Police Arrest | ಏಕಾಏಕಿ ಒಬ್ಬ ವ್ಯಕ್ತಿಯನ್ನು ಅರೆಸ್ಟ್ ಮಾಡುವ ಅಧಿಕಾರ ಪೊಲೀಸರಿಗೆ ಇದೆಯಾ..?

ಕಾನೂನು | ಭಾರತದ ಸಂವಿಧಾನ ಮತ್ತು ಕ್ರಿಮಿನಲ್ ಪ್ರೊಸಿಜರ್ ಕೋಡ್ (CrPC) ಕೆಲವು ಸಂದರ್ಭಗಳಲ್ಲಿ ಪೊಲೀಸರಿಗೆ ವಾರಂಟ್ ಇಲ್ಲದೆ ವ್ಯಕ್ತಿಯನ್ನು ಅರೆಸ್ಟ್ (Police Arrest) ಮಾಡುವ ಅಧಿಕಾರ ನೀಡಿದೆ. ಆದರೆ, ಇದು ಎಲ್ಲ ಸಂದರ್ಭಗಳಿಗೂ ಅನ್ವಯಿಸುವುದಿಲ್ಲ. ಪ್ರತಿಯೊಬ್ಬ ನಾಗರಿಕನಿಗೂ ತನ್ನ ಮೂಲಭೂತ ಹಕ್ಕುಗಳು ಇದ್ದು, ಯಾವುದೇ ರೀತಿಯ ಕಾನೂನು ಉಲ್ಲಂಘನೆಯು ಮಾನವ ಹಕ್ಕು ಭಂಗಕ್ಕೆ ಕಾರಣವಾಗುತ್ತದೆ.

CrPC ಸೆಕ್ಷನ್ 41 ಪ್ರಕಾರ, ಪೊಲೀಸರು ಈ ಕೆಳಗಿನ ಪರಿಸ್ಥಿತಿಗಳಲ್ಲಿ ವಾರಂಟ್ ಇಲ್ಲದೆ ವ್ಯಕ್ತಿಯನ್ನು (Police Arrest) ಬಂಧಿಸಬಹುದು

  • ವ್ಯಕ್ತಿಯು ಗಂಭೀರ ಅಪರಾಧದಲ್ಲಿ ತೊಡಗಿರುತ್ತಿದ್ದರೆ,
  • ತಪ್ಪೆ ಮಾಡಿದ ಶಂಕೆಯು ಬಹಳ ಬಲವಾದದಾಗಿದ್ದರೆ,
  • ವ್ಯಕ್ತಿ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇದ್ದರೆ
  • ಪೊಲೀಸರು ಅರೆಸ್ಟ್ ಮಾಡದಿದ್ದರೆ, ಆ ವ್ಯಕ್ತಿ ತಪ್ಪಿಸಿಕೊಂಡು ಹೋಗುವ ಸಾಧ್ಯತೆ ಇದ್ದರೆ.

ಇದನ್ನು ಓದಿ : Jamun Fruits | ಈ ನೇರಳೆ ಹಣ್ಣು ಸಿಕ್ಕರೆ ಮಿಸ್ ಮಾಡದೆ ತಿಂದು ಬಿಡಿ..!

ಆದರೆ ಸುಪ್ರೀಂ ಕೋರ್ಟ್ 2014ರ ಮಹತ್ವದ ತೀರ್ಪಿನಲ್ಲಿ ಹೇಳಿದ್ದಂತೆ, 7 ವರ್ಷಕ್ಕಿಂತ ಕಡಿಮೆ ಶಿಕ್ಷೆಯ ಅಪರಾಧಗಳಲ್ಲಿ ಪೊಲೀಸರು ನೇರವಾಗಿ ಅರೆಸ್ಟ್ (Police Arrest) ಮಾಡುವ ಬದಲು, ಮೊದಲು ನೋಟಿಸ್ ನೀಡಬೇಕು. ಆರೋಪಿಗೆ ತನಿಖೆಗೆ ಸಹಕರಿಸಲು ಅವಕಾಶ ನೀಡಬೇಕು. ಈ ನಿಯಮವನ್ನು ಉಲ್ಲಂಘಿಸಿದರೆ, ಪೊಲೀಸರು ತಾವು ನಡೆಸುವ ಕ್ರಿಯೆಗೆ ಕಾನೂನುಬದ್ಧವಾದ ಕಾರಣವನ್ನು ನೀಡಲೇಬೇಕು.

ಪೊಲೀಸರಿಗೆ ಕೆಲ ಸಂದರ್ಭಗಳಲ್ಲಿ ಮಾತ್ರ ಎಚ್ಚರಿಕೆಯಿಂದ ಮತ್ತು ನಿಬಂಧನೆಗಳ ಪಾಲನೆಯೊಂದಿಗೆ ಅರೆಸ್ಟ್ (Police Arrest) ಮಾಡುವ ಅಧಿಕಾರವಿದೆ. ನಾಗರಿಕರು ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಬೇಕು. ಅರೆಸ್ಟ್ ವೇಳೆ ದೌರ್ಜನ್ಯ ಅಥವಾ ಅವ್ಯವಸ್ಥೆ ಕಂಡುಬಂದರೆ, ಮಾನವ ಹಕ್ಕು ಆಯೋಗ ಅಥವಾ ನ್ಯಾಯಾಲಯದ ಮೊರೆ ಹೋಗಬಹುದು.

Leave a Reply

Your email address will not be published. Required fields are marked *