Site icon Kannada Sakshi | Kannada News | ಕನ್ನಡ ಸುದ್ದಿ | Latest Karnataka News

Plane Fire | ದೆಹಲಿ ಏರ್ ಇಂಡಿಯಾದಲ್ಲಿ ಬೆಂಕಿ ; ವಿಮಾನ ಇಳಿದು ಓಡಿದ ಪ್ರಯಾಣಿಕರು..!

ದೆಹಲಿ | ಹಾಂಕಾಂಗ್‌ನಿಂದ ದೆಹಲಿಗೆ ಬಂದ ಏರ್ ಇಂಡಿಯಾ ವಿಮಾನ (AI 315) ದೆಹಲಿ ವಿಮಾನ (Plane Fire) ನಿಲ್ದಾಣದಲ್ಲಿ ಇಳಿದ ತಕ್ಷಣ ಸಹಾಯಕ ವಿದ್ಯುತ್ ಘಟಕದಲ್ಲಿ (APU) ಬೆಂಕಿ ಕಾಣಿಸಿಕೊಂಡ ಘಟನೆ ನವದೆಹಲಿಯಲ್ಲಿ ತೀವ್ರ ಆತಂಕಕ್ಕೆ ಕಾರಣವಾಯಿತು. ಆದರೆ ಸದ್ಯದ ವರದಿಗಳ ಪ್ರಕಾರ ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಗಾಯವಾಗಿಲ್ಲ.

ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ (Plane Fire), ಎಚ್ಚೆತ್ತ ಸಿಬ್ಬಂದಿ

ವಿಮಾನ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (IGI) ವಿಮಾನ ನಿಲ್ದಾಣದ ಗೇಟ್‌ನಲ್ಲಿ ನಿಲ್ಲಿಸಿ, ಪ್ರಯಾಣಿಕರು ಇಳಿಯುತ್ತಿರುವಾಗ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ವಿಮಾನದಲ್ಲಿ ತಾಂತ್ರಿಕ ತುರ್ತು ಕ್ರಮ ಕೈಗೊಂಡು ಎಪಿಯು ಸ್ವಯಂಚಾಲಿತವಾಗಿ ಸ್ಥಗಿತಗೊಂಡಿದೆ.

APU ಎಂದರೆ Auxiliary Power Unit. ಇದು ವಿಮಾನದ ಬಾಲದ ಭಾಗದಲ್ಲಿರುತ್ತದೆ. ಮುಖ್ಯ ಎಂಜಿನ್‌ವಲ್ಲದೆ, ವಿಮಾನ (Plane Fire) ನೆಲದ ಮೇಲೆ ಇರುವಾಗ ವಿದ್ಯುತ್, ಎಸಿ ಮತ್ತು ಇತರ ಕಾರ್ಯಾಚರಣೆಗಳಿಗಾಗಿ ಅಗತ್ಯ ಶಕ್ತಿಯನ್ನು ಒದಗಿಸುತ್ತದೆ. ಈ ಘಟನೆಯಿಂದ ವಿಮಾನಕ್ಕೆ ಸ್ವಲ್ಪ ಹಾನಿಯಾದರೂ, ಎಲ್ಲರೂ ಸುರಕ್ಷಿತವಾಗಿ ವಿಮಾನದಿಂದ ಕೆಳಗಿಳಿದಿದ್ದಾರೆ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ.

ಇದನ್ನು ಓದಿ : Dharmasthala Case | ಧರ್ಮಸ್ಥಳ ಪ್ರಕರಣದ ಬಗ್ಗೆ ಧ್ವನಿ ಎತ್ತಿದ ಮಾಜಿ ಸಿಎಂ ಬೊಮ್ಮಾಯಿ

ಈ ವಿಮಾನವು ವಿಸ್ತಾರಾ ಏರ್ಲೈನ್ಸ್‌ನದ್ದಾಗಿದ್ದು, ಟಾಟಾ ಸಮೂಹದ ಏರ್ ಇಂಡಿಯಾ ಕಂಪನಿಗೆ ವಿಲೀನಗೊಂಡ ಬಳಿಕ ಇದೀಗ ಏರ್ ಇಂಡಿಯಾ ಆಪರೇಟ್ ಮಾಡುತ್ತಿದೆ. ಹೆಚ್ಚಿನ ತಾಂತ್ರಿಕ ಪರಿಶೀಲನೆಗಾಗಿ ವಿಮಾನವನ್ನು ಬಳಕೆಮುಗಿದಂತೆ ನೆಲಕ್ಕಿಳಿಸಲಾಗಿದೆ.

ಈ ಘಟನೆಯ ನಂತರ ವಿಮಾನ ನಿಲ್ದಾಣ ಸಿಬ್ಬಂದಿಗಳ ತ್ವರಿತ ಕ್ರಿಯಾಶೀಲತೆ ಮತ್ತು ಎಮರ್ಜೆನ್ಸಿ ಪ್ರೋಟೋಕಾಲ್‌ಗಳನ್ನು ಅನುಸರಿಸಿದ ಪ್ರಕಾರ, ಹೆಚ್ಚಿನ ಅನಾಹುತವಿಲ್ಲದೇ ಎಲ್ಲರನ್ನೂ ಸುರಕ್ಷಿತವಾಗಿ ಬೇರಡೆ ರವಾನಿಸಿದ್ದಾರೆ.

Exit mobile version