Site icon Kannada Sakshi | Kannada News | ಕನ್ನಡ ಸುದ್ದಿ | Latest Karnataka News

Kunigal Underpass | ತುಮಕೂರು ನಗರದಲ್ಲಿ ಕುಣಿಗಲ್‌ ರಸ್ತೆಯ ವಾಹನ ಸಂಚಾರ ಬಂದ್

Kunigal Underpass

ತುಮಕೂರು | ಮಹಾನಗರ ಪಾಲಿಕೆ ವ್ಯಾಪ್ತಿಯ ಕುಣಿಗಲ್ ರೈಲ್ವೆ ಅಂಡರ್‌ಪಾಸ್‌ (Kunigal Underpass) ರಸ್ತೆಯಲ್ಲಿ ದುರಸ್ಥಿ ಕಾಮಗಾರಿ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಮೇ 24 ರಿಂದ ಮುಂದಿನ 30 ದಿನಗಳವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ (District Collector Shubhakalyan) ತಿಳಿಸಿದ್ದಾರೆ. ಇದರಿಂದಾಗಿ, ಕುಣಿಗಲ್ ಅಂಡರ್‌ಪಾಸ್‌ (Kunigal Underpass) ಮಾರ್ಗವಾಗಿ ಹೋಗುತ್ತಿದ್ದ ವಾಹನಗಳು ಈಗ ಬದಲಿ ಮಾರ್ಗಗಳಲ್ಲಿ ಸಂಚರಿಸಬೇಕಾಗುತ್ತದೆ.

(Kunigal Underpass) ಹೊಸ ಸಂಚಾರ ಮಾರ್ಗಗಳು

ಲಕ್ಕಪ್ಪ ಸರ್ಕಲ್ ಇಂದ ಕುಣಿಗಲ್ ಕಡೆಗೆ : ಲಕ್ಕಪ್ಪ ಸರ್ಕಲ್ → ಗುಬ್ಬಿ ರಿಂಗ್‌ರೋಡ್ ಜಂಕ್ಷನ್ → ಕುಣಿಗಲ್ ಜಂಕ್ಷನ್.

ಕುಣಿಗಲ್ ಕಡೆಯಿಂದ ಲಕ್ಕಪ್ಪ ಸರ್ಕಲ್ ಕಡೆಗೆ: ಕುಣಿಗಲ್ ಜಂಕ್ಷನ್ → ಗುಬ್ಬಿ ರಿಂಗ್‌ರೋಡ್ ಜಂಕ್ಷನ್ → ಲಕ್ಕಪ್ಪ ಸರ್ಕಲ್.

ಸದಾಶಿವನಗರ, ಬನಶಂಕರಿ, ಎಸ್‌ಎಸ್‌ಐಟಿ ಕಡೆಗಳಿಂದ ಲಕ್ಕಪ್ಪ ಸರ್ಕಲ್ ಕಡೆಗೆ: ಹೇಮಾವತಿ ಕಛೇರಿ ಮುಂಭಾಗದ ರಸ್ತೆ → ದಾನಾ ಪ್ಯಾಲೇಸ್ → ಗುಬ್ಬಿ ರಿಂಗ್‌ರೋಡ್ ಜಂಕ್ಷನ್ → ಲಕ್ಕಪ್ಪ ಸರ್ಕಲ್.

ಲಕ್ಕಪ್ಪ ಸರ್ಕಲ್ ನಿಂದ ಸದಾಶಿವನಗರ, ಬನಶಂಕರಿ, ಎಸ್‌ಎಸ್‌ಐಟಿ ಕಡೆಗೆ: ಲಕ್ಕಪ್ಪ ಸರ್ಕಲ್ → ಗುಬ್ಬಿ ರಿಂಗ್‌ರೋಡ್ ಜಂಕ್ಷನ್ → ದಾನಾ ಪ್ಯಾಲೇಸ್ ಸಿಗ್ನಲ್ → ಹೇಮಾವತಿ ಕಛೇರಿ ರಸ್ತೆ.

ಕುಣಿಗಲ್ ಅಂಡರ್‌ಪಾಸ್‌ನ (Kunigal Underpass) ಹದಗೆಟ್ಟ ಸ್ಥಿತಿಯ ಕುರಿತು ಹಲವು ಬಾರಿ ಮಾಧ್ಯಮಗಳಲ್ಲಿ ವರದಿ ಮಾಡಿದ ಹಿನ್ನೆಲೆಯಲ್ಲಿ ಈ ದುರಸ್ತಿ ಕಾರ್ಯ ಆರಂಭವಾಗಿದೆ.

ಸಾರ್ವಜನಿಕರು ಈ ಬದಲಾವಣೆಗಳಿಗೆ ಸೂಕ್ತವಾಗಿ ತಕ್ಕಮಟ್ಟಿಗೆ ತಮ್ಮ ಸಂಚಾರ ಯೋಜನೆ ರೂಪಿಸಿಕೊಳ್ಳಬೇಕಾಗಿದೆ.

Exit mobile version