ಬೆಂಗಳೂರು | ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವ ಪೇರೆಡ್ (RCB Parade Tragedy) ಭೀಕರ ದುರಂತಕ್ಕೆ ಕಾರಣವಾಗಿದೆ. ಲಕ್ಷಾಂತರ ಅಭಿಮಾನಿಗಳು ಸೇರುವ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಲವರು ಇನ್ನೂ ಐಸಿಯುಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಈ ದುರ್ಘಟನೆ ಕರ್ನಾಟಕವನ್ನು ಕಂಗಾಲು ಮಾಡಿದ್ದು, ಜಯೋತ್ಸವದ ಸ್ಥಳದಲ್ಲಿ ಸೂತಕದ ಛಾಯೆ ಆವರಿಸಿದೆ.
ಇದನ್ನು ಓದಿ : RCB Champions | ಕನಸು ನನಸು ಮಾಡಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು
ರಾಜ್ಯ ಸರ್ಕಾರದ ವೈಫಲ್ಯದ ಬಗ್ಗೆ ದೇಶದಾದ್ಯಂತ ಟೀಕೆಗಳು ವ್ಯಕ್ತವಾಗುತ್ತಿದ್ದಂತೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕ್ರಮ ಕೈಗೊಂಡಿದ್ದು, ಪ್ರಕರಣದ ಬಗ್ಗೆ ನ್ಯಾಯಾಂಗ ಹಾಗೂ ಸಿಐಡಿ ತನಿಖೆಗೆ ಆದೇಶಿಸಿದೆ. ಈ ನಡುವೆ ತನ್ನ ತಪ್ಪು ಮುಚ್ಚಲು ಮುಂದಾದ ಸರ್ಕಾರ, ಬೆಂಗಳೂರು ಪೊಲೀಸ್ ಕಮಿಷನರ್ ಬಿ. ದಯಾನಂದ್ ಸೇರಿದಂತೆ ಐವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದೆ.
ಕಾಲ್ತುಳಿತ ಘಟನೆಯಿಂದ (RCB Parade Tragedy) ಅಮಾನತು ಆದ ಅಧಿಕಾರಿಗಳು
- ಬಿ. ದಯಾನಂದ್ – ಬೆಂಗಳೂರು ಪೊಲೀಸ್ ಕಮಿಷನರ್
- ಎಚ್.ಟಿ. ಶೇಖರ್ – ಡಿಸಿಪಿ, ಕೇಂದ್ರ ವಿಭಾಗ
- ವಿಕಾಸ್ ಕುಮಾರ್ ವಿಕಾಸ್ – ಹೆಚ್ಚುವರಿ ಪೊಲೀಸ್ ಆಯುಕ್ತ
- ಬಾಲಕೃಷ್ಣ – ಎಸಿಪಿ
- ಗಿರೀಶ್ ಎ.ಕೆ – ಇನ್ಸ್‌ಪೆಕ್ಟರ್, ಕಬ್ಬನ್ ಪಾರ್ಕ್
ಕಾಲ್ತುಳಿತ ಘಟನೆಗೆ (RCB Parade Tragedy) ಸರ್ಕಾರದ ಸ್ಪಷ್ಟನೆ ಏನು..?
ಆರ್‌ಸಿಬಿ ವಿಜಯೋತ್ಸವವನ್ನು ಸರ್ಕಾರವೇ ಆಯೋಜಿಸಿದ್ದು ಎನ್ನಲಾಗುತ್ತಿದ್ದರೂ, ಸರ್ಕಾರ ತನ್ನ ಪ್ರಕಟಣೆಯಲ್ಲಿ ಈ ಕಾರ್ಯಕ್ರಮವನ್ನು ಆರ್‌ಸಿಬಿ ಸಿಇಒ ಜೂನ್ 3ರಂದು ಪ್ರಸ್ತಾವನೆ ನೀಡಿದ್ದಾರೆ ಎಂದು ಹೇಳಿದೆ. ಆದರೆ, ಪೊಲೀಸ್ ಕಮಿಷನರ್ ದಯಾನಂದ್ ಅವರು ಈ ಕಾರ್ಯಕ್ರಮಕ್ಕೆ ಲಿಖಿತವಾಗಿ ಅನುಮತಿ ನಿರಾಕರಿಸದೇ ತಪ್ಪು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ.

ಕಾಲ್ತುಳಿತ ಘಟನೆ (RCB Parade Tragedy) ನ್ಯಾಯಾಂಗ ತನಿಖೆ
ಈ ಪ್ರಕರಣದ ಕುರಿತು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ನೇತೃತ್ವದ ಏಕವ್ಯಕ್ತಿ ಆಯೋಗ ರಚನೆ ಮಾಡಲಾಗಿದೆ. ತನಿಖೆಯನ್ನು 30 ದಿನಗಳಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ.
One thought on “RCB Parade Tragedy | ಆರ್ ಸಿ ಬಿ ವಿಜಯೋತ್ಸವದಲ್ಲಿ ಕಾಲ್ತುಳಿತ : ಪೊಲೀಸ್ ಕಮಿಷನರ್ ಅಮಾನತು”