ತುಮಕೂರು | ತುಮಕೂರಿನ ನೂತನ ವಿಶ್ವವಿದ್ಯಾನಿಲಯ ಜ್ಞಾನಸಿರಿ ಕ್ಯಾಂಪಸ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ (Leopard Attack) ಹಾವಳಿ ಮತ್ತೆ ಭೀತಿ ಮೂಡಿಸಿದೆ. ಕ್ಯಾಂಪಸ್ ಹತ್ತಿರದ ನಿವಾಸಿ ಕಾಂತಣ್ಣ ಎಂಬುವವರಿಗೆ ಸೇರಿದ ಮೇಕೆಗಳಲ್ಲಿ ಒಂದನ್ನು ಚಿರತೆ ಹೊತ್ತೊಯ್ದಿದ್ದು, ವಿದ್ಯಾರ್ಥಿಗಳು ಹಾಗೂ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ದಾಳಿ ಮಾಡಿ ಮೇಕೆ ಹೊತ್ತೊಯ್ದ (Leopard Attack) ಚಿರತೆ
ಕಾಂತಣ್ಣ ಅವರ ತೋಟದ ಮನೆಯಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಮೂರೂ ಮೇಕೆಗಳಲ್ಲಿ ಒಂದನ್ನು ಚಿರತೆ ದಾಳಿ ಮಾಡಿ ಎಳೆದೊಯ್ದು, ಸುಮಾರು 2 ಕಿ.ಮೀ ದೂರದ ಪೊದೆಯೊಳಗೆ ತಿಂದಿರುವುದು ಬೆಳಕಿಗೆ ಬಂದಿದೆ. ಪಶುಪಾಲನಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ : Second Marriage | ಭಾರತದಲ್ಲಿ ಕಾನೂನಿನ ಪ್ರಕಾರ ಎರಡನೇ ಮದುವೆಗೆ ಅವಕಾಶ ಇದ್ಯಾ..?
ವಿಶ್ವವಿದ್ಯಾಲಯ ಹಾಸ್ಟೆಲ್‌ನ ವಿದ್ಯಾರ್ಥಿಗಳು ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ವಾಯುವಿಹಾರಕ್ಕೆ ಹೊರಡುತ್ತಿದ್ದು, ಈಗ ಚಿರತೆ (Leopard Attack) ಭೀತಿಯಿಂದ ಓಡಾಟ ಕಡಿಮೆಯಾಗುತ್ತಿದೆ. ಜ್ಞಾನಸಿರಿ ಕ್ಯಾಂಪಸ್ ನೋಡಲು ಬರುವ ಸಾರ್ವಜನಿಕರು ಕೂಡಾ ಆತಂಕದಲ್ಲಿದ್ದಾರೆ.

ಸ್ಥಳೀಯರು ಮತ್ತು ವಿದ್ಯಾರ್ಥಿಗಳು ಚಿರತೆ ಸೆರೆ ಹಿಡಿಯುವಂತೆ ವನ್ಯಜೀವಿ ಇಲಾಖೆಗೆ ಆಗ್ರಹಿಸಿದ್ದಾರೆ. ಈಗಾಗಲೇ ಈ ಪ್ರದೇಶದಲ್ಲಿ ಚಿರತೆಗಳು ಹಲವಾರು ಬಾರಿ ಕಂಡುಬಂದ ಹಿನ್ನೆಲೆ, ಸೂಕ್ತ ಭದ್ರತಾ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ವ್ಯಕ್ತವಾಗಿದೆ.