ಆರೋಗ್ಯ ಸಲಹೆ | ನವಜಾತ ಶಿಶುಗಳು (Newborn Babies) ಬಿಕ್ಕಳಿಸಿ ಅಳುವುದು ಸಾಮಾನ್ಯ ಸಂಗತಿಯೇ. ಆದರೆ ಕೆಲವು ಮಕ್ಕಳಲ್ಲಿ ಅನಿಯಮಿತವಾಗಿ ಬಿಕ್ಕಳಿಕೆ (Hiccups In Babies) ಕಾಣಿಸಿಕೊಳ್ಳುವುದು ಪೋಷಕರಲ್ಲಿ ಆತಂಕ ಉಂಟುಮಾಡುತ್ತದೆ. ಶಿಶುಗಳಿಗೆ ಬಿಕ್ಕಳಿಕೆ ಬರುವುದು ಸಹಜವೇನಾದರೂ, ಅದರ ಹಿಂದೆ ಕೆಲವೊಂದು ವೈದ್ಯಕೀಯ ಮತ್ತು ಶರೀರದ ಕ್ರಿಯಾಶೀಲತೆಯ ಕಾರಣಗಳಿವೆ.
ವೈದ್ಯರ ಪ್ರಕಾರ, ಶಿಶುಗಳ ಡೈಅಫ್ರಾಗಂ (Diaphragm) ಎಂದರೆ ಉಸಿರಾಟದ ಪ್ರಮುಖ ಪೆಷಿ, ಇನ್ನೂ ಸಂಪೂರ್ಣವಾಗಿ ವಿಕಸಿಸಿಲ್ಲ. ಹೀಗಾಗಿ ಊಟ ಮಾಡಿದ ನಂತರ ಅಥವಾ ತಕ್ಷಣವಾದ ಉಸಿರಾಟದ ಬದಲಾವಣೆಗಳು ಈ ಪೆಷಿಯಲ್ಲಿ ಆಘಾತ ಉಂಟುಮಾಡಿ ಬಿಕ್ಕಳಿಕೆ ತರುವ ಸಾಧ್ಯತೆ ಇದೆ.
ಬಿಕ್ಕಳಿಕೆಯ (Hiccups In Babies) ಪ್ರಮುಖ ಕಾರಣಗಳು
- ಶಿಶುಗಳು ತಾಯಿ ಎದೆ ಹಾಲು ಹೆಚ್ಚು ವೇಗವಾಗಿ ಕುಡಿಯುವಾಗ.
- ಗಾಳಿಯನ್ನು ಹೆಚ್ಚು ಒಳಗೆಳೆಯುವಾಗ
- ಹಸಿವಾದಾಗ ಅಥವಾ ಹೊಟ್ಟೆ ತುಂಬಿದಾಗ
- ಕೆಲವೊಮ್ಮೆ ತಾಪಮಾನ ಬದಲಾವಣೆ ಅಥವಾ ಉಸಿರಾಟದ ಸಮಸ್ಯೆಗಳಿಂದ ಕೂಡಾ ಬಿಕ್ಕಳಿಕೆ ಉಂಟಾಗಬಹುದು.
ಇದನ್ನು ಓದಿ : Suicide Law India | ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರೆ ಆರೋಪಿಗೆ ಶಿಕ್ಷೆ ಆಗುತ್ತಾ..?
ಬಿಕ್ಕಳಿಕೆ (Hiccups In Babies) ನಿಯಂತ್ರಣಕ್ಕೆ ಪೋಷಕರು ಏನು ಮಾಡಬೇಕು?
- ತಿನ್ನುವ ಮೊದಲು ಅಥವಾ ನಂತರ ಹೊಟ್ಟೆ ಮೇಲೆ ಮೃದುವಾಗಿ ಮಸಾಜ್ ಮಾಡುವುದು.
- ಬಿಕ್ಕಳಿಕೆ ತೀವ್ರವಾಗಿದ್ರೆ ಅಥವಾ ಹೆಚ್ಚು ಸಮಯದಿಂದ ಇರೋದಾದ್ರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಬಿಕ್ಕಳಿಕೆ ಶಿಶುಗಳಲ್ಲೊಂದು ಸಾಮಾನ್ಯ ಬೆಳವಣಿಗೆ. ಆದರೆ ಅದು ದೈನಂದಿನ ಚಟುವಟಿಕೆಗೆ ಅಡ್ಡಿಯಾಗಿದ್ರೆ ವೈದ್ಯರ ಸಲಹೆ ಅವಶ್ಯಕ.