ಜೆರುಸಲೇಂ | ಇಸ್ರೇಲ್ ಇರಾನ್‌ನ ಮೇಲೆ (Israel Iran Conflict) ಮಾಡಿದ ಅತ್ಯಂತ ತೀವ್ರ ವೈಮಾನಿಕ ದಾಳಿಯಲ್ಲಿ ಕನಿಷ್ಠ 78 ಮಂದಿ ಸಾವನ್ನಪ್ಪಿದ್ದು, 329 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮೃತರಲ್ಲಿ ಇರಾನ್‌ನ ಪರಮಾಣು ಇಂಧನ ಸಂಸ್ಥೆಯ ಮಾಜಿ ಮುಖ್ಯಸ್ಥ ಫೆರೆಡೌನ್ ಅಬ್ಬಾಸಿ, ಹಾಗೂ 6 ಜನ ಪ್ರಮುಖ ಪರಮಾಣು ವಿಜ್ಞಾನಿಗಳು ಸೇರಿದ್ದಾರೆ ಎನ್ನಲಾಗಿದೆ.
ಇರಾನ್ ಮೇಲೆ (Israel Iran Conflict) ವಾಯು ದಾಳಿ ಮಾಡಿದ ಇಸ್ರೇಲ್
ಸ್ಟ್ರೆಂಗ್ತ್ ಆಫ್ ಎ ಲಯನ್ ಎಂಬ ಹೆಸರಿನ ರಹಸ್ಯ ಕಾರ್ಯಾಚರಣೆಯಡಿಯಲ್ಲಿ ಇಸ್ರೇಲ್ ಟೆಹರಾನ್ ಸೇರಿದಂತೆ ಹಲವು ಸ್ಥಳಗಳಲ್ಲಿ ಕ್ಷಿಪಣಿ ದಾಳಿ ನಡೆಸಿದ್ದು, ಇದರಿಂದ ಪರಮಾಣು ಸೌಲಭ್ಯಗಳು ಮತ್ತು ಸೈನಿಕ ನೆಲೆಗಳು ಗುರಿಯಾಗಿದ್ದವು.
ಇದನ್ನು ಓದಿ : Hemavathi Link Canal | ಜೈಲಿನಿಂದ ಬಿಡುಗಡೆಯಾದವರಿಗೆ ಹಾರ ಹಾಕಿ ಸ್ವಾಗತಿಸಿದ ಶಾಸಕ ಸುರೇಶ್ ಗೌಡ
ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ನ ಕ್ಷಿಪಣಿ ವಿಭಾಗದ ಮುಖ್ಯಸ್ಥ ಜನರಲ್ ಅಮೀರ್ ಅಲಿ ಹಾಜಿಜಾದೆ ಹಾಗೂ ಸಶಸ್ತ್ರ ಪಡೆಗಳ ಮುಖ್ಯಸ್ಥ ಮೇಜರ್ ಜನರಲ್ ಮೊಹಮ್ಮದ್ ಬಾಘೇರಿ ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಅಧಿಕೃತವಾಗಿ ದೃಢಪಡಿಸಿದೆ.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಇರಾನ್‌ಗೆ ಇಸ್ರೇಲ್ ಜೊತೆ ಪರಮಾಣು ಒಪ್ಪಂದಕ್ಕೆ ಬರುವಂತೆ ಕರೆ ನೀಡಿದ್ದು ಹತ್ಯಾಕಾಂಡ ನಿಲ್ಲಿಸಲು ಇದು ಕೊನೆ ಅವಕಾಶ ಎಂದು ಎಚ್ಚರಿಸಿದ್ದಾರೆ.
One thought on “Israel Iran Conflict | ಇಸ್ರೇಲ್ ರಕ್ಕಸ ವಾಯು ದಾಳಿಗೆ ತತ್ತರಿಸಿದ ಇರಾನ್..!”