Pavagada Development| ಬರದ ನಾಡಿಗೆ ಜೀವ ಜಲ ನೀಡಿದ ಸಿಎಂ ಸಿದ್ದರಾಮಯ್ಯ..!

ತುಮಕೂರು | ಜಿಲ್ಲೆಯ ಪಾವಗಡ (Pavagada Development) ತಾಲ್ಲೂಕಿನ ಜನತೆಯ ಮೂರು ದಶಕಗಳ ಕನಸು ಇವತ್ತಿಗೆ ನಿಜವಾಗಿದ್ದು, 2529 ಕೋಟಿ ರೂ. ವೆಚ್ಚದ “ತುಂಗಭದ್ರಾ ಬಹುಗ್ರಾಮ ಕುಡಿಯುವ ನೀರಿನ ಯೋಜನೆ”ಗೆ ಮತ್ತು  2500 ಮೆ.ವ್ಯಾಟ್ ಸೋಲಾರ್ ಪ್ಲಾಂಟ್ ವಿಸ್ತರಣೆಗೂ ಶಂಕುಸ್ಥಾಪನೆ ನಡೆಯಿತು. ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಾವಗಡ (Pavagada Development) ಅಭಿವೃದ್ಧಿಗೆ ಮುನ್ನುಡಿ ಬರೆದ ಸಿಎಂ ಸಿದ್ದರಾಮಯ್ಯ

ಪಾವಗಡದ (Pavagada Development) ಬರದ ನಾಡಿಗೆ ಹೊಸ ಉಸಿರಾಗಿ, 200 ಕಿ.ಮೀ ದೂರದ ಪಂಪಸಾಗರದ ತುಂಗಭದ್ರಾ ಜಲಾಶಯದಿಂದ ಪೈಪ್‌ಲೈನ್ ಮೂಲಕ ಶುದ್ಧ ಕುಡಿಯುವ ನೀರು ಒದಗಿಸಲು ಯೋಜನೆಯ ರೂಪವಿದೆ. ಈ ಮೂಲಕ ಪಾವಗಡ ತಾಲ್ಲೂಕು ಭವಿಷ್ಯದಲ್ಲಿ ನೀರಿನ ಕೊರತೆ ಸಮಸ್ಯೆಯಿಂದ ಮುಕ್ತ ವಾಗಲಿದೆ ಎಂದರು.

ಇದನ್ನು ಓದಿ : Tiptur District | ತಿಪಟೂರು ಜಿಲ್ಲೆ ಪರ ಬ್ಯಾಟ್ ಬೀಸಿದ ಅರಸೀಕೆರೆ ಶಾಸಕ ಶಿವಲಿಂಗೇಗೌಡ..!

ಈ ಯೋಜನೆಯ ಜೊತೆಗೆ, ಈಗಾಗಲೇ ಪ್ರತಿದಿನ 3500 ಮೆ.ವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ನಡೆಯುತ್ತಿರುವ ಪಾವಗಡದಲ್ಲಿ, ಇನ್ನಷ್ಟು 2500 ಮೆ.ವ್ಯಾಟ್ ಶಕ್ತಿಯನ್ನು ವಿಸ್ತರಿಸಲು ಯೋಜನೆ ಹೂಡಲಾಗಿದೆ. ಈ ಸೌರ ಕ್ರಾಂತಿಯಿಂದ ಪಾವಗಡವು ಜಾಗತಿಕ ಮಟ್ಟದಲ್ಲಿ ಗುರುತಿಗೆ ಪಾತ್ರವಾಗಿದೆ ಎಂದು ಹೇಳಿದರು.

ವಿರೋಧ ಪಕ್ಷಗಳು ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಯನ್ನು ಪ್ರಶ್ನಿಸುತ್ತಿದ್ದರೂ, ನಮ್ಮ ಸರ್ಕಾರವು 224 ವಿಧಾನಸಭಾ ಕ್ಷೇತ್ರಗಳಲ್ಲೂ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲಿ 2ನೇ ಸ್ಥಾನ ಮತ್ತು ಜಿಡಿಪಿಯಲ್ಲಿ 3ನೇ ಸ್ಥಾನ ಪಡೆದಿದೆ. 2027ರೊಳಗೆ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಕೂಡ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *