Site icon Kannada Sakshi | Kannada News | ಕನ್ನಡ ಸುದ್ದಿ | Latest Karnataka News

Koratagere News | ಕಾಡು ಪ್ರಾಣಿ ಬೇಟೆಯಾಡಲು ಹೋಗಿ ಬೇಟೆಯಾದ ಬೇಟೆಗಾರ

ತುಮಕೂರು | ಕಾಡು ಪ್ರಾಣಿಗಳನ್ನು ಬೇಟೆಯಾಡಲು ವಿದ್ಯುತ್ ತಂತಿ ಹರಿಸಿದ ವೇಳೆ ದುರಂತ ಸಂಭವಿಸಿದ್ದು, ಓರ್ವ ವ್ಯಕ್ತಿ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲಿಯೇ (Koratagere News) ಸಾವಿಗೀಡಾಗಿದ್ದಾನೆ. ಇನ್ನಿಬ್ಬರು ಅಲ್ಪ ಅಂತರದಲ್ಲಿ ಸಾವಿನಿಂದ ಪಾರಾಗಿದ್ದಾರೆ.

ಕೊರಟಗೆರೆ (Koratagere News) ತಾಲೂಕಿನ ಕರೇಚಿಕ್ಕನಹಳ್ಳಿಯಲ್ಲಿ ನಡೆದ ಘಟನೆ

ಈ ಭೀಕರ ಘಟನೆ ಕೊರಟಗೆರೆ (Koratagere News) ತಾಲೂಕಿನ ಕರೇಚಿಕ್ಕನಹಳ್ಳಿ ಬಳಿ ನಡೆದಿದೆ. ಕೋಳಾಲ ಹೋಬಳಿಯ ವಜ್ಜನ ಕುರಿಕೆ ಗ್ರಾಮದ ನಾಗಭೂಷಣ್ ಎಂಬ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇದೇ ಗ್ರಾಮದ  ಸಂಜೀವಯ್ಯನ ಮಗ ಮಾರುತಿ ಮತ್ತು ಮಂಜಣ್ಣನ ಮಗ ಮಾರುತಿ ಎಂಬುವರು ಆಘಾತದ ಕ್ಷಣದಿಂದ ಪಾರಾಗಿ ಬದುಕುಳಿದಿದ್ದಾರೆ.

ಇದನ್ನು ಓದಿ : Road Accident | ಖಾಸಗಿ ಬಸ್ ಮತ್ತು ಕಾರು ನಡುವೆ ಭೀಕರ ಅಪಘಾತ ಸ್ಥಳದಲ್ಲೇ ಇಬ್ಬರ ಸಾವು..!

ಕಾಡು ಪ್ರಾಣಿಗಳನ್ನು ಹಿಡಿಯಲು ಯುವಕರು ಅನಧಿಕೃತವಾಗಿ ತಂತಿಯನ್ನು ನೆಟ್ಟಿದ್ದರು. ಆ ತಂತಿಗೆ 11 ಕೆ.ವಿ. ವಿದ್ಯುತ್ ಲೈನ್‌ನಿಂದ ವಿದ್ಯುತ್ ಹರಿಸಲು ಯತ್ನಿಸಿದಾಗ, ನಾಗಭೂಷಣ್ ತಂತಿಗೆ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಈ ಕುರಿತು ಕೊರಟಗೆರೆ (Koratagere News) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಅನಿಲ್ ಮತ್ತು ಪಿಎಸ್ಐ ತೀರ್ಥೇಶ್ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಹೊಳವನಹಳ್ಳಿ ಬೆಸ್ಕಾಂ ಅಧಿಕಾರಿ ಯೋಗೇಶ್ ಕೂಡ ಸ್ಥಳದಲ್ಲಿ ಇದ್ದು ಪರಿಶೀಲನೆ ನಡೆಸಿದ್ದಾರೆ.

Exit mobile version