Site icon Kannada Sakshi | Kannada News | ಕನ್ನಡ ಸುದ್ದಿ | Latest Karnataka News

Link Canal | ಲಿಂಕ್ ಕೆನಾಲ್ ವಿರೋಧಿಸಿ ಸರ್ಕಾರದ ವಿರುದ್ಧ ತೊಡೆ ತಟ್ಟಿದ ಸುರೇಶ್ ಗೌಡ

ತುಮಕೂರು |  ಹೇಮಾವತಿ ಲಿಂಕ್ ಕೆನಾಲ್ (Hemavathi Link Canal) ಯೋಜನೆಗೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆಯ ರಾಜಕೀಯ ತೀವ್ರತೆ ಮತ್ತು ರೈತ ಸಂಘಟನೆಗಳ ಚಟುವಟಿಕೆ ಗರಿಷ್ಠ ಮಟ್ಟಕ್ಕೆ ತಲುಪಿದೆ. ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಬಿಜೆಪಿ ಹಾಗೂ ವಿವಿಧ ರೈತಪರ ಸಂಘಟನೆಗಳು ಇಂದು (ಮೇ 31) ಗುಬ್ಬಿ ತಾಲ್ಲೂಕಿನಲ್ಲಿ ಭಾರಿ ಪ್ರತಿಭಟನೆಗೆ ಸಜ್ಜಾಗಿವೆ.

ಇದನ್ನು ಓದಿ : Child Sale | ಮಗುವಿಗೆ ಜನ್ಮ ನೀಡಿದ ಎರಡೇ ದಿನಕ್ಕೆ ಮಾರಾಟ ಮಾಡಿದ ತಾಯಿ

ಬಿಜೆಪಿ ಶಾಸಕ ಸುರೇಶ್ ಗೌಡ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಲಿಂಕ್ ಕೆನಾಲ್ (Link Canal) ಯೋಜನೆಗೆ ಅನುಮೋದನೆ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಡಿಕೆ ಶಿವಕುಮಾರ್ ಮತ್ತು ಗೃಹ ಸಚಿವ ಪರಮೇಶ್ವರ್ ಮುಂದೆ ಈ ಯೋಜನೆಗೆ ವಿರೋಧಿಸಿ ಧರಣಿ ನಡೆಸಿದ್ದೆವು. ಆದರೆ ಸರ್ಕಾರ ರೈತರ ಧ್ವನಿಗೆ ಕಿವಿಗೊಡದೆ, ಕೆಲವು ವ್ಯಕ್ತಿಗಳ ಅನುಕೂಲಕ್ಕಾಗಿ ಯೋಜನೆ ರೂಪಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೂಲ ಯೋಜನೆಯ ದಿಕ್ಕು ತಪ್ಪಿಸಿ ಲಿಂಕ್ ಕೆನಾಲ್ (Link Canal) ಜಾರಿ

ಮೂಲ ಯೋಜನೆಯ ದಿಕ್ಕನ್ನು ತಪ್ಪಿಸಿ ನೀರಿನ ಡೈವರ್ಷನ್ ನಡೆಯುತ್ತಿದೆ, ಇದು ಅವರ ಹಕ್ಕು ನೀರನ್ನು ಕಳೆದುಕೊಳ್ಳುವ ಪರಿಸ್ಥಿತಿಯನ್ನು ಉಂಟುಮಾಡಬಹುದು. ಅವರು ಕುಣಿಗಲ್‌ಗೆ ನೀರು ಕೊಡೋದು ತೊಂದರೆಯಿಲ್ಲ. ಆದರೆ ನಮ್ಮ ಭಾಗದ ನೀರನ್ನು ಕಿತ್ತುಕೊಳ್ಳಲಾಗುತ್ತಿದೆ. ಹೀಗಾಗಿ ಎಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದರು.

ಕುಣಿಗಲ್ ಶಾಸಕ ಡಾ. ರಂಗನಾಥ್ ಅವರು ಎಲ್ಲಾ ಶಾಸಕರು ಯೋಜನೆಗೆ ಒಪ್ಪಿದ್ದಾರೆ ಎಂಬ ಹೇಳಿಕೆಗೆ ಗಟ್ಟಿಯಾಗಿ ಪ್ರತಿಸ್ಪಂದಿಸಿರುವ ಸುರೇಶ್ ಗೌಡ, ಕೆಡಿಪಿ ಸಭೆ ಮತ್ತು ಪರಮೇಶ್ವರ್ ನೇತೃತ್ವದ ಸಮಿತಿಯಲ್ಲಿ ನಾವು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದೇವೆ ಎಂದರು.

ಶಾಂತಿಯುತ ಗಾಂಧೀಯ ಹೋರಾಟ ನಡೆಯಲಿದೆ ಎಂದು ತಿಳಿಸಿರುವ ಸುರೇಶ್ ಗೌಡ, ಸೆಕ್ಷನ್ 144 ಜಾರಿಗೊಳಿಸಿದ್ದರೂ ನಾವು ಹೋರಾಟ ನಿಲ್ಲಿಸುವುದಿಲ್ಲ. ನಮ್ಮ ಹಕ್ಕಿಗಾಗಿ ನಮ್ಮ ಕೊನೆಯ ಉಸಿರುವರೆಗೆ ಹೋರಡುವೆವು. ಅಧಿಕಾರ ಶಾಶ್ವತವಿಲ್ಲ, ರೈತನ ಹಕ್ಕು ಶಾಶ್ವತ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಸಾರ್ವಜನಿಕ ಸಭೆ ಕರೆದು ಸ್ಪಷ್ಟನೆ ನೀಡಬೇಕು, ಹಾಗೂ ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ತುರ್ತು ಸಭೆ ಆಯೋಜಿಸಲು ಆಗ್ರಹಿಸಿದರು.

ಇನ್ನು ರಾಜಕೀಯ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ, ಜಿಲ್ಲೆಯ ಜನತೆಯಾದರೂ ಮುನ್ನೆಚ್ಚರಿಕೆ ವಹಿಸಿ, ಶಾಂತಿ ಮತ್ತು ಸೌಹಾರ್ದತೆ ಕಾಪಾಡಬೇಕಾಗಿದೆ.

Exit mobile version