Site icon Kannada Sakshi | Kannada News | ಕನ್ನಡ ಸುದ್ದಿ | Latest Karnataka News

Israel-Iran War | ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಿಂದ ಭಾರತಕ್ಕೇನು ನಷ್ಟ..?

ಬಿಸಿನೆಸ್ | ಇಸ್ರೇಲ್ ಮತ್ತು ಇರಾನ್ (Israel-Iran War) ನಡುವಿನ ಯುದ್ಧವು ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ. ಈ ಸಂಘರ್ಷದಿಂದ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳ ಆರ್ಥಿಕತೆ ಮೇಲೆ ನೇರ ಮತ್ತು ಪರೋಕ್ಷ ಪರಿಣಾಮಗಳು ಬೀರುವ ಸಾಧ್ಯತೆ ಇದೆ.

ಇಸ್ರೇಲ್ ಮತ್ತು ಇರಾನ್ ಯುದ್ಧದಿಂದ (Israel-Iran War) ಇಂಧನ ಬೆಲೆ ಏರಿಕೆ

ಭಾರತ ತನ್ನ ತೈಲದ ಬಹುಪಾಲುವನ್ನು ಪೆರ್ಸಿಯನ್ ಗಲ್ಫ್ ಪ್ರದೇಶದಿಂದ ಆಮದು ಮಾಡಿಕೊಳ್ಳುತ್ತದೆ. ಇರಾನ್ ಗಲ್ಫ್ ಪ್ರದೇಶದ ಪ್ರಮುಖ ತೈಲ ಉತ್ಪಾದಕ ರಾಷ್ಟ್ರವಾಗಿದ್ದು, ಯುದ್ಧದ ಹಿನ್ನೆಲೆಯಲ್ಲಿ ತೈಲ ಆಮದು ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಬಹುದು. ಇದರ ಪರಿಣಾಮವಾಗಿ ಕಚ್ಚಾ ತೈಲದ ದರಗಳು ಏರಿಕೆ ಆಗಲಿದ್ದು, ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳಕ್ಕೆ ದಾರಿ ಮಾಡಬಹುದು. ಇದರಿಂದ ಸಾರಿಗೆ, ಉತ್ಪಾದನೆ ಮತ್ತು ದಿನನಿತ್ಯದ ಬಳಕೆ ವಸ್ತುಗಳ ಬೆಲೆಗಳು ಏರಬಹುದು.

ಇದನ್ನು ಓದಿ : Foreigners In India | ಭಾರತದಲ್ಲಿ ವಿದೇಶಿ ಪ್ರಜೆ ತಪ್ಪು ಮಾಡಿದ್ರೆ ಶಿಕ್ಷೆ ಏನು ಗೊತ್ತಾ..?

ರೂಪಾಯಿ ಮೌಲ್ಯ ಕುಸಿತ ಮತ್ತು ನಷ್ಟದ ಭೀತಿ

ತೈಲದ ಬೆಲೆ ಏರಿಕೆಯಿಂದಾಗಿ ರುಪಾಯಿ ಮೌಲ್ಯ ಕುಸಿಯುವ ಸಾಧ್ಯತೆ ಇದೆ. ಅಲ್ಲದೆ, ಶೇರು ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚಾಗಿ ಬಂಡವಾಳ ಹಿಂತೆಗೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು.

ರಫ್ತು ಮತ್ತು ಆಮದು ವ್ಯವಹಾರಗಳ ಮೇಲೆ ಪರಿಣಾಮ

ಮಧ್ಯಪ್ರಾಚ್ಯದ ಹಲವು ದೇಶಗಳು ಭಾರತದ ವ್ಯಾಪಾರದ ಪ್ರಮುಖ ಭಾಗವಾಗಿವೆ. ಯುದ್ಧದಿಂದ ಅವುಗಳ ಸಾಗಣೆ ಮಾರ್ಗಗಳಲ್ಲಿ ಅಡಚಣೆ ಉಂಟಾಗಿ ವ್ಯಾಪಾರದ ಮೇಲೆ ಧಕ್ಕೆಯಾಗಬಹುದು.

ಇಸ್ರೇಲ್-ಇರಾನ್ ಯುದ್ಧವು (Israel-Iran War)  ತೈಲ ಬೆಲೆ ಏರಿಕೆ, ಮಾರುಕಟ್ಟೆ ಅಸ್ಥಿರತೆ ಮತ್ತು ವ್ಯವಹಾರ ವ್ಯತ್ಯಯದ ಮುಖಾಂತರ ಭಾರತದ ಆರ್ಥಿಕತೆಗೆ ಬಹುಪಾಲು ಸಮಸ್ಯೆಗಳನ್ನುಂಟು ಮಾಡಬಹುದು. ಶೀಘ್ರದಲ್ಲೇ ಯುದ್ಧ ಅಂತ್ಯವಾಗದಿದ್ದರೆ ಇದರಿಂದ ಉಂಟಾಗುವ ದುರುಪರಿಣಾಮಗಳು ಉಲ್ಬಣಗೊಳ್ಳಬಹುದು.

Exit mobile version