Site icon Kannada Sakshi | Kannada News | ಕನ್ನಡ ಸುದ್ದಿ | Latest Karnataka News

RCB Champions | ಕನಸು ನನಸು ಮಾಡಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು

ಕ್ರೀಡೆ | ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕೊನೆಗೂ ತನ್ನ ಕನಸು ನನಸು (RCB Champions) ಮಾಡಿಕೊಂಡಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ, ಪಂಜಾಬ್ ಕಿಂಗ್ಸ್ ವಿರುದ್ಧ 6 ರನ್‌ಗಳ ಭರ್ಜರಿ ಜಯ (RCB Champions) ಸಾಧಿಸಿ ತನ್ನ ಮೊದಲ ಐಪಿಎಲ್ ಕಪ್ ಎತ್ತಿ ಹಿಡಿದಿದೆ.

ರಜತ್ ಪಟೀದಾರ್ ಮೆಚ್ಚುಗೆಯ ನಾಯಕತ್ವದಿಂದ (RCB Champions) ಆರ್ ಸಿ ಬಿ ವಿಜಯ

ಮೆಚ್ಚುಗೆಯ ನಾಯಕ ರಜತ್ ಪಟೀದಾರ್ ನೇತೃತ್ವದ ಆರ್‌ಸಿಬಿ ತಂಡ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 190 ರನ್ ಕಲೆ ಹಾಕಿತು. ವಿರಾಟ್ ಕೊಹ್ಲಿ (Virat Kohli) (43), ಮಾಯಾಂಕ್ ಅಗರ್ವಾಲ್ (24), ಜಿತೇಶ್ ಶರ್ಮಾ (24) ಹಾಗೂ ರೊಮಾರಿಯೋ ಶೆಫರ್ಡ್ (17) ಅವರ ಕೊಡುಗೆಗಳು ತಂಡಕ್ಕೆ ಬಲ ನೀಡಿದವು. ಪಂಜಾಬ್ ಪರ ಕೈಲ್ ಜೇಮಿಸನ್ ಮತ್ತು ಅರ್ಶ್‌ದೀಪ್ ಸಿಂಗ್ ತಲಾ 3 ವಿಕೆಟ್‌ಗಳನ್ನು ಪಡೆದು ಉತ್ತಮ ಪ್ರದರ್ಶನ ನೀಡಿದರು.

ಇದನ್ನು ಓದಿ : ಪ್ರಭಾಸ್ ನಟನೆಯ ‘The Raja Saab’ ಹಾರರ್ ಥ್ರಿಲ್ಲರ್ ಡಿಸೆಂಬರ್ 5ಕ್ಕೆ ಬಿಗ್ ರಿಲೀಸ್

ಪಂಜಾಬ್ ತಂಡ 191 ರನ್‌ಗಳ ಗುರಿಯನ್ನು ಬೆನ್ನಟ್ಟಲು ಧಿಡೀರ ಚಾಲನೆ ನೀಡಿತು. ಪ್ರಿಯಾಂಶ್ ಆರ್ಯ (24) ಹಾಗೂ ಪ್ರಭ್ ಸಿಮ್ರಾನ್ (26) ಆರಂಭಿಕ ಲಯ ಕೊಟ್ಟರು. ನಂತರ ಜೋಶ್ ಇಂಗ್ಲಿಸ್ 39 ರನ್ ಗಳಿಸಿ ಪಂಜಾಬ್‌ಗೆ ಆಶೆ ಹುಟ್ಟಿಸಿದರು. ಆದರೆ ಶ್ರೇಯಸ್ ಅಯ್ಯರ್ ಈ ಬಾರಿ ಕೇವಲ 1 ರನ್‌ಗೆ ಔಟಾಗಿ ನಿರಾಶೆ ಮೂಡಿಸಿದರು. ಕೊನೆ ಹೊತ್ತಿನಲ್ಲಿ ಶಶಾಂಕ್ ಸಿಂಗ್ (ಅಜೇಯ 61) ಒಬ್ಬರೇ ಹೋರಾಡಿದರು.

ಆರಂಭದಿಂದಲೇ ಬೌಲಿಂಗ್‌ನಲ್ಲಿ ನಿಯಂತ್ರಣ ಮೆರೆದ ಆರ್‌ಸಿಬಿ, ಕೊನೆಯ ಓವರ್‌ವರೆಗೂ ನಡುಗುತ್ತಲೇ ಗೆಲುವಿನತ್ತ ಸಾಗಿತು. ಪಂಜಾಬ್‌ಗೆ ಗೆಲ್ಲಲು ಕೊನೆಯ 6 ಎಸೆತಗಳಲ್ಲಿ 29 ರನ್ ಬೇಕಾಗಿತ್ತು. ಆದರೆ 7 ವಿಕೆಟ್ ಕಳೆದುಕೊಂಡು 184 ರನ್ ಗಳಿಸಿ ಪಂಜಾಬ್ ತಂಡ ಸೋಲಿಗೆ ಶರಣಾಯಿತು. ಈ ಜಯದೊಂದಿಗೆ ಆರ್‌ಸಿಬಿ 18 ವರ್ಷಗಳ ನಿರೀಕ್ಷೆಗೆ ತೆರೆ ಎಳೆಯಿತು.

Exit mobile version