಪಾಡುವ ಕಾಳಜಿ.

ಭಾರತೀಯ (Indian Constitution) ನಾಗರಿಕನಾಗಿ ನಾವು ಹೊಂದಿರುವ ಹಕ್ಕುಗಳು ನಮ್ಮ ಜೀವನಕ್ಕೆ ಗೌರವ, ಗೌಪ್ಯತೆ ಮತ್ತು ಸಮಾನತೆಯನ್ನು ನೀಡುತ್ತವೆ. ಇದೇ ಸಂದರ್ಭದಲ್ಲಿ, ದೇಶದ ಅಭಿವೃದ್ಧಿಗೆ, ಶಾಂತಿಯುತ ಸಹವಾಸಕ್ಕೆ, ನಾವೂ ನಮ್ಮ ಕರ್ತವ್ಯಗಳನ್ನು ಪಾಲಿಸಬೇಕಾಗಿದೆ. ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಹಕ್ಕುಗಳೆಷ್ಟೋ ಮಹತ್ವವಾದರೂ, ಕರ್ತವ್ಯಗಳು ಇನ್ನಷ್ಟು ಪವಿತ್ರವಾದವುಗಳಾಗಿವೆ.

Leave a Reply

Your email address will not be published. Required fields are marked *