Site icon Kannada Sakshi | Kannada News | ಕನ್ನಡ ಸುದ್ದಿ | Latest Karnataka News

Illegal Yuria Transport | 30 ಟನ್ ಟೆಕ್ನಿಕಲ್ ಯೂರಿಯಾ ಜಪ್ತಿ, ಕಾರಣವೇನು ಗೊತ್ತಾ..?

ತುಮಕೂರು | ಪರವಾನಗಿ ಇಲ್ಲದೆ ಹಾಗೂ ದೋಷಪೂರಿತ ದಾಖಲೆಗಳೊಂದಿಗೆ ಸಾಗಿಸಲಾಗುತ್ತಿದ್ದ 30 ಟನ್ ಟೆಕ್ನಿಕಲ್ ಯೂರಿಯಾ (Illegal Yuria Transport) ರಸಗೊಬ್ಬರವನ್ನು ಕೃಷಿ ಇಲಾಖೆ ಅಧಿಕಾರಿಗಳು ಮೇ 19ರಂದು ಜಪ್ತಿ ಮಾಡಿದ್ದಾರೆ. ಜಪ್ತಿಯ ಮೌಲ್ಯ ₹7,78,800 ಆಗಿದೆ. ಆರೋಪಿತ ವಾಹನದ ನೋಂದಣಿ ಸಂಖ್ಯೆ RJ-11 GC-3818 ಆಗಿದ್ದು, ನಿಯಮ ಉಲ್ಲಂಘನೆ ಸಂಬಂಧ ಕೃಷಿ ಇಲಾಖೆ ಕ್ರಮ ಕೈಗೊಂಡಿದೆ.

ಟೆಕ್ನಿಕಲ್ ಯೂರಿಯಾ (Illegal Yuria Transport) ಜಪ್ತಿ ಹೇಗೆ ನಡೆದಿದೆ..?

ನಗರದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಕ್ಯಾತ್ಸಂದ್ರ ಜಾಸ್‌ಟೋಲ್ ಬಳಿ ನಡೆದ ಜಾಗೃತಿ ಕಾರ್ಯಕ್ರಮದ ಸಮಯದಲ್ಲಿ ಈ ಸಾಗಾಣಿಕೆ ಬೆಳಕಿಗೆ ಬಂತು. ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಾದ ಕೆ. ಎನ್. ನರಸಿಂಹರಾಜು (ಜಾರಿ-2) ಮತ್ತು ನಾಗರಾಜು (ಸಹಾಯಕ ಆಯುಕ್ತ, ಜಾರಿ) ಈ ಸಾಗಾಣಿಕೆಯನ್ನು ತಪಾಸಣೆಗೆ ಒಳಪಡಿಸಿದರು. ನಂತರ ಮಾಹಿತಿ ಕೃಷಿ ಇಲಾಖೆಗೆ ನೀಡಲಾಗಿತ್ತು.

ಇದನ್ನು ಓದಿ : RCB Parade Tragedy | ಆರ್ ಸಿ ಬಿ ವಿಜಯೋತ್ಸವದಲ್ಲಿ ಕಾಲ್ತುಳಿತ : ಪೊಲೀಸ್ ಕಮಿಷನರ್ ಅಮಾನತು

ಸಹಾಯಕ ಕೃಷಿ ನಿರ್ದೇಶಕ ಪುಟ್ಟರಂಗಪ್ಪ ಅವರ ಮಾಹಿತಿ ಪ್ರಕಾರ, ರಸಗೊಬ್ಬರದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪ್ರಯೋಗಾಲಯದ ವರದಿಯಲ್ಲಿ ಇದು ಕೃಷಿ ಉದ್ದೇಶಕ್ಕಲ್ಲದೆ, ಕೈಗಾರಿಕಾ ಉದ್ದೇಶಕ್ಕೆ ಬಳಸುವ ಯೂರಿಯಾ (Illegal Yuria Transport) ಎಂದು ದೃಢಪಟ್ಟಿದೆ. ಈ ರೀತಿಯ ಯೂರಿಯಾ ಸಾಗಣೆ/ಸರಬರಾಜಿಗೆ ಕೇಂದ್ರ ಕೃಷಿ ಮಂತ್ರಾಲಯದಿಂದ ಪರವಾನಗಿ ಅಗತ್ಯವಿದ್ದು, ಆರೋಪಿತ ವಾಹನದವರ ಬಳಿ ಯಾವುದೇ ಸೂಕ್ತ ಪರವಾನಗಿ ಅಥವಾ ದಾಖಲೆಗಳಿಲ್ಲ.

ಕಾನೂನು ಕ್ರಮಕ್ಕೆ ಮುಂದಾದ ಇಲಾಖೆ

ಅನುಮತಿ ಇಲ್ಲದೆ ಯೂರಿಯಾ ಸಾಗಣೆ, ವಿತರಣೆಗೆ ಶಕ್ತಿ ಚಟುವಟಿಕೆಯನ್ನಾಗಿ ಪರಿಗಣಿಸಲಾಗುತ್ತದೆ. ಇದರ ಹಿನ್ನೆಲೆಯಲ್ಲಿ, ಕೃಷಿ ಇಲಾಖೆ ವಾಹನ ಮತ್ತು ರಸಗೊಬ್ಬರನ್ನು ವಶಕ್ಕೆ ಪಡೆದುಕೊಂಡಿದೆ. ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಜೂನ್ 3ರಂದು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಜಪ್ತಿ ಕಾರ್ಯದಲ್ಲಿ ಭಾಗವಹಿಸಿದ್ದ ಅಧಿಕಾರಿಗಗಳು

Exit mobile version