ತುಮಕೂರು | ಮಧುಗಿರಿ ತಾಲ್ಲೂಕಿನ ತುಮ್ಮಲು ಗ್ರಾಮದಲ್ಲಿ 40 ಎಕರೆ ಸರ್ಕಾರಿ ಭೂಮಿಯ ಅಕ್ರಮ ಪರಭಾರೆ ಮತ್ತು ಪರಿವರ್ತನೆ ನಡೆದಿರುವ ಭಾರೀ ಹಗರಣ (Tumkur Land Fraud) ಬೆಳಕಿಗೆ ಬಂದಿದೆ. ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ಮೌಲ್ಯದ ಜಮೀನನ್ನು ಖಾಸಗಿಗೆ ವರ್ಗಾವಣೆ ಮಾಡಲಾಗಿದೆ ಎಂಬ ಗಂಭೀರ ಆರೋಪಗಳು ದಾಖಲಾಗಿದೆ.
ಡಿಸಿ ಲಾಗಿನ್ ದುರುಪಯೋಗ ಮಾಡಿ ಜಮೀನು (Tumkur Land Fraud) ವರ್ಗಾವಣೆ
ತುಮಕೂರು ಜಿಲ್ಲಾಧಿಕಾರಿ ಲಾಗಿನ್ ಮತ್ತು ಡಿಜಿಟಲ್ ಸಹಿಯನ್ನು ದುರುಪಯೋಗ ಪಡಿಸಿ, ನಿಧನ ಹೊಂದಿರುವ ಉಪವಿಭಾಗಾಧಿಕಾರಿ ಹೆಸರಿನಲ್ಲಿ ನಕಲಿ ಎಸಿ ಆದೇಶ ಸೃಷ್ಟಿಸಲಾಗಿದೆ. 2005ರಲ್ಲಿ ಗಣಿ ಶಾಸ್ತ್ರಿ, ಭಾನುಪ್ರಕಾಶ್ ಹಾಗೂ ಸತ್ಯಪ್ರಕಾಶ್ ಹೆಸರಿಗೆ ಎಸಿ ಮಂಜೂರಾದಂತೆ ದಾಖಲೆ ರೂಪಿಸಿ, ನಂತರ 2007-08ರಲ್ಲಿ ಮಹಮ್ಮದ್ ಇಕ್ಬಾಲ್ ಅವರಿಗೆ ಮಾರಾಟ ಮಾಡಲಾಗಿದೆ.
ಇದನ್ನು ಓದಿ : Revenue Review | ಕಂದಾಯ ಇಲಾಖೆ ಸಭೆಯಲ್ಲಿ ಅಧಿಕಾರಿಗಳ ಬೆವರಿಳಿಸಿದ ಕೃಷ್ಣಬೈರೇಗೌಡ..!
ಈ ವರ್ಷ ಜನವರಿಯಲ್ಲಿ ಭೂಮಿ ಗೋಪಾಲಗೌಡ ಎಂಬುವರಿಗೆ ವರ್ಗಾವಣೆಯಾಗಿದ್ದು, ಅವರಿಂದ ಗೌರಿಬಿದನೂರು ಶಾಸಕರ ಪುತ್ರ ಪವನ್ ಅವರ ಒಡೆತನದ ಏಷ್ಯನ್ ಫ್ಯಾಬ್ ಟೆಕ್ ಲಿಮಿಟೆಡ್ ಕಂಪನಿಗೆ ಪರಭಾರೆಯಾಗಿದೆಯಂತೆ. ಸೌರಶಕ್ತಿ ಯೋಜನೆಯ ಹೆಸರಿನಲ್ಲಿ ಲ್ಯಾಂಡ್ ಕನ್ವರ್ಷನ್ ಮಾಡಲಾಗಿದ್ದು, ಅದಕ್ಕೆ ಜಿಲ್ಲಾಧಿಕಾರಿ ಡಿಜಿಟಲ್ ಸಹಿಯನ್ನು ಬಳಸಲಾಗಿದೆ.
ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೆ ವಿಎ ಭಾನುಪ್ರಕಾಶ್ ಅವರನ್ನು ಅಮಾನತು ಮಾಡಲಾಗಿದೆ. ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಆದೇಶ ಹೊರಡಿಸಿದ್ದಾರೆ. ಆದರೆ, ಈ ಹಗರಣದಲ್ಲಿ ಅದೇವಿಧವಾಗಿ ಜಿಲ್ಲಾಧಿಕಾರಿ ಹಾಗೂ ಎಡಿಸಿ ತಿಪ್ಪೇಸ್ವಾಮಿ ಅವರ ಪಾತ್ರಕ್ಕೂ ಶಂಕೆ ವ್ಯಕ್ತವಾಗುತ್ತಿದೆ.

ಇಡೀ ಹಗರಣದ ಹಿಂದೆ ಗೌರಿಬಿದನೂರು ಪ್ರಭಾವಿ ಶಾಸಕರ ರಾಜಕೀಯ ಲಾಬಿ ಕಾರ್ಯನಿರ್ವಹಿಸಿದೆ ಎಂಬ ಅನುಮಾನಗಳು ಹೆಚ್ಚಾಗುತ್ತಿವೆ.
One thought on “Tumkur Land Fraud | ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ಮೌಲ್ಯದ ಭೂಮಿ ಡೀಲ್”