ಬೆಂಗಳೂರು | ಕುಟುಂಬ ಮತ್ತು ಆಸ್ತಿಗೆ ಸಂಬಂಧಿಸಿದಾಗ, ಬಹುಪತ್ನತ್ವ ಅಥವಾ ದ್ವಿತೀಯ ವಿವಾಹದಿಂದ ಜನಿಸಿದ ಮಕ್ಕಳಿಗೆ (Second Wife Children Rights) ಆಸ್ತಿಯಲ್ಲಿ ಹಕ್ಕು ಇದೆಯಾ ಎಂಬ ಪ್ರಶ್ನೆ ಹಲವರಲ್ಲಿ ಅಡಗಿರುತ್ತದೆ. ಭಾರತೀಯ ಕಾನೂನುಗಳಲ್ಲಿ ವಿಶೇಷವಾಗಿ ಹಿಂದೂ ವಾರಸತ್ವ ಕಾಯ್ದೆ, 1956 (Hindu Succession Act, 1956)ನಲ್ಲಿ ಈ ಕುರಿತ ಸ್ಪಷ್ಟತೆ ನೀಡಲಾಗಿದೆ.
ಹಿಂದೂ ಧರ್ಮದವರ ಮಕ್ಕಳಿಗೆ (Second Wife Children Rights) ಹಕ್ಕು ಇದೆ
ಹಿಂದೂ ಧರ್ಮದವರಲ್ಲಿ, ಯಾವುದೇ ಕಾರಣಕ್ಕೂ ದ್ವಿತೀಯ ವಿವಾಹದಿಂದ ಜನಿಸಿದ ಮಕ್ಕಳು ಅಸಂಬಂಧಿತ ಮಕ್ಕಳಾಗದಂತೆ ಪರಿಗಣನೆ ಆಗುತ್ತಾರೆ. ಅಂದರೆ, ಮೊದಲ ಅಥವಾ ಎರಡನೇ ಹೆಂಡತಿಯವರಾಗಲೀ, ಮಕ್ಕಳು ಜನಿಸಿದರೆ ಅವರು ತಂದೆಯ ಸಹಜ ಮಕ್ಕಳಾಗಿದ್ದು, ವಾರಸತ್ವದಲ್ಲಿ ಹಕ್ಕು ಹೊಂದಿರುತ್ತಾರೆ.
ಇದನ್ನು ಓದಿ : Banana Flower | ಮೂತ್ರದ ಸಮಸ್ಯೆಗೆ ಬೆಸ್ಟ್ ಔಷಧಿ ಅಂದ್ರೆ ಅದು ಬಾಳೆ ಹೂವು..!
Indian law (Section 16 of Hindu Marriage Act, 1955) ಪ್ರಕಾರ, ದ್ವಿತೀಯ ವಿವಾಹ ನಿಯಮಬಾಹಿರವಾದರೂ, ಆ ವಿವಾಹದಿಂದ ಜನಿಸಿದ ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕು ಇರುತ್ತದೆ. ದ್ವಿತೀಯ ಪತ್ನಿಯ ವಿವಾಹವು ಕಾನೂನುಬದ್ಧವಾಗಿರದಿದ್ದರೆ, ಆ ಮಹಿಳೆಗೆ ತಂದೆಯ ಆಸ್ತಿಯಲ್ಲಿ ಹಕ್ಕು ಇರದು. ಆದರೆ, ಮಕ್ಕಳಿಗೆ ಹಕ್ಕು ಇರುತ್ತದೆ.
ದ್ವಿತೀಯ ಪತ್ನಿಯಿಂದ ಜನಿಸಿದ ಮಕ್ಕಳಿಗೆ (Second Wife Children Rights) ತಂದೆಯ ಸ್ವಸ್ವತ್ತಿನಲ್ಲಿ ಹಕ್ಕು ಇದೆ. ಅವರ ಹಕ್ಕನ್ನು ಕಾನೂನು ತಿರಸ್ಕರಿಸಲಾರದು. ದ್ವಿತೀಯ ಪತ್ನಿಗೆ (ವಿವಾಹ ಮಾನ್ಯವಿಲ್ಲದಿದ್ದರೆ) ಆಸ್ತಿಯಲ್ಲಿ ಹಕ್ಕಿಲ್ಲ.

ನ್ಯಾಯಾಲಯಗಳು ಎದರೂ ‘ಲೀಗಿಟಿಮೇಟ್ ಚೈಲ್ಡ್’ (Legitimate child) ಅಂದರೆ ಕಾನೂನುಬದ್ಧ ವಿವಾಹದಿಂದ ಜನಿಸಿದ ಮಕ್ಕಳನ್ನಷ್ಟೆ ಅಲ್ಲ,‘ಇಲಿಜೆಟಿಮೇಟ್ ಚೈಲ್ಡ್’ ಗಳಿಗೂ ಆಸ್ತಿಯ ಹಕ್ಕು ನೀಡಿವೆ ಇದು ಮಕ್ಕಳ ಹಕ್ಕನ್ನು ಕಾಪಾಡುವ ಹೋರಾಟಕ್ಕೆ ನೆರವಾಗುತ್ತದೆ.
One thought on “Second Wife Children Rights | ಎರಡನೇ ಪತ್ನಿಗೆ ಜನಿಸಿದ ಮಗುವಿಗೆ ತಂದೆ ಆಸ್ತಿಯಲ್ಲಿ ಹಕ್ಕು ಇದೆಯೇ..?”