ತುಮಕೂರು | ಸಂತೆಯಲ್ಲಿ ತಪ್ಪಿಸಿಕೊಂಡ ಮಗ ನಾನು, ಯಾರು ಕೈ ಹಿಡಿದು ಮನೆಗೆ ಕರೆದುಕೊಂಡು ಹೋಗುತ್ತಾರೆ ಗೊತ್ತಿಲ್ಲ ಎಂಬ ಭಾವನಾತ್ಮಕ ಹೇಳಿಕೆಯಿಂದ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ (JC Madhuswamy) ತಮ್ಮ ರಾಜಕೀಯ ದಿಕ್ಕು ಬಗ್ಗೆ ತೀವ್ರತೆ ನೀಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಗೆ ಚಿ.ನಾ.ಹಳ್ಳಿ ಕ್ಷೇತ್ರದಿಂದ ಸ್ಪರ್ಧೆ ಖಚಿತವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಲಿಂಕ್ ಕೆನಾಲ್ ಹೋರಾಟದಿಂದ ಮಾಧುಸ್ವಾಮಿ (JC Madhuswamy) ಹೊರಗೆ
ಹೇಮಾವತಿ ಲಿಂಕ್ ಕೆನಾಲ್ ಕುರಿತು ಹೋರಾಟ ನಡೆಸಿದಾಗಲೇ ತಮ್ಮದೇ ಪಕ್ಷದವರು ಸಹಾಯ ಮಾಡಿಲ್ಲ ಎಂಬ ಕಾರಣಕ್ಕೆ ಈಗಿನ ಹೋರಾಟಗಳಲ್ಲಿ ಅವರು ಪಾಲ್ಗೊಳ್ಳುತ್ತಿಲ್ಲ. ಸ್ವಹಿತಾಸಕ್ತಿ ಇಲ್ಲದ ಹೋರಾಟಕ್ಕೆ ನಾನು ಹೋಗುತ್ತೇನೆ, ಆದರೆ ಕೇಸು ಹಾಕಿಸಿಕೊಳ್ಳುವುದಕ್ಕೆ ಅಲ್ಲ ಎಂದಿದ್ದಾರೆ. ಡಿಕೆ ಶಿವಕುಮಾರ್ ಕ್ಷೇತ್ರಕ್ಕೆ ನೀರು ಹರಿಸುವ ಪ್ರಯತ್ನವನ್ನು ಖಂಡಿಸಿ, ಇದು ನಮ್ಮ ಜಿಲ್ಲೆಗೆ ಅನ್ಯಾಯ, ಶಿರಾ, ಮಧುಗಿರಿ ಭಾಗಗಳ ಜನಪ್ರತಿನಿಧಿಗಳು ಎಚ್ಚೆತ್ತಿರಬೇಕು ಎಂದು ಎಚ್ಚರಿಸಿದ್ದಾರೆ.
ಇದನ್ನು ಓದಿ : K N Rajanna Statement | ಸಿದ್ದರಾಮಯ್ಯ 5 ವರ್ಷ ಸಿಎಂ ಆಗಬೇಕೆಂಬುದು ನನ್ನ ಆಶಯ..!
ಹೈಕಮಾಂಡ್ ಹೆಸರಿನಲ್ಲಿ ಶಾಸಕರ ಮೇಲೆ ದಬ್ಬಾಳಿಕೆ ಸರಿಯಲ್ಲ, ಶಾಸಕರು ಸ್ವತಂತ್ರ. ಮಾಸ್ ಲೀಡರ್ ಶಿಪ್ ಹೆಸರಿನಲ್ಲಿ ಉಂಟಾಗುವ ರಾಜಕೀಯ ಕ್ರೆಡಿಟ್ ಪಾಯಿಂಟ್‌ಗಳನ್ನು ಒಂದೇ ವ್ಯಕ್ತಿಗೆ ನೀಡುವುದು ಕೂಡ ಸರಿಯಲ್ಲ ಎಂದು ಅವರು ವಿವರಿಸಿದ್ದಾರೆ.

ಬೆಂಗಳೂರಿನ ಸಿದ್ದರಾಮಯ್ಯ ಹಾಸ್ಟೆಲ್‌ಗೆ ಜಾಗದ ಬಗ್ಗೆ ಚರ್ಚಿಸಲು ಮಾತ್ರ ಭೇಟಿ ನೀಡಿದ್ದೆ. ಅವರು ಸಹಕಾರ ನೀಡಿದ್ದಾರೆ. ರಾಜಕೀಯ ಚರ್ಚೆ ನಡೆಯಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸಿದ್ದರಾಮಯ್ಯ ಮಾಗಿದ್ದಾರೆ, ವಯಸ್ಸಾಗಿದೆ ಎಂಬುದನ್ನು (JC Madhuswamy) ಹೇಳಿದರು.