Site icon Kannada Sakshi | Kannada News | ಕನ್ನಡ ಸುದ್ದಿ | Latest Karnataka News

Ashok Statement | ಸಿದ್ದರಾಮಯ್ಯ ಸ್ಲೀಪಿಂಗ್ ಸಿಎಂ – ಆರ್ ಅಶೋಕ್ ವ್ಯಂಗ್ಯ

ಬೆಂಗಳೂರು | ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಉಗ್ರ ರೂಪ ತಾಳಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಆರ್. ಅಶೋಕ್ (Ashok Statement) ಗಂಭೀರ ಆರೋಪ ಮಾಡಿದ್ದಾರೆ. ಇದು ಬೇರೇನಲ್ಲ, ಸರ್ಕಾರದ ಭ್ರಷ್ಟಾಚಾರದ ಕೇವಲ ಸ್ಯಾಂಪಲ್‌ ಮಾತ್ರ. ಕರ್ನಾಟಕದ ಪ್ರತಿಯೊಂದು ಮೂಲೆಯಲ್ಲಿ, ವಸತಿ ಯೋಜನೆಗಳ ಲಾಭ ಪಡೆಯಲು ಲಂಚ ಕೊಡುವುದು ಸಾಮಾನ್ಯವಾಗಿದೆ ಎಂದು ಅವರು ಲೇವಡಿ ಮಾಡಿದರು.

ಕಾಂಗ್ರೆಸ್ ಸರ್ಕಾರದ ಮೇಲೆ ಆರ್ ಅಶೋಕ್ (Ashok Statement)  ವಾಗ್ದಾಳಿ

ಲಂಚ ಕೊಡಿ – ಮನೆ ಪಡೆಯಿರಿ ಎಂಬುದೇ ಸರ್ಕಾರದ ಸಂಪ್ರದಾಯವಾಗಿದೆ ಎಂದು ಟೀಕೆ ಮಾಡಿದ ಅವರು, ಈ ಬಗ್ಗೆ ಈಗ ಸುತ್ತುತ್ತಿರುವ ಆಡಿಯೋ ಕ್ಲಿಪ್ ನಿಷ್ಕರ್ಷೆಗೆ ಸಾಕ್ಷಿಯಾಗಲಿದೆ ಎಂದರು. ಆಡಿಯೋ ನಿಜವೆಂದು ಶಾಸಕ ಬಿ.ಆರ್. ಪಾಟೀಲ್ ಅವರೇ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ಶಾಸಕರಿಂದಲೂ ಈ ಕುರಿತು ವಾಸ್ತವಿಕ ಮಾಹಿತಿ ಹೊರಬರುತ್ತಿದೆ ಎಂಬ ಅಶೋಕ್ ಆರೋಪ, ಸರ್ಕಾರದ ಒಳಾಂಗಣದ ಅಸ್ಥಿರತೆಯನ್ನೂ ಸೂಚಿಸುತ್ತಿದೆ. ಇಷ್ಟು ದಿನ ವಿಪಕ್ಷಗಳೇ ಈ ಬಗ್ಗೆ ಚರ್ಚೆ ಮಾಡುತ್ತಾ ಬಂದವು. ಆದರೆ ಈಗ ಆಡಳಿತ ಪಕ್ಷದ ಶಾಸಕರೇ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತಿದ್ದಾರೆ. ಇದು ಎಷ್ಟು ಭ್ರಷ್ಟ ಸರ್ಕಾರ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಪ್ರತಿಕ್ರಿಯೆ ನೀಡಿದರು.

60% ಕಮಿಷನ್ ಇಲ್ಲದೇ ಯಾವುದೇ ಫೈಲು ಕದಲಲ್ಲ ಎಂಬ ಜನರ ಅಭಿಪ್ರಾಯವೂ ಸರಿಯಾಗಿದೆ ಎಂದು ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರು ಸ್ಲೀಪಿಂಗ್ ಸಿಎಂ, ಯಾವುದಕ್ಕೂ ಸ್ಪಂದನೆ ನೀಡ್ತಿಲ್ಲ ಎಂದು ಗಂಭೀರ (Ashok Statement) ಆರೋಪವನ್ನೂ ಮಾಡಿದ್ದಾರೆ.

ಇದನ್ನು ಓದಿ : Alcohol Awareness | ಮದ್ಯಪಾನ ಸೇವನೆ ಆರೋಗ್ಯಕ್ಕೆ ಒಳ್ಳೆಯದೇ..? ಅಥವಾ ಕೆಟ್ಟದ್ದೇ..?

ಎಚ್.ಕೆ. ಪಾಟೀಲ್ ಪತ್ರದ ವಿಚಾರ ಮತ್ತು ಗಣಿ ಇಲಾಖೆಯಲ್ಲಿನ ಲೂಟಿ ಕೂಡ ಬಹಿರಂಗವಾಗಿದೆ. ಕಾಂಗ್ರೆಸ್ ಶಾಸಕರೇ ಬಾಯಿ ಬಿಟ್ಟರೆ ಈ ಸರ್ಕಾರ ಮೂರು ದಿನವೂ ಉಳಿಯಲ್ಲ ಎಂದ ಅಶೋಕ್, ವಸತಿ ಇಲಾಖೆಯ ಹಗರಣದಲ್ಲಿ ದೊಡ್ಡ ಮಟ್ಟದ ರಾಜಕೀಯ ನಾಯಕರು ಸೇರಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

224 ಕ್ಷೇತ್ರಗಳಲ್ಲಿಯೂ ವಸತಿ ಭ್ರಷ್ಟಾಚಾರ ನಡೆದಿದೆ. ಶಾಸಕರನ್ನು ಮನವೊಲಿಸಲು ಹುದ್ದೆ ನೀಡೋ ರಾಜಕೀಯ ನಡೆಯುತ್ತಿದೆ. ಬಡವರ ಹಣವನ್ನು ಲೂಟಿ ಮಾಡುತ್ತಿರುವ ಈ ಸರ್ಕಾರ ತೆಗೆಯಬೇಕು ನ್ಯಾಯಾಂಗ ತನಿಖೆ ನಡೆಸಲೇಬೇಕು ಎಂದು ಅಶೋಕ್ ಒತ್ತಾಯಿಸಿದ್ದಾರೆ.

Exit mobile version