Site icon Kannada Sakshi | Kannada News | ಕನ್ನಡ ಸುದ್ದಿ | Latest Karnataka News

Revenue Review | ಕಂದಾಯ ಇಲಾಖೆ ಸಭೆಯಲ್ಲಿ ಅಧಿಕಾರಿಗಳ ಬೆವರಿಳಿಸಿದ ಕೃಷ್ಣಬೈರೇಗೌಡ..!

ತುಮಕೂರು | ನಗರ ಕೇಂದ್ರ ಗ್ರಂಥಾಲಯದಲ್ಲಿ ನಡೆದ ಕಂದಾಯ ಪ್ರಗತಿ ಪರಿಶೀಲನಾ (Revenue Review) ಸಭೆಯಲ್ಲಿ ಸಚಿವ ಕೃಷ್ಣಭೈರೇಗೌಡ ಅವರು ಅಧಿಕಾರಿಗಳು ನೀಡಿದ ಅಸಮ್ಮತ ಮಾಹಿತಿಗೆ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ದಾಖಲೆಗಳಿಲ್ಲದ 522 ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳೆಂದು ಗುರುತಿಸಿರುವುದು ಪ್ರಶಂಸನೀಯವಾದರೂ, ಇನ್ನೂ ಅನೇಕ ಹಟ್ಟಿ ಹಾಗೂ ತಾಂಡಾಗಳಂತಹ ಸ್ಥಳಗಳನ್ನು ಪೂರಕವಾಗಿ ಸೇರಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಂದಾಯ ಇಲಾಖೆ (Revenue Review) ಸಭೆಯಲ್ಲಿ ಕೃಷ್ಣಬೈರೇಗೌಡ ಗರಂ

ಸಾಮಾನ್ಯ ರೈತರಿಗೆ ಹಕ್ಕುಪತ್ರ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದ ಸಚಿವರು, ಭೂಮಿ ತಂತ್ರಾಂಶದಲ್ಲಿ ಬಾಕಿ ಇರುವ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬವನ್ನು ಗಂಭೀರವಾಗಿ ತೆಗೆದುಕೊಂಡರು. ವಿಶೇಷವಾಗಿ ಕುಣಿಗಲ್ ತಾಲ್ಲೂಕಿನಲ್ಲಿ ಹೆಚ್ಚು ಬಾಕಿ ಅರ್ಜಿಗಳಿದ್ದು, ತಹಶೀಲ್ದಾರ್ ರಶ್ಮಿ ಅವರನ್ನು ಉಲ್ಟಾ ವಿಚಾರಣೆ ಮಾಡಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು 7653 ಹಕ್ಕುಪತ್ರಗಳ ಅಂತಿಮ ಅಧಿಸೂಚನೆ ನೀಡಲಾಗಿದೆ ಹಾಗೂ 683 ಹೊಸ ದಾಖಲೆ ರಹಿತ ವಸತಿ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು. ಆಧಾರ್-RTC ಲಿಂಕ್ ಶೇ.86.7% ತಲುಪಿರುವ ವಿಷಯ ಮೆಚ್ಚುಗೆಗೂ ಪಾತ್ರವಾಯಿತು.

ಇದನ್ನು ಓದಿ : Work Stress | ಅತಿಯಾದ ಕೆಲಸದ ಒತ್ತಡದಿಂದ ಹಾರ್ಟ್ ಪ್ರಾಬ್ಲಮ್ ಗ್ಯಾರಂಟಿ..?

ಕಂದಾಯ ಸೇವೆಗಳಿಗೆ (Revenue Review) ವಿಳಂಬವಾಗುತ್ತಿರುವುದು, ಜನರ ತೊಂದರೆಗೂ ಕಾರಣವಾಗುತ್ತಿದೆ ಎಂಬ ನಿಟ್ಟಿನಲ್ಲಿ, ಅಧಿಕಾರಿ/ಸಿಬ್ಬಂದಿಗಳ ಉತ್ಸಾಹ ಕೊರತೆಯನ್ನು ಸಚಿವರು ಖಂಡಿಸಿದರು. ವಂಚನೆ ಪ್ರಕರಣಗಳಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದೂ ಸೂಚನೆ ನೀಡಿದರು.

ಕಂದಾಯ ಸಚಿವ ಕೃಷ್ಣಬೈರೇಗೌಡ ಪ್ರಮುಖ ಸೂಚನೆಗಳು

ಸಭೆಯಲ್ಲಿ ಶಾಸಕರು ಜಿ.ಬಿ. ಜ್ಯೋತಿಗಣೇಶ್, ಬಿ. ಸುರೇಶ್ ಗೌಡ ಸೇರಿದಂತೆ ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು. ಈ ಸಭೆಯು ಕಂದಾಯ ಇಲಾಖೆ (Revenue Review) ಕಾರ್ಯಪದ್ಧತಿಯ ಶುದ್ಧೀಕರಣಕ್ಕೆ ದಾರಿ ಹಾಕಲಿದೆ ಎಂಬ ನಿರೀಕ್ಷೆ ಇದೆ.

Exit mobile version