Heart Attack | ಒಂದೇ ದಿನ ಹೃದಯಾಘಾತದಿಂದ 8 ಮಂದಿ ಸಾವು..!

ಬೆಂಗಳೂರು | ರಾಜ್ಯದಲ್ಲಿ ಹೃದಯಾಘಾತದ (Heart Attack) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೇವಲ ಒಂದೇ ದಿನ (ಜುಲೈ 6) ರಾಜ್ಯದ ವಿವಿಧ ಭಾಗಗಳಲ್ಲಿ ಎಂಟು ಮಂದಿ ಹೃದಯಾಘಾತದಿಂದ ಸಾವಿಗೀಡಾಗಿರುವ ದುಃಖದ ಘಟನೆಗಳು ವರದಿಯಾಗಿವೆ. ಹೃದಯಾಘಾತಕ್ಕೆ (Heart Attack) 6 ಜಿಲ್ಲೆಯಲ್ಲಿ 8 ಜನರ ಸಾವು ಚಾಮರಾಜನಗರ: ರಾಮಸಮುದ್ರದ ಶಿವಕುಮಾರ್ (52) ಮನೆಯಲ್ಲಿ ಕುಸಿದುಬಿದ್ದು, ಆಸ್ಪತ್ರೆಗೆ ದಾಖಲಿಸಿದರೂ, ಇಸಿಜಿ ಮಾಡುವಷ್ಟರಲ್ಲಿ ಕೊನೆಯುಸಿರು ಎಳೆದಿದ್ದಾರೆ. ಹಾಸನ: ಮಂಗಳೂರಿನಿಂದ ಹಿಂದಿರುಗುತ್ತಿದ್ದ ಜಯನಗರದ ರಂಗನಾಥ್ (57) ಕಾರಿನಲ್ಲಿ ಎದೆನೋವು ಕಾಣಿಸಿಕೊಂಡು, ಆಸ್ಪತ್ರೆಗೆ…

Read More