MLC Rajendra | ಶಾಸಕರ ಜೊತೆ ಸುರ್ಜೆವಾಲ ಸಭೆಗೆ ರಾಜೇಂದ್ರ ರಾಜಣ್ಣ ವಿರೋಧ..!

ತುಮಕೂರು | ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ರಾಜೇಂದ್ರ (MLC Rajendra) ಅವರು ಶಾಸಕರ ಸಭೆ ಕುರಿತು ಗಂಭೀರ ಆಕ್ಷೇಪ ಹೊರಹಾಕಿದ್ದಾರೆ. “ಇದು ನನ್ನ ವೈಯಕ್ತಿಕ ಅಭಿಪ್ರಾಯ” ಎಂದು ಕೂಡ ಹೇಳಿದ್ದಾರೆ. ಶಾಸಕರೊಂದಿಗೆ ಸಭೆ ನಡೆಸಿದ ಕಾಂಗ್ರೆಸ್ ಹಿರಿಯ ನಾಯಕ ರಣದೀಪ್ ಸುರ್ಜೇವಾಲಾ ನೇತೃತ್ವದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹಾಜರಾತಿ ಅಗತ್ಯವಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸಿಎಂ-ಡಿಸಿಎಂ ಇದ್ದಿದ್ರೆ ಅನುದಾನ ಚರ್ಚೆಗೆ ಅವಕಾಶ – ರಾಜೇಂದ್ರ (MLC Rajendra)

ಅನುದಾನ ಹಾಗೂ ಕ್ಷೇತ್ರದ ಸಮಸ್ಯೆಗಳ ಕುರಿತು ಚರ್ಚಿಸಲು ಮುಖ್ಯಸ್ಥರು ಇರುವುದರಿಂದ ಶಾಸಕರು ನೇರವಾಗಿ ತಮ್ಮ ಆಕ್ಷೇಪಗಳು ಮತ್ತು ಬೇಡಿಕೆಗಳನ್ನು ಮಂಡಿಸಬಹುದಾಗಿತ್ತು. ಅನುದಾನ ವಿಚಾರ ಸಿಎಂ, ಡಿಸಿಎಂ ಇದ್ದಿದ್ರೆ ಶಾಸಕರು ಅವರೊಂದಿಗೆ ಸ್ಪಷ್ಟವಾಗಿ ಚರ್ಚೆ ಮಾಡಬಹುದಾಗಿತ್ತು ಎಂದು ರಾಜೇಂದ್ರ ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಓದಿ : JC Madhuswamy | ಸಿದ್ದರಾಮಯ್ಯನವರಿಗೆ ಮೊದಲಿನ ಖದರ್ ಇಲ್ಲ, ಮೆತ್ತಗಾಗಿದ್ದಾರೆ..!

ರಾಜೇಂದ್ರ ಅವರ ನೇತೃತ್ವದಲ್ಲಿ ಪರಿಷತ್ ಸದಸ್ಯರು ಕೂಡ ಸಭೆಗಾಗಿ ಕೋರಿರುವುದು ಗಮನಾರ್ಹ. ನಾವು ನಮ್ಮ ಸಮಸ್ಯೆಗಳನ್ನು ತಿಳಿಸಿದ್ದೇವೆ. ಈಗ ಅವರು ಏನ್ ಮಾಡ್ತಾರೆ ನೋಡೋಣ ಎಂದು ಅವರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಮೈಸೂರು ಸಮಾವೇಶದ ಬಗ್ಗೆ ರಾಜೇಂದ್ರ (MLC Rajendra) ಸ್ಪಷ್ಟನೆ

ಮೈಸೂರು ಸಮಾವೇಶವನ್ನು ಸರ್ಕಾರದ ಸಾಧನಾ ಸಮಾವೇಶ ಎಂದು ಕರೆಯಲಾಯಿತು. ಇದು ಶಕ್ತಿ ಪ್ರದರ್ಶನ ಅಲ್ಲ, ಸಿಎಂ ತವರು ಜಿಲ್ಲೆ ಆದ್ದರಿಂದ ಸಹಜವಾಗಿ ಗಮನ ಸೆಳೆದಿರಬಹುದು ಎಂದು ರಾಜೇಂದ್ರ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗಷ್ಟೆ ಬಳ್ಳಾರಿಯಲ್ಲೂ ಇಂತಹ ಸಮಾವೇಶ ನಡೆದಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ.

Leave a Reply

Your email address will not be published. Required fields are marked *