ಯಾದಗಿರಿ | ಜಿಲ್ಲೆಯ ಸುರಪುರ ತಾಲೂಕಿನ ತಳವಾರಗೇರಿ ಗ್ರಾಮದಲ್ಲಿ ಅನನ್ಯ ಸಂಪ್ರದಾಯವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಈ ಗ್ರಾಮದಲ್ಲಿ ಯಾವುದೇ ಮುಸ್ಲಿಂ ಜನಸಂಖ್ಯೆ ಇಲ್ಲದಿದ್ದರೂ, ಹಿಂದೂ ಸಮುದಾಯದ ಜನರು ಮೊಹರಂ ಹಬ್ಬವನ್ನು (Moharram Celebration) ಅದ್ದೂರಿಯಾಗಿ ಆಚರಿಸುತ್ತಾರೆ ಎಂಬ ವಿಶಿಷ್ಟ ಸಂಪ್ರದಾಯ ಪ್ರಚಲಿತದಲ್ಲಿದೆ.
ಮೊಹರಂ ಆಚರಣೆ (Moharram Celebration) ಹಿಂದೆ ಇದೆ ವಿಶೇಷ ನಂಬಿಕೆ
ಈ ಆಚರಣೆಯ ಹಿಂದೆ 1925ರ ದಶಕದ ದೈವಿಕ ಅನುಭವವಿದೆ. ಗ್ರಾಮದಲ್ಲಿ ಕಾಲರದಿಂದ ಸಮಸ್ಯೆ ಎದುರಿಸಿದಾಗ, ಗುರುಲಿಂಗಪ್ಪಗೌಡ ಎಂಬ ಹಿರಿಯರಿಗೆ ಕನಸಿನಲ್ಲಿ ಅಲೈ ಪೀರರು ಬಂದು “ನನ್ನನ್ನು ಪ್ರತಿಷ್ಠಾಪನೆ ಮಾಡಿರಿ, ಸಮಸ್ಯೆ ನಿವಾರಣೆಯಾಗುತ್ತದೆ” ಎಂದು ಹೇಳಿದ್ದಾರೆ ಎನ್ನಲಾಗುತ್ತದೆ. ಬಳಿಕ ಗ್ರಾಮದಲ್ಲಿ ಅಲೈ ಪೀರರ ಪ್ರತಿಷ್ಠಾಪನೆಯಿಂದ ಸಮಸ್ಯೆಗಳು ಸರಿದಂತಾಗಿದೆ ಎಂಬ ನಂಬಿಕೆ ಇದೆ.
ಇದನ್ನು ಓದಿ : Heart Attack | ಒಂದೇ ದಿನ ಹೃದಯಾಘಾತದಿಂದ 8 ಮಂದಿ ಸಾವು..!
6 ದಿನಗಳ ಮೊಹರಂ ಹಬ್ಬದಲ್ಲಿ ಹುಸೇನ್, ಲಾಲಬಾಸ್, ಕಾಸಿಂಸಾಬ್, ಮೌಲಾಲಿ ದೇವರ ಪಂಚೆಗಳ ಪ್ರತಿಷ್ಠಾಪನೆ ಮಾಡುತ್ತಾರೆ. ಕೊನೆ ದಿನ “ದಪನ್” ಆಚರಣೆ ನಡೆಯುತ್ತದೆ. ರಮೇಶ್, ಶಾಂತಪ್ಪ, ಶಶಿಕುಮಾರ್‌ಸ್ವಾಮಿ ಮುಂತಾದವರು ದೇವರ ಪಂಚೆ ಸವಾರಿ ನೇತೃತ್ವವಹಿಸುತ್ತಾರೆ. ನೂರಾರು ಯುವಕರು ತಮಟೆ ಸದ್ದಿಗೆ ಅಲೈ ಕುಣಿತದಲ್ಲಿ ಭಾಗವಹಿಸುತ್ತಾರೆ.
ಇದು ಸಾಂಪ್ರದಾಯಿಕ ಆಚರಣೆ ಮಾತ್ರವಲ್ಲ, ಹಿಂದೂ ಮುಸ್ಲಿಂ ಸಾಮರಸ್ಯದ ಪ್ರತೀಕವಾಗಿದೆ. ತಳವಾರಗೇರಿ ಗ್ರಾಮದ ಈ ಆಚರಣೆ ಇಂದಿನ ಧರ್ಮಾಧಾರಿತ ವಿಭಜನೆಯ ಕಾಲದಲ್ಲಿ ಉದಾಹರಣೆಯಾಗಿ ನಿಲ್ಲುತ್ತದೆ.

ಒಟ್ಟಿನಲ್ಲಿ, ತಳವಾರಗೇರಿ ಗ್ರಾಮದ ಮೊಹರಂ ಹಬ್ಬವು ಧರ್ಮಾತೀತ ಸಂಸ್ಕೃತಿಯ ಅತ್ಯುತ್ತಮ ಉದಾಹರಣೆಯಾಗಿ ಬೆಳಗುತ್ತಿದೆ.
One thought on “Moharram Celebration | ಮುಸಲ್ಮಾನರೇ ಇಲ್ಲದ ಈ ಗ್ರಾಮದಲ್ಲಿ ಹಿಂದೂಗಳಿಂದ ಮೊಹರಂ ಆಚರಣೆ”