Yettinahole Project | ಎತ್ತಿನಹೊಳೆ ಯೋಜನೆ ಗೊಂದಲಗಳಿಗೆ ಡಿ ಕೆ ಶಿವಕುಮಾರ್ ತೆರೆ

ತುಮಕೂರು | ಯಾರನ್ನೂ ಬಲವಂತವಾಗಿ ಒಕ್ಕಲೆಬ್ಬಿಸುವುದಿಲ್ಲ. ನಿಮ್ಮ ಹಿತಕ್ಕೆ ತಕ್ಕಂತೆ, ನಿಮ್ಮ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಎತ್ತಿನಹೊಳೆ ಯೋಜನೆ (Yettinahole Project) ಜಾರಿಗೆ ತರಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೊರಟಗೆರೆಯ ರೈತರಿಗೆ ಭರವಸೆ ನೀಡಿದ್ದಾರೆ.

ಎತ್ತಿನಹೊಳೆ ಯೋಜನೆಯ (Yettinahole Project) ಪರಿಶೀಲನೆ ಮಾಡಿದ ಡಿಕೆಶಿ

ಪೂಚನಹಳ್ಳಿ ಬಳಿ ಭೈರಗೊಂಡಲು ಜಲಾಶಯ ನಿರ್ಮಾಣ ಸ್ಥಳವನ್ನು ಡಿಸಿಎಂ ಶನಿವಾರ ಪರಿಶೀಲನೆ ನಡೆಸಿದರು. ಬಳಿಕ ಜಲಾಶಯ ನಿರ್ಮಾಣದಿಂದ ಪ್ರಭಾವಿತರಾಗುವ ಗ್ರಾಮಸ್ಥರ ಜೊತೆ ನೇರ ಸಂವಾದ ನಡೆಸಿ, ಅವರ ಅಭಿಪ್ರಾಯಗಳನ್ನು ಆಲಿಸಿದರು. ಈ ಭಾಗದ ರೈತರಿಗೆ ಅನ್ಯಾಯ ಆಗದಂತೆ ಯೋಜನೆ ಜಾರಿಗೆ ತರುವ ಭರವಸೆ ನೀಡಿದರು.

ಈ ಯೋಜನೆಯಡಿಯಲ್ಲಿ 5 ಟಿಎಂಸಿ ನೀರನ್ನು ಸಂಗ್ರಹಿಸಬಹುದಾದ ಭೈರಗೊಂಡಲು ಜಲಾಶಯ ನಿರ್ಮಿಸಲು ಉದ್ದೇಶಿಸಲಾಗಿದೆ. ಇದು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ನೆರವಾಗಲಿದೆ ಎಂದರು.

ಇದನ್ನು ಓದಿ : US Strikes Iran | ಇರಾನ್ ಮೇಲೆ ಯುದ್ಧ ಸಾರಿದ ಅಮೇರಿಕಾ ; ನಡುಗಿದ ಇರಾನ್..!

ಸ್ಥಳೀಯರು ತಮ್ಮ ಭೂಮಿ ಪುಕ್ಕಟೆ ಕಿತ್ತಿಕೊಳ್ಳುವ ಭೀತಿ ವ್ಯಕ್ತಪಡಿಸಿದಾಗ, ನಿಮ್ಮ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳಲಾಗುವುದಿಲ್ಲ. ಪರಿಹಾರ ನೀವೇ ತಿಳಿಸಿ. ಸಮರ್ಥ ಮತ್ತು ನ್ಯಾಯಸಮ್ಮತ ಪರಿಹಾರ ನೀಡುತ್ತೇವೆ. ನಿಮಗೆ ತೊಂದರೆಯಾಗದಂತೆ ಯೋಜನೆ ಜಾರಿಗೆ ತರುತ್ತೇವೆ ಎಂದು ಡಿಸಿಎಂ ಸ್ಪಷ್ಟಪಡಿಸಿದರು.

ಗ್ರಾಮಸ್ಥರು ಸೂಚಿಸಿದ ಪರ್ಯಾಯ ಜಲಾಶಯ ಸ್ಥಳವನ್ನು ಪರಿಶೀಲನೆ ಮಾಡುವ ಭರವಸೆ ನೀಡಿ, ನಿಮ್ಮ ಸಲಹೆಗಳ ಆಧಾರದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.

ಪ್ರಮುಖ ಅಂಶಗಳು

  • 5 ಟಿಎಂಸಿ ನೀರು ಸಂಗ್ರಹ ಗುರಿ
  • 17,000 ಕೋಟಿ ರೂ. ಯೋಜನೆ ವೆಚ್ಚ
  • 5,000 ಎಕರೆ ಪ್ರದೇಶ ಮುಳುಗಡೆಯ ಭೀತಿ
  • ರೈತರ ಸಲಹೆಗಳ ಮೇಲೆ ನಿಗಾ
  • ಪರಿಹಾರ ವಿಷಯದಲ್ಲಿ ಸಮಾನತೆಗಾಗಿ ನಿರ್ಧಾರ

One thought on “Yettinahole Project | ಎತ್ತಿನಹೊಳೆ ಯೋಜನೆ ಗೊಂದಲಗಳಿಗೆ ಡಿ ಕೆ ಶಿವಕುಮಾರ್ ತೆರೆ

Leave a Reply

Your email address will not be published. Required fields are marked *