ತೆಲಂಗಾಣ | ಮುತ್ತಿನ ನಗರಿ ಹೈದರಾಬಾದ್ನ ದಿಲ್ಸುಖ್ ನಗರದಲ್ಲಿರುವ ಪ್ರಸಿದ್ಧ ಬಿಗ್ ಸಿ ಮೊಬೈಲ್ ಶೋರೂಮ್ನಲ್ಲಿ (Mobile Shop Robbery) ಕಳ್ಳನೊಬ್ಬ ಚಾಣಾಕ್ಷತನದಲ್ಲಿ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಜೂನ್ 29ರ ರಾತ್ರಿ ಮತ್ತು 30ರ ಮುಂಜಾನೆ ನಡುವಿನ ವೇಳೆಯಲ್ಲಿ ಈ ಘಟನೆ ನಡೆದಿದೆ. ಕಳ್ಳ ಶೋರೂಮ್ನ ಹಿಂಬದಿ ಗೋಡೆಯುಳ್ಳ ಭಾಗದಲ್ಲಿ ದೊಡ್ಡದಾದ ಕನ್ನವೊಂದನ್ನು ಕೊರೆಯಲಾಗಿದೆ. ಆ ಕನ್ನದ ಮೂಲಕ ಒಳ ನುಗ್ಗಿದ ಕಳ್ಳ, ಸುಮಾರು ಐದು ಲಕ್ಷ ಮೌಲ್ಯದ ಮೊಬೈಲ್ ಫೋನ್ಗಳನ್ನು ಎಗರಿಸಿಕೊಂಡು ಹೋಗಿದ್ದಾನೆ.
ಸಿಕ್ಕ ಸಿಕ್ಕದ್ದನ್ನೆಲ್ಲಾ (Mobile Shop Robbery) ದೋಚದ ಖತರ್ನಾಕ್ ಕಳ್ಳ
ಕಳ್ಳತನದ ಪೂರ್ಣ ದೃಶ್ಯಗಳು ಶೋರೂಮ್ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಕಳ್ಳನ ಚಲನವಲನ, ಮೊಬೈಲ್ ಆಯ್ಕೆ ವಿಧಾನ ಎಲ್ಲವೂ ಸ್ಪಷ್ಟವಾಗಿ ಕಾಣಿಸುತ್ತಿದೆ.
ಕಳ್ಳ ಸಿಕ್ಕದ್ದೆಲ್ಲ ಮೊಬೈಲ್ ದೋಚಿಲ್ಲ. ತನಗೇನು ಬೇಕೋ ಅಷ್ಟರಲ್ಲಿಯೇ ತೃಪ್ತಿ ಪಟ್ಟು, ಆಯ್ದ ಕೆಲವು ಕಪಾಟುಗಳನ್ನು ತೆರೆದು, ಬಿಟ್ಟುಬಿಟ್ಟ ಮೊಬೈಲ್ಗಳ ಮಧ್ಯೆ ಕೆಲವು ಬ್ರಾಂಡ್ ಫೋನ್ಗಳನ್ನು ಎಚ್ಚರಿಕೆಯಿಂದ ತೆಗೆದುಕೊಂಡು ಹೊರಟಿದ್ದಾನೆ. ಘಟನಾ ಸ್ಥಳದಲ್ಲಿ ಕಳ್ಳ ಬಳಸಿದ ಹ್ಯಾಮರ್ ಹಾಗೂ ಗೋಡೆಯ ತುಂಡು ಮಣ್ಣುಗಳು ಪತ್ತೆಯಾಗಿವೆ.
ಇದನ್ನು ಓದಿ : Auto Fare Hike | ಬೆಂಗಳೂರಿಗರಿಗೆ ಬಿಗ್ ಶಾಕ್ ಕೊಟ್ಟ ಆಟೋ ಚಾಲಕರು..!
ಇದಕ್ಕೂ ಮುಂಚೆ, ಜೂನ್ 26ರಂದು ಹೈದರಾಬಾದ್ನ ಚಕ್ರಿಪುರಂನಲ್ಲಿ ಮೂವರು ವ್ಯಕ್ತಿಗಳು ದಂತಚಿಕಿತ್ಸೆಗೆ ಬಂದಿದ್ದರು. ಹಣ ಇಲ್ಲದ ಕಾರಣ ನಕಲಿ ಚಿನ್ನದ ನೆಕ್ಲೇಸ್ ನೀಡಿ ದಂತವೈದ್ಯನಿಗೆ ಮೋಸ ಮಾಡಲು ಯತ್ನಿಸಿದ್ದರು. ಅವರ ಮೂವರನ್ನೂ ಪೊಲೀಸರು ಬಂಧಿಸಿದ್ದರು.

ಸದ್ಯ ಬಿಗ್ ಸಿ ಶೋರೂಮ್ ಕಳ್ಳತನಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಕಳ್ಳನ ಗುರುತು ಪತ್ತೆಹಚ್ಚಲು ಸಿಸಿಟಿವಿ ದೃಶ್ಯ ಆಧಾರವಾಗಿ ಕ್ರಮ ಕೈಗೊಳ್ಳುತ್ತಿದ್ದಾರೆ.
One thought on “Mobile Shop Robbery | ಮೊಬೈಲ್ ಫೋನ್ ಶೋ ರೂಂಗೆ ಖನ್ನ ಹಾಕಿದ ಕಳ್ಳ ಮಾಡಿದ್ದೇನು ಗೊತ್ತಾ..?”