Site icon Kannada Sakshi | Kannada News | ಕನ್ನಡ ಸುದ್ದಿ | Latest Karnataka News

Kamal Haasan Controversial Statement | ಕಮಲ್ ಹಾಸನ್ ಹೇಳಿಕೆಗೆ ಶಿವರಾಜ್ ಕುಮಾರ್ ಪ್ರತಿಕ್ರಿಯೆ

Kamal Haasan Controversial Statement

ತಮಿಳುನಾಡು | ನಟ ಕಮಲ್ ಹಾಸನ್ (Kamal Haasan Controversial Statement) ಅವರು ‘ಥಗ್ ಲೈಫ್’ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಕನ್ನಡದ ಬಗ್ಗೆ ನೀಡಿದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಈ ವಿಚಾರದ ಬಗ್ಗೆ ಇದೀಗ ನಟ ಶಿವರಾಜ್ ಕುಮಾರ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಇದನ್ನು ಓದಿ : Cheque bounce | ಚೆಕ್ ಬೌನ್ಸ್ ಬಗ್ಗೆ ಈ ಮಾಹಿತಿ ತಿಳಿದಿದ್ರೆ ತುಂಬಾ ಒಳ್ಳೆಯದು

ಕಾರ್ಯಕ್ರಮದಲ್ಲಿ ಕಮಲ್ ಹಾಸನ್ (Kamal Haasan Controversial Statement) ಅವರು ಡಾ. ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಬಗ್ಗೆ ಪ್ರೀತಿಯಿಂದ ಮಾತನಾಡಿದರು. ಆದರೆ, ತಮಿಳು ಭಾಷೆಯಿಂದ ಕನ್ನಡ ಹುಟ್ಟಿದಂತಿದೆ ಎಂಬ ಹೇಳಿಕೆಯಿಂದ ಟೀಕೆಗಳು ಉದ್ಭವಿಸಿದವು. ನಟ ಜಗ್ಗೇಶ್, ನಟ ಚೇತನ್ ಅಹಿಂಸ, ನಟ ಶ್ರೀನಾಥ್, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವರು ಈ ಹೇಳಿಕೆಯನ್ನು ಖಂಡಿಸಿದ್ದಾರೆ.

ಕಮಲ್ ಹಾಸನ್ (Kamal Haasan Controversial Statement) ಹೇಳಿಕೆಗೆ ಶಿವಣ್ಣ ರಿಯಾಕ್ಷನ್

ಈ ಎಲ್ಲ ವಿವಾದದ ನಡುವೆಯೂ, ಕಾರ್ಯಕ್ರಮದಲ್ಲಿ ಇದ್ದರೂ ಈವರೆಗೆ ಪ್ರತಿಕ್ರಿಯೆ ನೀಡದೇ ಇದ್ದ ಶಿವರಾಜ್ ಕುಮಾರ್ ಇದೀಗ ಮಾತನಾಡಿದ್ದಾರೆ, ಕಮಲ್ ಹಾಸನ್ ಅವರು ಕಾರ್ಯಕ್ರಮದಲ್ಲಿ ಕರ್ನಾಟಕ, ಬೆಂಗಳೂರು ಮತ್ತು ಕನ್ನಡದ ಬಗ್ಗೆ ಹೆಮ್ಮೆಪಡುವ ಮಾತುಗಳನ್ನು ಆಡಿದ್ದರು. ಅವರು ಹಿರಿಯರು, ನನ್ನ ಸ್ಪೂರ್ತಿ. ಅವರು ಗೌರವದಿಂದ ಆಹ್ವಾನಿಸಿದಾಗ, ನಾನೂ ಸಹ ಗೌರವದಿಂದ ಕಾರ್ಯಕ್ರಮಕ್ಕೆ ಹಾಜರಾದೆ.

ವಿವಾದದ ಬಗ್ಗೆ ಸ್ಪಷ್ಟನೆ ನೀಡುವ ಭರವಸೆ ವ್ಯಕ್ತಪಡಿಸಿದ ಶಿವಣ್ಣ, ಕಮಲ್ ಹಾಸನ್ ಅವರು ಯಾವಾಗ ಏನು ಮಾಡಬೇಕು ಎಂಬುದು ಅವರಿಗೆ ಗೊತ್ತಿರುತ್ತೆ. ಅವರಿಗೆ ಕನ್ನಡದ ಮೇಲೂ ಪ್ರೀತಿ ಇದೆ. ಅವರ ಮಾತಿನಲ್ಲಿ ಏನಾದರೂ ತಪ್ಪು ನಡೆದಿದ್ರೆ, ಅವರು ಸ್ವತಃ ಸ್ಪಷ್ಟನೆ ನೀಡುತ್ತಾರೆ ಎಂದು ಹೇಳಿದರು.

ಕನ್ನಡ ಪ್ರೀತಿ ಯಾರಾದರೂ ಸ್ಟೇಜ್ ಮೇಲೆ ಮಾತನಾಡಿದಾಗ ಮಾತ್ರ ಸೃಷ್ಟಿಯಾಗಬಾರದು. ಅದು ನಮ್ಮ ನಿತ್ಯದ ಜೀವನದ ಭಾಗವಾಗಿರಬೇಕು. ಕೇವಲ ಫೋಸು ಕೊಡುವುದು ಸಾಕಾಗದು. ಕನ್ನಡಕ್ಕಾಗಿ ನಾವು ಏನು ಮಾಡುತ್ತಿದ್ದೇವೆ ಎಂಬುದನ್ನು ಪ್ರತಿಯೊಬ್ಬರೂ ಒಳಗೊಳಗೆ ಕೇಳಿಕೊಳ್ಳಬೇಕು ಎಂದೂ ಹೇಳಿದರು.

ಇದೇ ವೇಳೆ ಹೊಸಬರ ಸಿನಿಮಾಗಳಿಗೂ ಬೆಂಬಲ ನೀಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿ, ಸ್ಟಾರ್ ನಟರ ಸಿನಿಮಾಗೆ ಬೆಂಬಲ ನೀಡಿದರೆ ಸಾಲದು ಎಂಬ ಸಂದೇಶವನ್ನೂ ಕೊಟ್ಟರು.

ಕಮಲ್ ಹಾಸನ್ ಅವರ ವಿವಾದಾತ್ಮಕ ಹೇಳಿಕೆಯ ಬಗ್ಗೆ ಶಿವರಾಜ್ ಕುಮಾರ್ ಮಿತಭಾಷೆಯಲ್ಲಿ ಪ್ರತಿಕ್ರಿಯೆ ನೀಡಿ, ಕನ್ನಡ ಪ್ರೀತಿಯ ಮಹತ್ವವನ್ನು ಉಲ್ಲೇಖಿಸಿದ್ದಾರೆ.

Exit mobile version