Site icon Kannada Sakshi | Kannada News | ಕನ್ನಡ ಸುದ್ದಿ | Latest Karnataka News

Gruha Lakshmi Yojana | ಗೃಹಲಕ್ಷ್ಮಿ ಹಣದ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ದೊಡ್ಡ ಘೋಷಣೆ

ಬೆಂಗಳೂರು | ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯು (Gruha Lakshmi Yojana) ಸಾವಿರಾರು ಮಹಿಳೆಯರಿಗೆ ಬದುಕು ಕಟ್ಟಿಕೊಳ್ಳುವ ಶಕ್ತಿ ನೀಡಿದ್ದು, ಹಲವರು ತಮ್ಮ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಂಡಿದ್ದಾರೆ. ಕೆಲವರು ಈ ಹಣದಿಂದ ಸ್ವಯಂ ಉದ್ಯೋಗ ಆರಂಭಿಸಿ, ಸಮಾಜಕ್ಕೂ ಮಾದರಿಯಾಗಿದ್ದಾರೆ.

ಇದನ್ನು ಓದಿ : Hemavathi Link Canal | ಕುಣಿಗಲ್ ರೈತರಿಗಾಗಿ ನಾನು ಉಗ್ರ ಹೋರಾಟಕ್ಕೆ ಸಿದ್ಧ..!

ಏಪ್ರಿಲ್ ತಿಂಗಳ ಗೃಹಲಕ್ಷ್ಮಿ (Gruha Lakshmi Yojana) ಹಣ ಜಮೆಗೆ ಡೇಡ್ ಫಿಕ್ಸ್

ಇದರಲ್ಲಿ ಇತ್ತೀಚೆಗೆ, ಎರಡು ತಿಂಗಳ ಗೃಹಲಕ್ಷ್ಮಿ ಹಣ (Gruha Lakshmi Yojana) ಜಮೆಯಾಗಿಲ್ಲ ಎಂಬ ಮಹಿಳೆಯರಿಂದ ಅಸಮಾಧಾನ ವ್ಯಕ್ತವಾಗಿದೆ. ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಬಾಕಿ ಇರುವ ಏಪ್ರಿಲ್ ತಿಂಗಳ ಹಣವನ್ನು ಒಂದು ವಾರದ ಒಳಗಾಗಿ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು. ತಾಂತ್ರಿಕ ಕಾರಣದಿಂದ ಸಣ್ಣ ವಿಳಂಬವಾಗಿದ್ದು, ಯಾವುದೇ ಗೊಂದಲವಿಲ್ಲ, ಎಂದು ತಿಳಿಸಿದ್ದಾರೆ.

ಈ ಯೋಜನೆಯಿಂದ ಮಹಿಳೆಯರು ಸ್ವಾವಲಂಬಿಗಳಾಗುತ್ತಿದ್ದಾರೆ. ಯೋಜನೆ ನಿರ್ವಹಣೆಯಲ್ಲಿನ ಸಮಸ್ಯೆಯನ್ನು ಸರ್ಕಾರ ಗಮನದಲ್ಲಿಟ್ಟುಕೊಂಡಿದೆ. ಎಲ್ಲ ಬಾಕಿ ಹಣಗಳನ್ನು ತ್ವರಿತವಾಗಿ ವಿತರಿಸಲಾಗುವುದು, ಎಂದು ಭರವಸೆ ನೀಡಿದ್ದಾರೆ.

Exit mobile version