ತುಮಕೂರು | ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ನಡೆದ ಪ್ರಮುಖ ಅಪರಾಧ ಪ್ರಕರಣಗಳ ಪತ್ತೆ ಹಚ್ಚುವಲ್ಲಿ ಜಿಲ್ಲಾ ಪೊಲೀಸ್ (Tumakuru Police) ಇಲಾಖೆ ಯಶಸ್ವಿಯಾದ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸ್ಪಿ ಅಶೋಕ್ ವಿ.ಕೆ. ಅವರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.
170 ಆರೋಪಿಗಳನ್ನು ಬಂಧಿಸಿರುವ (Tumakuru Police) ತುಮಕೂರು ಪೊಲೀಸರು
ತುಮಕೂರು ಜಿಲ್ಲೆಯ ಐದು ವಿಭಾಗಗಳಲ್ಲಿ ನಡೆದ ಕೊಲೆ, ಮನೆಗಳ್ಳತನ, ಸರಗಳ್ಳತನ, ರಾಬರಿ ಮತ್ತು ಡಕಾಯಿತಿ ಸೇರಿದಂತೆ ಒಟ್ಟು 130 ಪ್ರಕರಣಗಳು ದಾಖಲಾಗಿದ್ದು, ಈ ಸಂಬಂಧ 170 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಇದನ್ನು ಓದಿ : Fire Accident | ಆಕಸ್ಮಿಕ ಬೆಂಕಿ ಅವಘಡಕ್ಕೆ ಹುಲ್ಲಿನ ಬಣವೆ ಸುಟ್ಟು ಭಸ್ಮ..!
ಬಂಧಿತರಿಂದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೋಟಿ ಕೋಟಿ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
- 4.31 ಕೆಜಿ ಚಿನ್ನ – ಮೌಲ್ಯ: ₹4 ಕೋಟಿ
- 7 ಕೆಜಿ 207 ಗ್ರಾಂ ಬೆಳ್ಳಿ – ಮೌಲ್ಯ: ₹7.20 ಲಕ್ಷ
- 99 ಬೈಕ್ಗಳು – ಮೌಲ್ಯ: ₹1.11 ಕೋಟಿ
- 4 ಕಾರುಗಳು, 1 ಆಟೋ
- ಜಾನುವಾರುಗಳು – ಮೌಲ್ಯ: ₹3 ಲಕ್ಷ
- ಇತರೆ ವಸ್ತುಗಳು – ಮೌಲ್ಯ: ₹36.73 ಲಕ್ಷ
ಈ ಮೂಲಕ ಒಟ್ಟು ವಶಪಡಿಸಿಕೊಂಡ ವಸ್ತುಗಳ ಮೌಲ್ಯ ₹6.61 ಕೋಟಿ ಆಗಿದೆ ಎಂದು ಎಸ್ಪಿ ಅಶೋಕ್ ಮಾಹಿತಿ ನೀಡಿದರು.

ಅಪರಾಧ ನಿಯಂತ್ರಣ ಮತ್ತು ಸಾರ್ವಜನಿಕ ಭದ್ರತೆಗಾಗಿ ಜಿಲ್ಲಾ ಪೊಲೀಸರು (Tumakuru Police) ನಿರಂತರ ನಿಗಾ ಮತ್ತು ಕಾರ್ಯಚರಣೆ ನಡೆಸುತ್ತಿರುವುದರ ಪರಿಣಾಮ ಈ ಯಶಸ್ಸು ಸಾಧ್ಯವಾಗಿದೆ ಎಂದ ಅವರು, ಸಾರ್ವಜನಿಕ ಸಹಕಾರವೂ ಅಪಾರವಾಗಿದೆ ಎಂಬುದನ್ನು ಒತ್ತಿಹೇಳಿದರು.