ಬೆಂಗಳೂರು | ಕರ್ನಾಟಕದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆ, ಇದೀಗ ಬೆಂಗಳೂರಿಗರಿಗೆ ಮತ್ತೊಂದು ಶಾಕ್ ಸಿಕ್ಕಿದೆ. ಬೈಕ್ ಟ್ಯಾಕ್ಸಿಗೆ ನಿಷೇಧ ವಿಧಿಸಿರುವ ಹಿನ್ನೆಲೆಯಲ್ಲಿಯೇ, ಆಟೋ ಚಾಲಕರು ದರ (Auto Fare Hike) ಹೆಚ್ಚಿಸುತ್ತಿದ್ದಾರೆ. ಇದೀಗ ಅಧಿಕೃತವಾಗಿ ಆಟೋ ಪ್ರಯಾಣ ದರ ಏರಿಕೆಗೊಳ್ಳಲಿದೆ ಎಂದು ಮೂಲಗಳು ತಿಳಿಸುತ್ತಿವೆ.
ಹೊಸ ಆಟೋ ದರ (Auto Fare Hike)ವಿವರ
ಮೂಲ ದರ: ಈಗಿನ ₹30 ರಿಂದ ₹36ಕ್ಕೆ ಏರಿಕೆ
ಅರಂಭಿಕ ದೂರ: 1.9 ಕಿಮೀ ಒಳಗೆ ₹36
ಪ್ರತಿ ಕಿಮೀ ದರ: ಈಗಿನ ₹15ರಿಂದ ₹18ಕ್ಕೆ ಹೆಚ್ಚಳ
ದರ ಏರಿಕೆಗೆ ಸಿಎಂ ಸಿದ್ದರಾಮಯ್ಯ ಸಹಿ ಮಾತ್ರ ಬಾಕಿ
ಇದನ್ನು ಓದಿ : Post Delivery Care | ಮಗು ಹುಟ್ಟಿದ ನಂತರ ತಾಯಿಯ ಆರೈಕೆ ಹೇಗೆ ಮಾಡಬೇಕು..?
ಏರಿಕೆಯ ಹಿಂದಿನ ಹಿನ್ನೆಲೆ
- 2021ರಲ್ಲಿ ತಂತ್ರಬದ್ಧವಾಗಿ ದರ ಪರಿಷ್ಕರಣೆ ಆಗಿತ್ತು
- ನಂತರ 4 ವರ್ಷಗಳಲ್ಲಿ ಇಂಧನ ದರ, ಉಡುಪು, ಹೊಟೇಲ್ ಖರ್ಚು ಸೇರಿದಂತೆ ಆಟೋ ಚಾಲಕರ ಜೀವನ ದುಸ್ತರ
- ಈ ಹಿನ್ನೆಲೆಯಲ್ಲಿ ಆಟೋ ಯೂನಿಯನ್ ಹಲವು ಬಾರಿ ಮನವಿ ಸಲ್ಲಿಸಿತ್ತು
ಆಟೋ ಯೂನಿಯನ್ ಆಗ್ರಹ
- ಮೂಲ ದರ ₹40 ಮಾಡುವಂತೆ ಒತ್ತಾಯ
- ಪ್ರತಿ ಕಿಮೀ ₹20 ಆಗಬೇಕೆಂದು ಮನವಿ
- ₹36 ದರಕ್ಕೆ ಚಾಲಕರಿಗೆ ಚಿಲ್ಲರೆ ಸಮಸ್ಯೆ ಉಂಟಾಗಲಿದೆ ಎಂದು ಪೀಸ್ ಆಟೋ ಯೂನಿಯನ್ ಅಭಿಪ್ರಾಯ

ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ, ಆಟೋ ದರ (Auto Fare Hike) ಕೂಡಾ ಹೆಚ್ಚಳಗೊಂಡಿದೆ. ಇದೀಗ ಸರಕಾರದಿಂದ ಅಧಿಕೃತ ಆದೇಶ ಹೊರಬೀಳುವುದು ಕೇವಲ ಕಾಲ ಪ್ರಶ್ನೆ. ಸಾರ್ವಜನಿಕರಿಗೆ ಹೆಚ್ಚಿನ ವೆಚ್ಚದ ಹೊರೆ, ಆಟೋ ಚಾಲಕರಿಗೆ ಸ್ವಲ್ಪ ಸಮಾಧಾನ ಇಬ್ಬರ ಮಧ್ಯೆ ಸಮತೋಲನ ಸಾಧಿಸುವುದು ಸರ್ಕಾರದ ಮುಂದಿರುವ ಸವಾಲು.
One thought on “Auto Fare Hike | ಬೆಂಗಳೂರಿಗರಿಗೆ ಬಿಗ್ ಶಾಕ್ ಕೊಟ್ಟ ಆಟೋ ಚಾಲಕರು..!”