Site icon Kannada Sakshi | Kannada News | ಕನ್ನಡ ಸುದ್ದಿ | Latest Karnataka News

Theft | ಗರ್ಭಿಣಿ ಯುವತಿ ಜೊತೆ ಸೇರಿ ಕಳ್ಳತನಕ್ಕೆ ಇಳಿದ ಖದೀಮ

ಚಿಕ್ಕಬಳ್ಳಾಪುರ | ಗೌರಿಬಿದನೂರು ತಾಲ್ಲೂಕಿನ ಮುದುಗೆರೆಯ ನಿವಾಸಿ ಗೋವಿಂದರಾಜು ಎಂಬಾತ ಮದುವೆಯಾದರೂ ಮತ್ತೊಬ್ಬ ಯುವತಿಯ ಜತೆ ಅಕ್ರಮ ಸಂಬಂಧ ಹೊಂದಿದ್ದ. ಆಕೆ ಈಗ ಎಂಟು ತಿಂಗಳ ಗರ್ಭಿಣಿಯಾಗಿದ್ದು, ಇಬ್ಬರೂ ಊರಿನಿಂದ ಓಡಿಹೋಗಿದ್ದರು. ಬಾಡಿಗೆ ಮನೆಗೆ ಹಣದ ಅವಶ್ಯಕತೆ ಇದ್ದ ಕಾರಣ, ಗೋವಿಂದರಾಜು ಕಳ್ಳತನದ (Theft) ಮಾರ್ಗವನ್ನು ಆಯ್ದುಕೊಂಡಿದ್ದಾನೆ.

ಅಜ್ಜಿಗೆ ಹಲ್ಲೆ ಮಾಡಿ ಚಿನ್ನದ ಸರ ಕಳ್ಳತನ (Theft) ಮಾಡಿದ್ದ ಆರೋಪಿಗಳು

ಮೊದಲು ಬೈಕ್ ಕಳುವು ಮಾಡಿದ ಗೋವಿಂದರಾಜು, ಕಳ್ಳತನದ (Theft) ಬೈಕ್‌ನಲ್ಲೇ ಯುವತಿಯ ಜತೆ ಕಳವಾರ ಗ್ರಾಮದ ಸಮೀಪದ ನಿರ್ಮಾಣ ಹಂತದ ತೋಟದ ಮನೆಯೊಂದಕ್ಕೆ ತೆರಳಿದ್ದ. ಅಲ್ಲಿದ್ದ ಅಜ್ಜಿ ಅಂಜನಮ್ಮ ಎಂಬವರ ಮೇಲೆ ಹಲ್ಲೆ ನಡೆಸಿ ಬಾಯಿಗೆ ಬಟ್ಟೆ ತುರುಕಿ, ಅವರಿಂದ 50 ಗ್ರಾಂ ಚಿನ್ನದ ಮಾಂಗಲ್ಯ ಸರ ದೋಚಿದ್ದಾರೆ. ಈ ಪ್ರಕರಣ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅವರು ನಂದಿಗಿರಿಧಾಮ ಪೊಲೀಸ್‌ರ ಕೈಗೆ ಬಿದ್ದಿದ್ದಾರೆ.

ಇದನ್ನು ಓದಿ : PBKS vs MI | ಫೈನಲ್ ಗೆ ಲಗ್ಗೆ ಇಟ್ಟು, ಯಾರು ಮಾಡದ ದಾಖಲೆ ಮಾಡಿದ ಪಂಜಾಬ್..!

ಗೋವಿಂದರಾಜು ಮೂಲತಃ ಗಾರೆ ಕೆಲಸ ಮಾಡುತ್ತಿದ್ದ ವ್ಯಕ್ತಿ. ತನ್ನ ಅಕ್ರಮ ಪ್ರೇಮ ಸಂಬಂಧವನ್ನು ಮುಂದುವರೆಸಲು ಮತ್ತು ಗರ್ಭಿಣಿಯಾದ ಯುವತಿಗೆ ಬಾಡಿಗೆ ಮನೆ ಕೊಡಿಸಲು ಹಣವಿಲ್ಲದ ಕಾರಣ ಕಳ್ಳತನಕ್ಕೆ (Theft) ಶರಣಾಗಿದ್ದ. ಅವರ ಯೋಜನೆ ಬಹಿರಂಗವಾಗಿದ್ದು, ಇದೀಗ ಇಬ್ಬರೂ ಪೊಲೀಸರ ಅತಿಥಿಗಳಾಗಿದ್ದಾರೆ.

ಈ ಘಟನೆ ಜನರಲ್ಲಿ ಆಕ್ರೋಶ ಮತ್ತು ವಿಷಾದ ಹುಟ್ಟಿಸಿದೆ. ಪ್ರೇಮ ಸಂಬಂಧಕ್ಕಾಗಿ ಕಾನೂನು ಉಲ್ಲಂಘನೆ ಮಾಡಿದ ಗೋವಿಂದರಾಜು ಹಾಗೂ ಯುವತಿಯ ಈಗಿನ ಪರಿಸ್ಥಿತಿ ದುರಂತದಂತೆ ಪರಿಣಮಿಸಿದೆ. ಕಳ್ಳತನದ ಹಣದಲ್ಲಿ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಕೊನೆಗೆ ಜೈಲು ಬದುಕಿಗೆ ದಾರಿ ತೋರಿದೆ.

Exit mobile version