
MLC Rajendra | ಶಾಸಕರ ಜೊತೆ ಸುರ್ಜೆವಾಲ ಸಭೆಗೆ ರಾಜೇಂದ್ರ ರಾಜಣ್ಣ ವಿರೋಧ..!
ತುಮಕೂರು | ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ರಾಜೇಂದ್ರ (MLC Rajendra) ಅವರು ಶಾಸಕರ ಸಭೆ ಕುರಿತು ಗಂಭೀರ ಆಕ್ಷೇಪ ಹೊರಹಾಕಿದ್ದಾರೆ. “ಇದು ನನ್ನ ವೈಯಕ್ತಿಕ ಅಭಿಪ್ರಾಯ” ಎಂದು ಕೂಡ ಹೇಳಿದ್ದಾರೆ. ಶಾಸಕರೊಂದಿಗೆ ಸಭೆ ನಡೆಸಿದ ಕಾಂಗ್ರೆಸ್ ಹಿರಿಯ ನಾಯಕ ರಣದೀಪ್ ಸುರ್ಜೇವಾಲಾ ನೇತೃತ್ವದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹಾಜರಾತಿ ಅಗತ್ಯವಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಿಎಂ-ಡಿಸಿಎಂ ಇದ್ದಿದ್ರೆ ಅನುದಾನ ಚರ್ಚೆಗೆ ಅವಕಾಶ –…