ತುಮಕೂರು | ಲೋಕಾಯುಕ್ತ (Lokayukta) ಕಚೇರಿಯೊಳಗೆ ಭ್ರಷ್ಟಾಚಾರ ಮತ್ತು ಅಕ್ರಮಗಳು ನಡೆಯುತ್ತಿರುವುದರ ಬಗ್ಗೆ ಮಾಹಿತಿ ಹಕ್ಕು ಹೋರಾಟಗಾರರು ಗಂಭೀರ ದೂರು ದಾಖಲು ಮಾಡಿದ್ದಾರೆ.
ತುಮಕೂರು ಲೋಕಾಯುಕ್ತ (Lokayukta) ಅಧಿಕಾರಿಗಳ ಮೇಲೆ ಆರೋಪ
ಆರ್‌ಟಿಐ ಕಾರ್ಯಕರ್ತರು ಸಿದ್ಧಪಡಿಸಿದ ನಾಲ್ಕು ಪುಟಗಳ ವಿವರವಾದ ದೂರನ್ನು ಬೆಂಗಳೂರು ಲೋಕಾಯುಕ್ತ ಕಚೇರಿಗೆ ಸಲ್ಲಿಸಿದ್ದಾರೆ. ಈ ದೂರಿನಲ್ಲಿ ತುಮಕೂರು ಲೋಕಾಯುಕ್ತ (Lokayukta) ಅಧಿಕಾರಿಗಳ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಇದನ್ನು ಓದಿ : Revenue Department | ಸಭೆ ವೇಳೆ ಮೊಬೈಲ್ ನಲ್ಲಿ ಆ ವಿಡಿಯೋ ನೋಡುತ್ತಿದ್ದ ಅಧಿಕಾರಿಗಳು..!
ದಾಳಿ ನಡೆಸಿದ ನಂತರವೂ, ಭ್ರಷ್ಟ ಅಧಿಕಾರಿಗಳಿಗೆ ಪೂರಕ ಚಾರ್ಜ್‌ಶೀಟ್ ಹಾಕಲಾಗುತ್ತಿದೆ ಎಂಬ ಆರೋಪ ಇದರಲ್ಲಿ ಮುಖ್ಯವಾಗಿದೆ. ಇದರೊಂದಿಗೆ, ಹತ್ತುಕ್ಕೂ ಹೆಚ್ಚು ಅಕ್ರಮ ಹಾಗೂ ನಿರ್ಲಕ್ಷ್ಯವಾದ ನಡೆಯನ್ನು ಗುರುತಿಸಿ, ಉಪ ಲೋಕಾಯುಕ್ತ (Lokayukta) ವೀರಪ್ಪ ಅವರ ಬಳಿ ಈ ದೂರನ್ನು ಸಲ್ಲಿಸಿದ್ದಾರೆ.

ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡಬೇಕಾದ ಲೋಕಾಯುಕ್ತ (Lokayukta) ಸಂಸ್ಥೆಯಲ್ಲೇ ಏನು ನಡೆಯುತ್ತಿದೆ ಎಂಬುದನ್ನು ಈ ದೂರು ಬೆಳಕಿಗೆ ತರುತ್ತದೆ. ಹೀಗಾಗಿ, ಈ ದೂರಿನ ತನಿಖೆ ಜವಾಬ್ದಾರಿಯಿಂದ ನಡೆಯಬೇಕು ಹಾಗೂ ಸತ್ಯ ಬಯಲಿಗೆ ಬರಬೇಕೆಂಬ ನಿರೀಕ್ಷೆ ಸಾರ್ವಜನಿಕರಲ್ಲಿ ಮೂಡಿದೆ.