ತುಮಕೂರು | ನಗರದ ವ್ಯಾಪ್ತಿಯನ್ನು ವಿಸ್ತರಿಸಿ, 14 ಗ್ರಾಮ ಪಂಚಾಯತಿಗಳನ್ನು ನಗರ (Tumkur City) ವ್ಯಾಪ್ತಿಗೆ ಸೇರಿಸುವ ಚಿಂತನೆ ಸರ್ಕಾರ ಹೊಂದಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದ್ದಾರೆ.
ಇದನ್ನು ಓದಿ : Google Gemini Scheduled Actions: ಈಗ ನಿಮ್ಮ ದಿನಚರಿಯನ್ನು automation ಮೂಲಕ ಸುಲಭಗೊಳಿಸಿ
ಮಂಗಳವಾರ ಮೈದಾಳ ರಸ್ತೆಯಲ್ಲಿರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಸ್ನಾತಕೋತ್ತರ ಮಹಿಳಾ ವಿದ್ಯಾರ್ಥಿನಿಲಯಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ, ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಈ ವೇಳೆ, ನಗರ (Tumkur City) ವಿಸ್ತರಣೆ ಕುರಿತು ಪ್ರಸ್ತಾವನೆ ಸಿದ್ಧವಾಗಿದ್ದು, ಹಂತ ಹಂತವಾಗಿ ಈ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತುಮಕೂರು ನಗರಕ್ಕೆ (Tumkur City) ಸೇರ್ಪಡೆಯಿಂದ ಅನೇಕ ಅನುಕೂಲ
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಮನೆಗಳಲ್ಲಿ ಈಗಾಗಲೇ ವಾಸಿಸುತ್ತಿರುವ ಜನರು ಮೂಲಭೂತ ಸೌಕರ್ಯಗಳ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಸಮರ್ಪಕ ಕುಡಿಯುವ ನೀರು, ರಸ್ತೆ ಹಾಗೂ ಒಳಚರಂಡಿ ವ್ಯವಸ್ಥೆಗಳಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ನಗರ ವಿಸ್ತರಣೆಯಿಂದ ಅವರಿಗೆ ಅಗತ್ಯ ಸೌಲಭ್ಯಗಳು ಒದಗಲು ಸಾಧ್ಯವಾಗಲಿದೆ ಎಂದು ಹೇಳಿದರು.

ಬೆಂಗಳೂರು ನಗರದ ವ್ಯಾಪ್ತಿ ಈಗಾಗಲೇ ನೆಲಮಂಗಲವರೆಗೆ ವ್ಯಾಪಿಸಿದ್ದು, ಮುಂದಿನ ದಿನಗಳಲ್ಲಿ ತುಮಕೂರಿಗೂ ವಿಸ್ತರಿಸುವ ಸಾಧ್ಯತೆ ಇದೆ. ರಾಮನಗರವನ್ನು “ಬೆಂಗಳೂರು ದಕ್ಷಿಣ” ಎಂದು ಪರಿಗಣಿಸಲು ಆದೇಶ ನೀಡಿದಂತೆ, ತುಮಕೂರನ್ನು “ಬೆಂಗಳೂರು ಉತ್ತರ” ಎಂದು ಪರಿಗಣಿಸುವ ಚರ್ಚೆಯೂ ನಡೆಯುತ್ತಿದೆ ಎಂದು ತಿಳಿಸಿದರು.
One thought on “Tumkur City | 14 ಗ್ರಾಮ ಪಂಚಾಯತಿಗಳು ತುಮಕೂರು ನಗರ ವ್ಯಾಪ್ತಿಗೆ ಸೇರ್ಪಡೆ”