
Spandana Suicide | ಭೀಮನ ಅಮಾವಾಸ್ಯೆ ದಿನ ಬಂದ ಒಂದು ಕಾಲ್ ಸ್ಪಂದನಾ ಜೀವ ತೆಗೆಯಿತು..!
ಬೆಂಗಳೂರು | ಇನ್ಸ್ಟಾಗ್ರಾಂ ಪರಿಚಯದಿಂದ ಪ್ರೇಮ, ಬಳಿಕ ಮದುವೆ – ಕೊನೆಗೆ ಅನುಮಾನಾಸ್ಪದ ಸಾವು (Spandana Suicide). ಹೌದು, ಮದುವೆಯಾದ ಒಂದು ವರೆ ವರ್ಷದೊಳಗೆ ಯುವತಿ ಸ್ಪಂದನಾ (24) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಕನಕಪುರದ ನಿವಾಸಿ ಸ್ಪಂದನಾ, ಯಲಹಂಕದ ಖಾಸಗಿ ಕಾಲೇಜಿನಲ್ಲಿ ಎಂಬಿಎ ಓದುತ್ತಿದ್ದು, ಇನ್ಸ್ಟಾಗ್ರಾಂ ಮೂಲಕ ಅಭಿಷೇಕ್ ಎಂಬಾತನ ಜೊತೆ ಪರಿಚಯವಾಗಿತ್ತು. ಕುಟುಂಬದ ವಿರೋಧದ ನಡುವೆಯೂ ಇಬ್ಬರು ಮದುವೆಯಾಗಿದ್ದರು. ಮಾದನಾಯಕನಹಳ್ಳಿಯ ಅಂಚೆಪಾಳ್ಯದಲ್ಲಿ ವಾಸವಾಗಿದ್ದರು. ಭೀಮನ…