Site icon Kannada Sakshi | Kannada News | ಕನ್ನಡ ಸುದ್ದಿ | Latest Karnataka News

KN Rajanna | ತುಮಕೂರು ಒಡೆದು ಮೂರು ಜಿಲ್ಲೆ ಆಗುತ್ತೆ – ಕೆ ಎನ್ ರಾಜಣ್ಣ

ತುಮಕೂರು | ಸಹಕಾರ ಸಚಿವ ಕೆ.ಎನ್. ರಾಜಣ್ಣ (KN Rajanna) ಹಲವು ವಿಷಯಗಳ ಬಗ್ಗೆ ತೀವ್ರವಾಗಿ ಮಾತು ಆಡಿದ್ದಾರೆ. ಕ್ರಾಂತಿ ಎಂದರೆ ಕೇವಲ ಕಾಂಗ್ರೆಸ್‌ನಲ್ಲಷ್ಟೇ ಅಲ್ಲ, ಎಲ್ಲಾ ರಂಗದಲ್ಲೂ ನಡೆಯುತ್ತದೆ ಎಂದ ಸಚಿವರು, ಕೇಂದ್ರದ ಬದಲಾವಣೆ ಹಾಗೂ ಮೋದಿಗೆ ಆರ್‌ಎಸ್ಎಸ್ ನ ಪ್ರಿನ್ಸಿಪಲ್ ಅನ್ವಯವಾಗಬಹುದು ಎಂದು ಹೇಳಿದ್ದಾರೆ.

ಕ್ರಾಂತಿ ಎಲ್ಲೆಡೆ ಕೇವಲ ಕಾಂಗ್ರೆಸ್‌ನಲ್ಲಷ್ಟೇ ಅಲ್ಲ – ಕೆ.ಎನ್. ರಾಜಣ್ಣ (KN Rajanna)

ಜಗಜೀವನ್ ರಾಮ್ ಹಸಿರು ಕ್ರಾಂತಿ ಮಾಡಿದರು, ರಷ್ಯಾದ ಕ್ರಾಂತಿಯೂ ಅಕ್ಟೋಬರ್‌ನಲ್ಲಿ. ಕೇಂದ್ರದಲ್ಲೂ ಬದಲಾವಣೆ ಆಗಬಹುದು. ಮೋದಿಗೂ 75 ವರ್ಷದ ಬಳಿಕ ಆರ್‌ಎಸ್ಎಸ್ ನ ನಿಯಮ ಅನ್ವಯವಾಗಬಹುದು ಎಂದಿದ್ದಾರೆ.

ಸಿಎಂ ಬದಲಾವಣೆ ಕುರಿತ ಚರ್ಚೆ

ಸಿಎಂ ಬದಲಾವಣೆ ವಿಚಾರ ಸಂಪೂರ್ಣ ಹೈಕಮಾಂಡ್ ಕತೆ. ನಾನು ಸಿದ್ದರಾಮಯ್ಯ ಅವರಿಂದಲೇ ರಾಜಕಾರಣ ಮಾಡ್ತಿದ್ದೀನಿ. ಅವರು ಇಲ್ಲದಿದ್ದರೆ ರಾಜಕೀಯ ಬಿಡ್ತೀನಿ ಎಂದು ಸ್ಪಷ್ಟಪಡಿಸಿದರು.

ಮಧ್ಯಂತರ ಬದಲಾವಣೆಗಳು

ಹೈಕಮಾಂಡ್, ಸಿಎಂ, ಕೆಪಿಸಿಸಿ ಅಧ್ಯಕ್ಷ ಮೂರು ಪವರ್ ಸೆಂಟರ್. ಸುರ್ಜೆವಾಲ ಜೂನ್ 30ರಂದು ರಾಜ್ಯಕ್ಕೆ ಬರುತ್ತಿದ್ದಾರೆ. ಬದಲಾವಣೆ ಆಗಲಿದೆ, ಆದರೆ ಯಾವಾಗ ಎಂಬುದು ಗೊತ್ತಿಲ್ಲ. ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾಗಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನು ಓದಿ : Crime Stats | ಕರ್ನಾಟಕದಲ್ಲಿ ಅಪರಾಧ ಪ್ರಕರಣಗಳು ಇಳಿಕೆ – ಸಿಎಂ ಸಿದ್ದರಾಮಯ್ಯ

ಮಧುಗಿರಿ ಪ್ರತ್ಯೇಕ ಜಿಲ್ಲೆ ಘೋಷಣೆ

ಈ ಅವಧಿಯಲ್ಲೇ ಮಧುಗಿರಿಯನ್ನು ಪ್ರತ್ಯೇಕ ಜಿಲ್ಲೆ ಮಾಡುತ್ತೇನೆ. ತುಮಕೂರನ್ನು ಮೂರಾಗಿ ತುಮಕೂರು, ತಿಪಟೂರು, ಮಧುಗಿರಿ ಜಿಲ್ಲೆಗಳಾಗಿ ವಿಂಗಡಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

ಷಡಕ್ಷರಿ ವ್ಯಂಗ್ಯ

ಅವರು ಸಿಎಂ ಅಭ್ಯರ್ಥಿ ಅನ್ನೋ ಮಾತು ಕೇಳಿಬಂದಿದೆ. ಯಾರಿಗೂ ಸಹಕಾರಿ ಖಾತೆ ಬೇಕಿಲ್ಲ, ಆದರೆ ಅವರಿಗೆ ಮಾತ್ರ ಬೇಕು ಎಂದು ವ್ಯಂಗ್ಯ ಮಾಡಿದರು.

ಹುಟ್ಟುಹಬ್ಬ ಕಾರ್ಯಕ್ರಮದ ಗೈರುಹಾಜರಿ

ಶ್ರೀನಿವಾಸ ಗೈರು ಇದ್ದಾರೆ. ನಾನೇನು ಕರೆದಿಲ್ಲ, ಅಭಿಮಾನಿ ಬಳಗ ಆಯೋಜಿಸಿದ್ದು. ಅವರ ಅಭಿಮಾನ ನನಗೆ ಇಳಿದಿಲ್ಲವೆಂದು ಅವರನ್ನೇ ಕೇಳಿ ಎಂದು ತಿಳಿಸಿದರು.

Exit mobile version