Site icon Kannada Sakshi | Kannada News | ಕನ್ನಡ ಸುದ್ದಿ | Latest Karnataka News

Chaitanya Suicide | ರೀಲ್ಸ್ ಮಾಡಬೇಡ ಅಂದಿದ್ದೆ ತಡ ನೇಣಿಗೆ ಶರಣಾದ ಚೈತನ್ಯ

ತುಮಕೂರು | ತುಮಕೂರು ಗ್ರಾಮಾಂತರದ ಡಿ ಹೊಸಹಳ್ಳಿ ನಿವಾಸಿಯಾದ 22 ವರ್ಷದ ಚೈತನ್ಯ (Chaitanya Suicide) ಎಂಬ ಯುವತಿ ಪ್ರೇಮ ಸಂಬಂಧದ ವಿಚಾರವಾಗಿ ಸಂಭವಿಸಿದ ಜಗಳದ ಬೆನ್ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ.

ವಿಜಯ್ ಕುಮಾರ್ ನನ್ನು ಪ್ರೀತಿಸುತ್ತಿದ್ದ (Chaitanya Suicide) ಚೈತನ್ಯ

ಎಸ್‌ಎಸ್‌ಐಟಿ ಕಾಲೇಜಿನಲ್ಲಿ ಡಿಗ್ರಿ ಅಂತಿಮ ವರ್ಷದ ವಿದ್ಯಾರ್ಥಿನಿ ಹಾಗೂ ಮೇಕಪ್ ಆರ್ಟಿಸ್ಟ್ ಆಗಿದ್ದ ಚೈತನ್ಯ, ಪಕ್ಕದ ರಾಮನಪಾಳ್ಯದ ವಿಜಯ್ ಕುಮಾರ್ ಎಂಬ ಚಾಲಕರೊಂದಿಗೆ ಕಳೆದ ಹಲವು ವರ್ಷಗಳಿಂದ ಪ್ರೇಮ ಸಂಬಂಧದಲ್ಲಿದ್ದರು.

ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ ಅಪ್‌ಲೋಡ್ ಮಾಡಿರುವುದನ್ನು ವಿರೋಧಿಸಿದ ವಿಜಯ್, ನೆನ್ನೆ ರಾತ್ರಿ (ಜೂನ್ 24) ಜೋರಾದ ಜಗಳ ಮಾಡಿದ್ದು, ಇದೇ ಆತ್ಮಹತ್ಯೆಗೆ ದಾರಿ ಮಾಡಿಕೊಟ್ಟಿದೆ ಎನ್ನಲಾಗಿದೆ.

ಚೈತನ್ಯ ತಮ್ಮ ತಾಯಿ ಸೌಭಾಗ್ಯಮ್ಮ ಜೊತೆ ವಾಸವಿದ್ದರೆ, ಘಟನೆ ಸಮಯದಲ್ಲಿ ತಾಯಿ ಮಲಗಿದ್ದ ರೂಮಿಗೆ ಚಿಲಕ ಹಾಕಿ, ಚೈತನ್ಯ ಕಿಟಕಿ ಬಳಿ ವಿಜಯ್ ಜೊತೆ ಜಗಳ ಮಾಡಿದ್ದಾರೆ. ಜಗಳ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನು ಓದಿ : Tumkur Land Fraud | ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ಮೌಲ್ಯದ ಭೂಮಿ ಡೀಲ್

ಘಟನೆ ಬಳಿಕ ವಿಜಯ್ ಕುಮಾರ್, ಚೈತನ್ಯ ಅವರ ಅತ್ತೆ ಪ್ರಭಾವತಿಗೆ ಕರೆ ಮಾಡಿ ಆತ್ಮಹತ್ಯೆಯ ಮಾಹಿತಿ ನೀಡಿದ್ದಾನೆ. ಬಾಗಿಲು ಲಾಕ್ ಇದ್ದುದರಿಂದ, ವಿಜಯ್ ಬೀಗ ಒಡೆದು ಬಾಗಿಲು ತೆರೆದಿದ್ದು ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ.

ಚೈತನ್ಯ ತಾಯಿ ಸೌಭಾಗ್ಯಮ್ಮ, ನನ್ನ ಮಗಳ ಸಾವಿಗೆ ವಿಜಯ್ ಹೊಣೆಗಾರ ಎಂದು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಈಗಾಗಲೇ ವಿಜಯ್ ಕುಮಾರ್‌ನನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

Exit mobile version