Site icon Kannada Sakshi | Kannada News | ಕನ್ನಡ ಸುದ್ದಿ | Latest Karnataka News

Leopard In Village | ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬಿತ್ತು ಬೋನಿಗೆ..!

ತುಮಕೂರು | ತಿಪಟೂರು ತಾಲ್ಲೂಕಿನ ಅರಣ್ಯ ಪ್ರದೇಶ ವ್ಯಾಪ್ತಿಯ ಅಂಚೆಕೊಪ್ಪಲು ಗ್ರಾಮದಲ್ಲಿ ಗ್ರಾಮಸ್ಥರಿಗೆ ಭೀತಿ ಮೂಡಿಸುತ್ತಿದ್ದ ಚಿರತೆಯೊಂದು (Leopard In Village), ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ. ಭಾನುವಾರ ಮಧ್ಯರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಚಿರತೆ (Leopard In Village) ಸೆರೆ ಹಿಡಿಯುವಂತೆ ಗ್ರಾಮಸ್ಥರಿಂದ ಮನವಿ

ಗ್ರಾಮದ ಕೆರೆಯ ಪಕ್ಕದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದ ಹಿನ್ನೆಲೆ, ಗ್ರಾಮಸ್ಥರು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಕೆರೆ ಅಂಗಳದಲ್ಲಿ ಬೋನು ಇಟ್ಟಿದ್ದು, ಅದರಲ್ಲಿ ಸುಮಾರು ಆರು ವರ್ಷ ಪ್ರಾಯದ ಚಿರತೆಯೊಂದು ಸೆರೆಬಿದ್ದಿದೆ.

ಇದನ್ನು ಓದಿ : Business Agreement | ಬಿಸಿನೆಸ್ ಆರಂಭಕ್ಕೂ ಮುನ್ನ ಅಗ್ರಿಮೆಂಟ್ ಯಾಕೆ ಮಾಡಿಸಬೇಕು..?

ಈ ಚಿರತೆ ಹಸು ಮತ್ತು ನಾಯಿಗಳ ಮೇಲೆ ದಾಳಿ ನಡೆಸುತ್ತಿದ್ದ ಕಾರಣ, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ಚಿರತೆ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಬೋನನ್ನು ಚಿರತೆಯೊಂದಿಗೆ ಪ್ರಾದೇಶಿಕ ಕಚೇರಿಗೆ ಸಾಗಿಸಿದರು. ಕೆಲ ಹೊತ್ತು ಅಲ್ಲಿಟ್ಟ ಬಳಿಕ, ಸಾರ್ವಜನಿಕರು ಚಿರತೆಯನ್ನು ವೀಕ್ಷಿಸಲು ಹರಿದುಬಂದರು.

ಅರಣ್ಯ ಇಲಾಖೆಯ ಮೇಲಾಧಿಕಾರಿಗಳ ನಿರ್ದೇಶನದ ಮೇರೆಗೆ, ಚಿರತೆಯನ್ನು (Leopard In Village) ಸುರಕ್ಷಿತ ಕಾಡಿಗೆ ವಾಪಸ್ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ಗ್ರಾಮಸ್ಥರಿಗೆ ತಾತ್ಕಾಲಿಕವಾಗಿ ಭೀತಿಯಿಂದ ರಕ್ಷಣೆ ಸಿಕ್ಕಂತಾಗಿದೆ.

Exit mobile version