ರಾಯಚೂರು | 14ನೇ ಹಣಕಾಸಿನ ಆಯೋಗದಿಂದ (Finance Commission) 15ನೇ ಆಯೋಗದವರೆಗೆ ರಾಜ್ಯಕ್ಕೆ ಸುಮಾರು 80,000 ಕೋಟಿ ರೂ ಅನುದಾನ ನಷ್ಟವಾಗಿದೆ. ಆದರೆ ಈ ಕುರಿತು ಯಾವುದೇ ಬಿಜೆಪಿ ಸಂಸದರೂ ಧ್ವನಿ ಎತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ರಾಯಚೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಹ್ಲಾದ್ ಜೋಷಿಯವರು ಪ್ರಧಾನಿಯವರು ಸಮೀಪವಿರುವ ಪ್ರಭಾವಿ ಸಚಿವರಾಗಿದ್ದರೂ, ರಾಜ್ಯಕ್ಕೆ 11,495 ಕೋಟಿ ರೂ ವಿಶೇಷ ಅನುದಾನ ಬಿಡುಗಡೆಗೆ ನೆರವಾಗಿಲ್ಲವೆಂದು ಟೀಕಿಸಿದರು. ಕರ್ನಾಟಕದ ಹಿತಕ್ಕಾಗಿ ಅವರು ಧ್ವನಿ ಎತ್ತದಿರುವುದು ನೈತಿಕತೆಯ ಕೊರತೆ ಎಂದರು.
ಕಲ್ಯಾಣ ಕರ್ನಾಟಕಕ್ಕೆ ಕೇಂದ್ರದ ಅನುದಾನ (Finance Commission) ಒತ್ತಾಯ
ರಾಜ್ಯ ಸರ್ಕಾರ ಪ್ರತಿವರ್ಷ ಈ ಭಾಗಕ್ಕೆ 5,000 ಕೋಟಿ ರೂ ನೀಡುತ್ತಿರುವುದನ್ನು ಉಲ್ಲೇಖಿಸಿ, ಕೇಂದ್ರದಿಂದಲೂ ಸಮಾನ ಸಹಕಾರ ಅಗತ್ಯವಿದೆ ಎಂದರು. ಈ ಭಾಗದ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ವಿಚಾರವನ್ನು ಪರಿಶೀಲಿಸಲಾಗುವುದು ಎಂದರು.
ಇದನ್ನು ಓದಿ : Lokayukta | ಲೋಕಾಯುಕ್ತ ಅಧಿಕಾರಿಗಳ ವಿರುದ್ಧವೇ ಲೋಕಾಯುಕ್ತಕ್ಕೆ ದೂರು..!
16ನೇ ಹಣಕಾಸಿನ ಆಯೋಗದ (Finance Commission) ಪ್ರತಿನಿಧಿಗಳನ್ನು ಭೇಟಿ ಮಾಡಿ, ಹೆಚ್ಚಿನ ಅನುದಾನವನ್ನು ರಾಜ್ಯಕ್ಕೆ ಒದಗಿಸುವಂತೆ ಮನವಿ ಮಾಡಲಾಗಿದೆ. ಈ ಸಂಬಂಧ ಪ್ರಧಾನಿ ಮತ್ತು ಹಣಕಾಸು ಸಚಿವರನ್ನು ಭೇಟಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ನೇಮಕಾತಿಗೆ ಆದೇಶ
ಕಲ್ಯಾಣ ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿತಕ್ಕೆ ಶಿಕ್ಷಕರ ಕೊರತೆಯೇ ಪ್ರಮುಖ ಕಾರಣವಾಗಿದೆ. ಹೊಸ ಶಿಕ್ಷಕರ ನೇಮಕಾತಿಗೆ ಈಗಾಗಲೇ ಆದೇಶ ನೀಡಲಾಗಿದೆ. ಉತ್ತಮ ಫಲಿತಾಂಶಕ್ಕಾಗಿ ಸರ್ಕಾರ ತಕ್ಕ ಕ್ರಮ ಕೈಗೊಳ್ಳಲಿದೆ ಎಂದರು. ಸಚಿವ ಎಚ್.ಕೆ. ಪಾಟೀಲ್ ಅವರು ಅಕ್ರಮ ಗಣಿಗಾರಿಕೆ ತನಿಖೆಗೆ ವಿಶೇಷ ನ್ಯಾಯಾಲಯ ರಚನೆಗೆ ಪತ್ರ ಬರೆದಿದ್ದು, ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ಸಂತೋಷ್ ಹೆಗಡೆ ವರದಿ, ಪಾದಯಾತ್ರೆ ಮತ್ತು ಅದರ ಆಧಾರದ ಮೇಲೆ ತನಿಖೆ ಅಗತ್ಯವೆಂದು ಸಿಎಂ ಹೇಳಿದರು.