Tumkur Crime | ಹಫ್ತಾ ವಸೂಲಿಗೆ ಬಂದು ಖಾದರ್ ಮೇಲೆ ಮಚ್ಚು ಬೀಸಿದ್ದ ಪುಂಡರು

ತುಮಕೂರು | ನಗರದ ಮೆಳೆಕೋಟೆ ಮುಖ್ಯ ರಸ್ತೆಯಲ್ಲಿ ಬೆಳಕಿಗೆ ಬಂದಿದ್ದ ಗಂಭೀರ ಘಟನೆ ಸುತ್ತ ಮುತ್ತಲಿನ ಜನರಲ್ಲಿ ಭಯ ಮೂಡಿಸಿತ್ತು. ಟೀ ಅಂಗಡಿಯ ಸಮೀಪ ಮನೆಯಿಂದ ಹೊರಗೆ ಕುಳಿತಿದ್ದ ಖಾದರ್ ಎಂಬ ಆಟೋ ಕನ್ಸಲ್ಟೆನ್ಸಿ ಮಾಲೀಕರ ಮೇಲೆ ಪುಂಡರ ಗುಂಪೊಂದು ಲಾಂಗ್ ಹಿಡಿದು ದಾಳಿ (Tumkur Crime) ನಡೆಸಿದ್ದು, ಬಳಿಕ ಪರಿಸ್ಥಿತಿಯನ್ನು ನಿಯಂತ್ರಿಸಲು ಬಂದ ಪೊಲೀಸರ ಮೇಲೆಯೂ ಹಲ್ಲೆಗೆ ಮುಂದಾಗಿರುವ ಘಟನೆ ಸಿಸಿ ಟಿವಿಯಲ್ಲಿ ದಾಖಲಾಗಿತ್ತು.

ಪ್ರತಿ ತಿಂಗಳು 5 ಸಾವಿರ ಹಫ್ತ ನೀಡುವಂತೆ ಪುಂಡರಿಂದ (Tumkur Crime) ಬೆದರಿಕೆ

ರೆಹಮತ್, ಅಜ್ಜೂ, ಶಬು, ತಬ್ರೆಜ್, ಇಮ್ರಾನ್ ಮತ್ತು ಇರ್ಫಾನ್ ಎಂಬ 6 ಮಂದಿ ಪುಂಡರು ನಜರಾಬಾದ್‌ನಲ್ಲಿ ವ್ಯಾಪಾರ ಮಾಡುವ ಖಾದರ್ ಅವರಿಂದ ಪ್ರತಿ ತಿಂಗಳು ₹5,000 ಹಫ್ತಾ ಕೊಡಬೇಕೆಂದು ಒತ್ತಾಯಿಸಿದ್ದರು. ಇದಕ್ಕೆ ವಿರುದ್ಧವಾಗಿ ತಿರುಗಿ ಬಿದ್ದ ಖಾದರ್ ಅವರ ಮೇಲೆ ಲಾಂಗ್ ಬೀಸಿದರಲ್ಲದೆ, ಚೇರ್‌ನಿಂದ ಹೊಡೆದು ಪರಾರಿಯಾಗಿದ್ದಾರೆ.

ಇದನ್ನು ಓದಿ : Cyber Law India | ಸೈಬರ್ ವಂಚನೆ ಮಾಡಿದ್ರೆ ಈ ಶಿಕ್ಷೆ ಪಕ್ಕಾ..?

ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಖಾದರ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆ ನಿಯಂತ್ರಿಸಲು ಸ್ಥಳಕ್ಕೆ ಬಂದ ಮಹಿಳಾ ಪಿಎಸ್ಐ ಸೇರಿದಂತೆ ಪೊಲೀಸರ ಮೇಲೆಯೂ ಹಲ್ಲೆಗೆ ಪುಂಡರು ಮುಂದಾಗಿದ್ದರು, ಇವರ ವಿರುದ್ಧ ತುಮಕೂರು ತಿಲಕ್ ಪಾರ್ಕ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಪುಂಡರ ವಿರುದ್ಧ ದಾಖಲಾದ ಸೆಕ್ಷನ್‌ಗಳು

IPC ಸೆಕ್ಷನ್‌ಗಳು : 189(2), 184(4), 191(2), 192(3), 308(5), 351(5), 118(1), 352, 324, 54, 190, Arms Act 1959 – ಸೆಕ್ಷನ್ 27

ಘಟನೆಗೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಈ ರೀತಿಯ ಸಾರ್ವಜನಿಕ ಅಶಾಂತಿ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇತ್ತೀಚೆಗಷ್ಟೆ ಸಮೀಪದ ಸಮೋಸ ಸೆಂಟರ್ ಬಳಿ ಕೂಡ ಪುಂಡರ ಗುಂಪು ಹಲ್ಲೆ ನಡೆಸಿದ ಘಟನೆ (Tumkur Crime) ನಡೆದಿದ್ದು, ಇದು ಎರಡನೇ ಘಟನೆ ವರದಿಯಾದ ಕಾರಣದಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *