Site icon Kannada Sakshi | Kannada News | ಕನ್ನಡ ಸುದ್ದಿ | Latest Karnataka News

Congress Tax Relief | ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಅಧಿಕಾರಿಗಳು..!

ದೆಹಲಿ | ಕಾಂಗ್ರೆಸ್ ಪಕ್ಷಕ್ಕೆ ಆದಾಯ ತೆರಿಗೆ ವಿನಾಯಿತಿಯ (Congress Tax Relief) ಸೀಮಿತ ನಿರೀಕ್ಷೆಗೆ ದೊಡ್ಡ ಹಿನ್ನಡೆಯಾಗಿದೆ. 2018-19ರ ಹಣಕಾಸು ವರ್ಷದಲ್ಲಿ 199.15 ಕೋಟಿ ರೂಪಾಯಿ ದೇಣಿಗೆಗಳ ಮೇಲೆ ತೆರಿಗೆ ವಿನಾಯಿತಿ ಪಡೆಯಲು ಸಲ್ಲಿಸಿದ್ದ ಅರ್ಜಿಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT) ವಜಾಗೊಳಿಸಿದೆ.

ಕಾಂಗ್ರೆಸ್ (Congress Tax Relief) ಸಲ್ಲಿಸಿದ್ದ ಆದಾಯ ತೆರಿಗೆ ವಿನಾಯ್ತಿ ಅರ್ಜಿ ವಜಾ

ವಿನಾಯಿತಿಗೆ ಅರ್ಹವಾಗಿರಲು ಅಗತ್ಯವಿರುವ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 13A ಅಡಿಯಲ್ಲಿ ನೀಡಿರುವ ಕೆಲವು ಪ್ರಮುಖ ಷರತ್ತುಗಳನ್ನು ಕಾಂಗ್ರೆಸ್ ಉಲ್ಲಂಘಿಸಿದೆ ಎಂಬ ಆರೋಪಕ್ಕೆ ಆಧಾರವಿಟ್ಟು ಅರ್ಜಿ ವಜಾ ಮಾಡಲಾಗಿದೆ.

ಇದನ್ನು ಓದಿ : Plane Fire | ದೆಹಲಿ ಏರ್ ಇಂಡಿಯಾದಲ್ಲಿ ಬೆಂಕಿ ; ವಿಮಾನ ಇಳಿದು ಓಡಿದ ಪ್ರಯಾಣಿಕರು..!

ಅದರ ಪರಿಣಾಮವಾಗಿ, 199 ಕೋಟಿ ರೂ.ಗಳ ಮೇಲೆ ಯಾವತ್ತೂ ತೆರಿಗೆ ವಿನಾಯಿತಿ ನೀಡಲಾಗದು ಎಂಬ ತೀರ್ಮಾನವನ್ನು ITAT ಪ್ರಕಟಿಸಿದೆ.

ಕಾಂಗ್ರೆಸ್ ತನ್ನ ಐಟಿ ರಿಟರ್ನ್ (Congress Tax Relief) ಅನ್ನು ಫೆಬ್ರವರಿ 2, 2019 ರಂದು ಸಲ್ಲಿಸಿತ್ತು. ಆದರೆ 2018ರ ಡಿಸೆಂಬರ್ 31ನೇ ತಾರೀಖಿಗೆ ಅದಕ್ಕೆ ಗಡುವು ಕೊಟ್ಟಿದ್ದರಿಂದ ಅದು ತಡವಾಗಿ ಸಲ್ಲಿಸಿದ ಪ್ರಕರಣವಾಗಿತ್ತು. ಇದರ ಜೊತೆಗೆ, ಸೆಪ್ಟೆಂಬರ್ 2019 ರ ಪರಿಶೀಲನೆ ವೇಳೆ 14.49 ಲಕ್ಷ ರೂ. ನಗದು ದೇಣಿಗೆಯ ಲೆಕ್ಕ ಪತ್ರ ಕಂಡುಬಂದಿತ್ತು.

2021ರಲ್ಲಿ ಈ ಅರ್ಜಿಯನ್ನು ಐಟಿ ಇಲಾಖೆ ತಿರಸ್ಕರಿಸಿತ್ತು. ನಂತರ 2023ರಲ್ಲಿ ಐಟಿ ಆಯುಕ್ತರು ಕೂಡ ಅದನ್ನೇ ದೃಢಪಡಿಸಿದರು. ಕೊನೆಗೆ ITAT ಕೂಡ ಕಾಂಗ್ರೆಸ್‌ಗೆ ಯಾವುದೇ ಮಧ್ಯಂತರ ರಿಲೀಫ್ ನೀಡಿಲ್ಲ.

Exit mobile version