Site icon Kannada Sakshi | Kannada News | ಕನ್ನಡ ಸುದ್ದಿ | Latest Karnataka News

Digital Arrest Scam | ಡಿಜಿಟಲ್ ಅರೆಸ್ಟ್ ಎನ್ನುವುದು ಭಾರತದ ಕಾನೂನಿನಲ್ಲಿ ಇದ್ಯಾ..?

ಕಾನೂನು | ಡಿಜಿಟಲ್ ಅರೆಸ್ಟ್ ಎಂಬ ಪದವು ಇತ್ತೀಚೆಗೆ ಬಹಳಷ್ಟು ವೈರಲ್ ಆಗಿದೆ. ಆದರೆ, ಭಾರತದ ಯಾವುದೇ ಕಾನೂನಿನಲ್ಲಿ “ಡಿಜಿಟಲ್ ಅರೆಸ್ಟ್” (Digital Arrest Scam) ಎಂಬುದು ಅಧಿಕೃತವಾಗಿ ಅಸ್ತಿತ್ವದಲ್ಲಿಲ್ಲ. ಇದು ಕಾನೂನುಬದ್ಧವಾದ ಬಂಧನದ ಪ್ರಕ್ರಿಯೆಯ ಭಾಗವೇ ಅಲ್ಲ.

ಡಿಜಿಟಲ್ ಅರೆಸ್ಟ್ ಸ್ಕ್ಯಾಮ್ (Digital Arrest Scam) ಯಾವ ರೀತಿ ಮಾಡ್ತಾರೆ ಗೊತ್ತಾ..?

ಇದು ಸಾಮಾನ್ಯವಾಗಿ ಸೈಬರ್ ವಂಚಕರು ಬಳಸುವ ಶಬ್ದ. ನೀವು ಹಣ ಕಳ್ಳಸಾಗಣೆ ಅಥವಾ ಮನಿಲಾಂಡರಿಂಗ್‌ನಲ್ಲಿ ಭಾಗಿಯಾಗಿದ್ದೀರಿ ಎಂದು ಹೇಳಿ, ನಕಲಿ ಪೊಲೀಸ್ ಅಥವಾ ಎನ್‌ಫೋರ್ಸ್‌ಮೆಂಟ್ ಅಧಿಕಾರಿಗಳಂತೆ ಪರಿಚಯಿಸಿ, ವೀಡಿಯೋ ಕಾಲ್ ಮೂಲಕ ಜನರನ್ನು ಬೆದರಿಸುವ ಕೃತ್ಯ. ಅವರು ಈಗ ನೀವು ಡಿಜಿಟಲ್ ಅರೆಸ್ಟ್‌ (Digital Arrest Scam) ಆಗಿದ್ದೀರಿ, ಇದೀಗ ವಿಚಾರಣೆ ನಡೆಸುತ್ತೇವೆ, ಬೇಲ್ ಬೇಕಾದರೆ ಹಣ ಪಾವತಿಸಿ ಎಂದು ನಂಬಿಸುತ್ತಾರೆ.

ಇದನ್ನು ಓದಿ : Safe Sex | ಸೆಕ್ಸ್ ವೇಳೆ ಕಾಂಡೋಮ್ ಬಳಸುವುದರಿಂದ ಏನು ಪ್ರಯೋಜನ..?

ಭಾರತದಲ್ಲಿ ಯಾರಾದರೂ ಬಂಧನವಾಗಬೇಕೆಂದರೆ ಅದು ಭಾರತೀಯ ದಂಡ ಸಂಹಿತೆ (IPC) ಮತ್ತು ಅಪರಾಧ ವಿಧಾನ ಸಂಹಿತೆ (CrPC) ಅಡಿಯಲ್ಲಿ ನಡೆಯಬೇಕು. ಪೊಲೀಸರ ಬಳಿ ಬಂಧನ ವಾರಂಟ್ ಅಥವಾ ನ್ಯಾಯಾಲಯದ ಆದೇಶ ಇರಬೇಕು. ಕೇವಲ ವೀಡಿಯೋ ಕಾಲ್, SMS ಅಥವಾ ಇಮೇಲ್ ಮೂಲಕ ಯಾರನ್ನೂ ಕಾನೂನುಬದ್ಧವಾಗಿ ಬಂಧಿಸಲು ಸಾಧ್ಯವಿಲ್ಲ.

ಡಿಜಿಟಲ್ ಅರೆಸ್ಟ್ ಸ್ಕ್ಯಾಮ್ (Digital Arrest Scam) ನಿಂದ  ಬಚಾವ್ ಆಗೋದು ಹೇಗೆ..?

Exit mobile version