Site icon Kannada Sakshi | Kannada News | ಕನ್ನಡ ಸುದ್ದಿ | Latest Karnataka News

Hemavathi Link Canal | ಕುಣಿಗಲ್ ರೈತರಿಗಾಗಿ ನಾನು ಉಗ್ರ ಹೋರಾಟಕ್ಕೆ ಸಿದ್ಧ..!

ತುಮಕೂರು | ಕುಣಿಗಲ್ ತಾಲ್ಲೂಕು ತುಮಕೂರು ಜಿಲ್ಲೆಯ ಅತಿದೊಡ್ಡ ಕೃಷಿ ಪ್ರದೇಶಗಳಲ್ಲಿ ಒಂದಾಗಿದ್ದು, ಇತ್ತೀಚಿನ ದಶಕಗಳಲ್ಲಿ ನೀರಿನ ತೀವ್ರ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆ ಲಿಂಕ್ ಕೆನಾಲ್ (Hemavathi Link Canal) ಯೋಜನೆ ರೈತರಿಗಾಗಿ ಅನಿವಾರ್ಯವಾಗಿದ್ದು, ಇದನ್ನು ವಿರೋಧಿಸುವುದಕ್ಕೆ ಅರ್ಥವಿಲ್ಲ ಎಂದು ಸ್ಥಳೀಯ ಶಾಸಕ ಡಾ. ರಂಗನಾಥ್ ತಿಳಿಸಿದ್ದಾರೆ.

ಇದನ್ನು ಓದಿ : Poverty | ಬಡವರು ಬಡವರಾಗಿಯೇ ಉಳಿಯೋದಕ್ಕೆ ಯಾರು ಕಾರಣ..?

ನಮ್ಮ ರೈತರ ಹಿತಾಸಕ್ತಿ ಕಾಪಾಡುವ ಕೆಲಸದಲ್ಲಿ ನಾನು ಹಿಂದೆ ಸರಿಯಲ್ಲ. ಲಿಂಕ್ ಕೆನಾಲ್ (Hemavathi Link Canal) ಯೋಜನೆ ನಮ್ಮ ರೈತರಿಗೆ ಜೀವನದ ಆಧಾರ. ಇದನ್ನು ವಿಳಂಬಗೊಳಿಸಲು ಪ್ರಯತ್ನವಾದರೆ, ನಾನು ಸಹ ಉಗ್ರ ಹೋರಾಟಕ್ಕೆ ಸಿದ್ಧನಿದ್ದೇನೆ  ಎಂದಿದ್ದಾರೆ.

ಲಿಂಕ್ ಕೆನಾಲ್ (Hemavathi Link Canal) ಯೋಜನೆ ರಾಜಕೀಯ ಕಣ್ಣುಗಳಿಂದ ನೋಡಬೇಡಿ

ಕುಣಿಗಲ್ ರೈತರು ಹಾಗೂ ಇಡೀ ತುಮಕೂರು ಜಿಲ್ಲೆಯ ರೈತರು ಒಂದೇ. ಈ ಯೋಜನೆ ಯಾರಿಗೂ ಹಾನಿಕಾರಕವಲ್ಲ. ದಿವಂಗತ ವೈಕೆ ರಾಮಯ್ಯ ಮತ್ತು ಹುಚ್ಚಮಾಸ್ತಿಗೌಡರಂತಹ ಹೋರಾಟಗಾರರ ಪ್ರಯತ್ನದ ಫಲವಾಗಿ ಹೇಮಾವತಿ ನೀರು ಜಿಲ್ಲೆಗೆ ಹರಿಯುತ್ತಿದೆ. ಈ ಹಿನ್ನಲೆ ಒಪ್ಪಿಕೊಳ್ಳದೆ, ರಾಜಕೀಯ ಕಣ್ಣುಗಳಿಂದ ಯೋಜನೆ ನೋಡಬಾರದು ಎಂದು ಹೇಳಿದ್ದಾರೆ.

ಇನ್ನು ರಾಜ್ಯ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತರಲು ತ್ವರಿತ ಕ್ರಮ ಕೈಗೊಂಡಿದ್ದು, ಆಡಳಿತಾತ್ಮಕ ಅಡೆತಡೆಗಳಿಂದ ರೈತರ ಹಕ್ಕು ವಂಚಿತವಾಗಬಾರದು ಎಂಬುದು ಶಾಸಕರ ನಿಲುವಾಗಿದೆ.

Exit mobile version